ETV Bharat / state

ಅಂಬೇಡ್ಕರ್‌ ಹಿಂದೂ-ಮುಸ್ಲಿಂ ಒಟ್ಟಾಗಿರಲು ಸಾಧ್ಯವಿಲ್ಲ ಎಂದಿದ್ದರು.. ಭಗವದ್ಗೀತೆ ಪಠ್ಯದಲ್ಲಿ ಅಳವಡಿಕೆ ಸ್ವಾಗತಿಸಿದ ಪ್ರತಾಪ್ ಸಿಂಹ - ಸಂಸದ ಪ್ರತಾಪ್ ಸಿಂಹ

ಮೈಸೂರಿನಿಂದ ಕುಶಾಲನಗರದವರೆಗೆ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ 4 ಪಥದ ಹೆದ್ದಾರಿ ವಿಸ್ತರಣೆ ಮಾಡುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಸ್ಪಷ್ಟಪಡಿಸಿದ್ದಾರೆ..

ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
author img

By

Published : Mar 19, 2022, 1:01 PM IST

ಮಡಿಕೇರಿ : ಭಗವದ್ಗೀತೆ ಬೇರೆ ಧಾರ್ಮಿಕ ಗ್ರಂಥಗಳಂತೆ ಅಲ್ಲ. ಇದು ಜೀವನದ ಸಾರವನ್ನ ತಿಳಿಸುವ ಮಹಾನ್ ಗ್ರಂಥ. ನೈತಿಕ ವಿಚಾರಗಳಿರುವ ಭಗವದ್ಗೀತೆಯನ್ನ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಿಂದ ಕುಶಾಲನಗರದವರೆಗೆ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ 4 ಪಥದ ಹೆದ್ದಾರಿ ವಿಸ್ತರಣೆ ಮಾಡುತ್ತಿಲ್ಲ. ಕುಶಾಲನಗರದಿಂದ ಸಂಪಾಜೆಯವರೆಗೆ ಭೂಕುಸಿತ, ಪರಿಸರ ರಕ್ಷಣೆ ಮನದಲ್ಲಿರಿಸಿಕೊಂಡು ಹೆದ್ದಾರಿ ವಿಸ್ತರಣೆ ಮಾಡಲಾಗುತ್ತಿಲ್ಲ. ಸುಂಟಿಕೊಪ್ಪ ಮತ್ತು ಮಡಿಕೇರಿಯಲ್ಲಿ ವಾಹನ ದಟ್ಟಣೆ ಗಮನಿಸಿ ಬೈಪಾಸ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ

ಸಂಪಾಜೆ-ಜೋಡುಪಾಲ ನಡುವೆ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತ ತಡೆಯಲು 2 ಹೊಸ ಸೇತುವೆ, 22 ತಡೆಗೋಡೆಗಳನ್ನು 98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಕಾಡಾನೆ ತಡೆಗೆ ಶಾಸಕ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುಜಾಕು ಶಾಲಪ್ಪ ಪ್ರಯತ್ನದಿಂದ ರಾಜ್ಯ ಸರ್ಕಾರ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಟ್ಟಿದೆ.

ರೈಲ್ವೆ ಕಂಬಿಗಳ ಬೇಲಿ ಯೋಜನೆ ಜಾರಿಗೊಳಿಸಲಾಗುವುದು. ಕಾಡಾನೆ ದಾಂಧಲೆ ಹೆಚ್ಚಿರುವ ವಿರಾಜಪೇಟೆ ಕ್ಷೇತ್ರದ ಜನತೆಗೆ ಈ ಯೋಜನೆ ಹೆಚ್ಚು ನೆರವಾಗಲಿದೆ. ಕೊಡವ ಜನಾಂಗದ ಅಭಿವೃದ್ಧಿಗಾಗಿ 10 ಕೋಟಿ ರೂ. ನೀಡಲಾಗಿದೆ ಎಂದರು.

ದೇಶದ ಸಂವಿಧಾನಕ್ಕಿಂತ ಧರ್ಮವೇ ದೊಡ್ಡದು ಎಂಬ ವರ್ತನೆ ಖಂಡನೀಯ. ಈ ಮೊದಲೇ ಅಂಬೇಡ್ಕರ್ ಅವರು ಹಿಂದೂ-ಮುಸ್ಲಿಂ ಭಾರತದಲ್ಲಿ ಒಟ್ಟಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈಗ ಆ ಮಾತಿನ ಅರ್ಥ ಜನ ಸಾಮಾನ್ಯರಿಗೂ ತಿಳಿಯುತ್ತಿದೆ. ನಾವು ಬಾಳುತ್ತಿರುವ ದೇಶದ ಸಂವಿಧಾನವನ್ನು ಗೌರವಿಸುವುದು ಮುಖ್ಯ ಎಂದರು.

ಇದನ್ನೂ ಓದಿ: ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ: ಹಾಡಿನ ಮೂಲಕ ಅಪ್ಪು ನೆನೆದು ಭಾವುಕರಾದ ವೃತ್ತ ನಿರೀಕ್ಷಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.