ETV Bharat / state

ಮಳೆಗಾಲ ಬಂದ್ರೆ 'ಮನೆ ಖಾಲಿ ಮಾಡಿ' ಎಂಬ ನೋಟಿಸ್​.. ಮನವಿಗಿಲ್ಲ ಸ್ಪಂದನೆ, ತಪ್ಪದ ನರಕಯಾತನೆ - People in Kodagu are in trouble due to heavy rain

ಜಿಲ್ಲೆಯ ಕರಡಿಗೋಡು, ಬೆಟ್ಟಡದಕಾಡು, ಕುಂಬಾರಗುಂಡಿ ಹಾಗೂ ಗುಹ್ಯ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಿದೆ. 5 ತಿಂಗಳ ಕಾಲ ಮನೆ ಬಿಟ್ಟು ಹೋಗುವಂತೆ ನೋಟಿಸ್​​ ನೀಡಲಾಗಿದೆ.

notice to people for vacate place for due to heavy rain

author img

By

Published : Jul 11, 2022, 7:24 PM IST

Updated : Jul 11, 2022, 7:56 PM IST

ಕೊಡಗು: ಮಳೆಗಾಲ ಬಂದ್ರೆ ಸಾಕು, ಇಲ್ಲಿನ ಜನರಿಗೆ ಜೀವವನ್ನೇ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ. ಮಳೆ ಹೆಚ್ಚಾದ್ರಂತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮತ್ತಷ್ಟು ಅವಾಂತರ ಸೃಷ್ಟಿಸುತ್ತೆ. ಇದರ ನಡುವೆ ಇಲ್ಲಿನ ಜನರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.

ಜಿಲ್ಲೆಯ ಕರಡಿಗೋಡು, ಬೆಟ್ಟಡದಕಾಡು, ಕುಂಬಾರಗುಂಡಿ ಹಾಗೂ ಗುಹ್ಯ ಗ್ರಾಮಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಮಳೆ ಹೆಚ್ಚಾದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರಿನ ಅತಂಕ‌ ಎದುರಾಗುತ್ತೆ. ನದಿಯ ನೀರು ಮನೆಗಳಿಗೆ ನುಗ್ಗುವ ಆತಂಕ ಇರೋದ್ರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ 5 ತಿಂಗಳ ಕಾಲ ಮನೆ ಬಿಟ್ಟು ತೆರಳುವಂತೆ ಕರಡಿಗೋಡು, ಗುಹ್ಯ, ಬೆಟ್ಟದಕಾಡು ಜನತೆಯ ನೂರಾರು ಮನೆಗಳಿಗೆ ನೋಟಿಸ್ ನೀಡಿದೆ.

ಮಳೆಗಾಲ ಬಂದ್ರೆ 'ಮನೆ ಖಾಲಿ ಮಾಡಿ' ಎಂಬ ನೋಟಿಸ್

ಕೊಡಗು ಜಿಲ್ಲೆಯ ಈ ಮೂರು ನಾಲ್ಕು ಗ್ರಾಮಗಳಿಗೆ ಮಳೆಗಾಲದಲ್ಲಿ ಇದೇ ದುಸ್ಥಿತಿ. ಪ್ರತಿವರ್ಷ ಬರೋದು ಮನೆಗಳಿಗೆ ನೋಟಿಸ್ ನೀಡೋದು. ನಮಗೆ ಇಲ್ಲಿಯವರೆಗೆ ಯಾವುದೇ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ನಾವು ಕಳೆದ 20-30 ವರ್ಷಗಳಿಂದ ಇಲ್ಲೇ ವಾಸವಾಗಿದ್ದೇವೆ. ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಮಳೆಗಾಲದಲ್ಲಿ ಎಲ್ಲರಿಗೂ ಕೂಡ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: ಅಂತಿಮ ಆದೇಶದವರೆಗೂ ಅನರ್ಹತೆ ಬಗ್ಗೆ ಸ್ಪೀಕರ್​ ಕ್ರಮ ತೆಗೆದುಕೊಳ್ಳುವಂತಿಲ್ಲ: ಸುಪ್ರೀಂ ತೀರ್ಪು, ಶಿವಸೇನೆ ಸ್ವಾಗತ

Last Updated : Jul 11, 2022, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.