ETV Bharat / state

ಲಾಕ್​ಡೌನ್​ ಬಿಡುವಿನ ವೇಳೆ ಔಷಧ ಸಸ್ಯವನ ನಿರ್ಮಾಣ.. ಆಕಾಶವಾಣಿ ಉದ್ಯೋಗಿಯ ವಿನೂತನ ಪ್ರಯತ್ನ

ಲಾಕ್​ಡೌನ್ ಬಿಡುವಿನ ವೇಳೆಯಲ್ಲಿ ಆಕಾಶವಾಣಿ ಆವರಣದಲ್ಲಿ ಸಸ್ಯವನ ನಿರ್ಮಿಸಿ ಉದ್ಯೋಗಿಯೊಬ್ಬರು ಯಶಸ್ವಿಯಾಗಿದ್ದಾರೆ. ಇಲ್ಲಿ ಹಲವು ಔಷಧ ಗುಣಗಳುಳ್ಳ ಗಿಡಗಳ ನೆಟ್ಟು ಪೋಷಿಸಿದ್ದಾರೆ.

radio-station-employee-setup-medic-plant-in-his-free-time
ಲಾಕ್​ಡೌನ್​ ಬಿಡುವಿನ ವೇಳೆ ಔಷಧಿ ಸಸ್ಯವನ ನಿರ್ಮಾಣ
author img

By

Published : Aug 26, 2021, 3:58 PM IST

ಮಡಿಕೇರಿ (ಕೊಡಗು): ಸುಂದರ ಪ್ರಕೃತಿ ಸೌಂದರ್ಯದ ನಡುವೆ. ಲೆಮನ್ ಗ್ರಾಸ್, ಅಮೃತಬಳ್ಳಿ, ನೆಲಬೇವು, ಕಸ್ತೂರಿ ಅರಿಶಿನ, ವಿವಿಧ ತಳಿಯ ಶುಂಠಿ ಹೀಗೆ ಸುಮಾರು ನೂರಕ್ಕೂ ಹೆಚ್ಚು ಔಷಧೀಯ ಗಿಡಗಳ ಬೆಳೆಯಲಾಗಿದ್ದು, ರೋಗ ನೀರೋಧಕ ಶಕ್ತಿ ವೃದ್ಧಿಸುವ ಸಸ್ಯಮೂಲ ರಕ್ಷಣೆ ಮಾಡಲಾಗುತ್ತಿದೆ.

ಮಡಿಕೇರಿಯ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಉದ್ಯೋಗಿಯೊಬ್ಬರು ಈ ಔಷಧ ವನ ನಿರ್ಮಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಕೋವಿಡ್ ಲಾಕ್​ಡೌನ್ ಸಂದರ್ಭದಲ್ಲಿ ಈ ಸಸ್ಯವನ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಆಕಾಶವಾಣಿ ಕೇಂದ್ರದ ಉದ್ಯೋಗಿ ವಿಜಯ್ ಅಂಗಡಿ ಎಂಬುವರು ತಮ್ಮ ಬಿಡುವಿನ ವೇಳೆ ಈ ಸಸ್ಯಗಳ ಪೋಷಿಸಿದ್ದು, ಆಕಾಶವಾಣಿ ಕೇಂದ್ರಕ್ಕೂ ಮೆರುಗು ತಂದಿದೆ.

ಕ್​ಡೌನ್​ ಬಿಡುವಿನ ವೇಳೆ ಔಷಧ ಸಸ್ಯವನ ನಿರ್ಮಾಣ

ಕೃಷಿ ಕಾರ್ಯಕ್ರಮ ರೆಕಾರ್ಡಿಂಗ್​​ಗೆ ಹೋದ ಸಂದರ್ಭದಲ್ಲಿ ವಿವಿಧ ಬಗೆಯ ಔಷಧೀಯ ಗಿಡಗಳನ್ನು ಹುಡುಕಿ ತಂದು ಇಲ್ಲಿ ಬೆಳೆಸಿದ್ದಾರೆ. ಔಷಧೀಯ ಸಸ್ಯಗಳೊಂದಿಗೆ ಹಣ್ಣಿನ ಗಿಡ, ಅಲಂಕಾರಿಕಾ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.

ವಿಶೇಷವೆಂದರೆ ಕೃಷಿಯಲ್ಲಿ ವಿಶೇಷ ಒಲವು ಹೊಂದಿದ್ದ ಇವರು, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಕೃಷಿ ವಿಷಯದಲ್ಲೇ ಪೂರೈಸಿದ್ದಾರೆ. ನಿತ್ಯ ಕೆಲಸದ ಬಿಡುವಿನ ವೇಳೆಯಲ್ಲಿ ಕೈತೋಟ ನಿರ್ವಹಣೆಗೆ ಮೀಸಲಿಡುತ್ತಾರೆ. ಅಲ್ಲದೇ ಇದೆ ಗಿಡಗಳಿಂದ ತಯಾರಿಸಿದ ತಯಾರಿಸಿದ ಪಾನೀಯ, ಆಹಾರವನ್ನು ಸೇವಿಸುತ್ತಾರೆ. ಆರೋಗ್ಯದಲ್ಲಿ ಏರುಪೇರಾದಾಗ ಸುತ್ತಮುತ್ತ ಸಿಗುವ ಗಿಡಗಂಟಿಗಳಿಂದ ಔಷಧ ಸಿದ್ಧಪಡಿಸಿ ಸೇವಿಸುತ್ತಾರಂತೆ.

ಓದಿ: ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಸ್ಥಾನ 35 ಲಕ್ಷ ರೂ. ಗೆ ಹರಾಜು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.