ETV Bharat / state

ಲಂಚ ನೀಡುವಂತೆ ಲಾರಿ ಚಾಲಕನಿಗೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್​ಸ್ಟೆಬಲ್​ - ಲಂಚ ನೀಡುವಂತೆ ಬೇಡಿಕೆ

ಮಣ್ಣು ಸಾಗಿಸುತ್ತಿದ್ದ ಲಾರಿ ಚಾಲಕನಿಗೆ ಪೊಲೀಸ್​ ಕಾನ್​ಸ್ಟೆಬಲ್​ ಸಜನ್ ಅವರು​ 30 ಸಾವಿರ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

police constable caught by lokayukta while taking bribe
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್​ಸ್ಟೆಬಲ್​
author img

By

Published : Feb 3, 2023, 8:04 PM IST

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್​ಸ್ಟೆಬಲ್​

ಕೊಡಗು: ಲಂಚ ಪಡೆಯುತ್ತಿದ್ದಾಗ ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಕಾನ್​ಸ್ಟೆಬಲ್​ ಸಜನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಣ್ಣು ಸಾಗಿಸುತ್ತಿದ್ದ ಲಾರಿ ತಡೆದ ಸಜನ್​​ ಕೇಸ್​ ಹಾಕದೆ, ಲಾರಿ ಚಾಲಕ​ ಮಡಿಕೇರಿ ತಾಲೂಕಿನ ಬಿಳಿಗೇರಿಯ ಕಿರಣ್​ಗೆ, ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದೀರಾ, ಕೇಸ್​ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಕೇಸ್​ ಹಾಕುತ್ತಾರೆ ಎನ್ನುವ ಭಯದಲ್ಲಿ ಪೊಲೀಸ್​ ಬಳಿ ಲಾರಿ ಚಾಲಕ ರಿಕ್ವೆಸ್ಟ್​ ಮಾಡಿಕೊಂಡಾಗ ಮತ್ತಷ್ಟು ಭಯಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮೂವತ್ತು ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟು, ಹಣ ಕೊಟ್ಟರೆ ಬಿಡುತ್ತೇನೆ, ಇಲ್ಲವೆಂದರೆ ಕೇಸ್ ಹಾಕಿ ಲಾರಿ ಸೀಜ್​ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾಗಿ ಆರೋಪಿಸಲಾಗಿದೆ.

ಆ ಸಂದರ್ಭದಲ್ಲಿ ಕಾನ್​ಸ್ಟೆಬಲ್​ ಬೇಡಿಕೆ ಇಟ್ಟಷ್ಟು ಹಣ ತನ್ನ ಬಳಿ ಇಲ್ಲದ ಕಾರಣ, ಆ ಕ್ಷಣಕ್ಕೆ ಅಷ್ಟು ಹೊಂದಿಸಲಾಗದೆ, ಚಾಲಕ ಕಿರಣ್‌​ ತನ್ನ ಬಳಿ ಇದ್ದ ನಾಲ್ಕು ಸಾವಿರ ರೂ ಹಾಗೂ ಇನ್ನೂ 3,500 ರೂ ಸಾಲ ಮಾಡಿ ಹೊಂದಿಸಿ ಕಾನ್​ಸ್ಟೆಬಲ್​ಗೆ ಕೊಟ್ಟಿದ್ದರು. ಬಾಕಿ ಇರುವ ಹಣವನ್ನು ಗುರುವಾರವೇ ನೀಡಬೇಕು ಎಂದು ಕಾನ್​ಸ್ಟೆಬಲ್​ ಎಚ್ಚರಿಕೆ ನೀಡಿದ್ದರು. ಕಿರಣ್​ ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಹೇಳಿ, 10 ಸಾವಿರ ರೂ ನೀಡುವುದಾಗಿ ಒಪ್ಪಿದ್ದರು. ಪೊಲೀಸರ ವರ್ತನೆಗೆ ಬೇಸತ್ತ ಕಿರಣ್​ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಕಿರಣ್​​ ಉಳಿದ ಹತ್ತು ಸಾವಿರ ರೂ ಹಣವನ್ನು ನೀಡುವುದಾಗಿ ಹೇಳಿ ಪೊಲೀಸ್​ ಕಾನ್​ಸ್ಟೆಬಲ್​ ಸಜನ್​ಗೆ ಬೀಡ ಅಂಗಡಿ ಬಳಿ ಬರಲು ಹೇಳಿದ್ದಾರೆ. ಅಲ್ಲಿ ಲಾರಿ ಡ್ರೈವರ್​ನಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸ್​ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸ್​ ಮಡಿಕೇರಿ ಗ್ರಾಮಾಂತರ ಪೊಲೀಸ್​ ಠಾಣೆ ಕಾನ್​ಸ್ಟೆಬಲ್​ ಸಜನ್​ ಅವರನ್ನು ಹಣದ ಸಮೇತ ಬಂಧಿಸಿದ್ದಾರೆ.

ಇದನ್ನೂ ಓದಿ: ಪರಿಹಾರ ಹಣ ಬಿಡುಗಡೆಗೆ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.