ETV Bharat / state

ಭರವಸೆಗಳ ಬದಲಿಗೆ ಬದುಕು ಕಟ್ಟಿಕೊಡಿ: ನಿಖಿಲ್ ಕುಮಾರಸ್ವಾಮಿ

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಭೀತಿಯ ಸ್ಥಳಗಳಿಗೆ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿ ಭೇಟಿ ನೀಡಿ, ನಿರಾಶ್ರಿತರ ಕಷ್ಟಗಳನ್ನು ಆಲಿಸಿದರು.

flood-prone place in kodagu
ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ
author img

By

Published : Aug 12, 2020, 4:40 PM IST

ಕೊಡಗು (ಕರಡಿಗೋಡು): ಸಂತ್ರಸ್ತರ ಪರವಾಗಿ ಮುಂದಿನ ದಿನಗಳಲ್ಲಿ ಧ್ವನಿ ಎತ್ತುತ್ತೇನೆ. ಈ ನಿರಾಶ್ರಿತರಿಗೆ ಭರವಸೆಯ ಬದಲಿಗೆ ಬದುಕು ಕಟ್ಟಿಕೊಡಬೇಕು. ಸರ್ಕಾರ ಸಂಕಷ್ಟದ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿದ ಕುಶಾಲನಗರದ ಕುವೆಂಪು, ಸಾಯಿ ಬಡಾವಣೆ, ತೆಪ್ಪದಕಂಡಿ, ನಂಜರಾಯಪಟ್ಟಣ, ನೆಲ್ಯಹುದಿಕೇರಿ, ಕುಂಬಾರಗುಂಡಿ ಹಾಗೂ ನೆಲ್ಯಹುದಿಕೇರಿ ಪ್ರದೇಶಗಳಿಗೆ ಅವರು ಭೇಟಿ ನೀಡಿದರು.

'ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ಯಾರೇ ಸರ್ಕಾರ ನಡೆಸಲಿ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಬೇಕು. ಸರ್ಕಾರದ ಘೋಷಣೆ ಹಾಗೂ ಭರವಸೆಗಳು ಹಾಗೆಯೇ ಉಳಿದುಕೊಳ್ಳಬಾರದು' ಎಂದು ಪರೋಕ್ಷವಾಗಿ ಆಡಳಿತ ಪಕ್ಷವನ್ನು ಕುಟುಕಿದರು.

'ವಿಪರೀತ ಮಳೆ ಹಾಗೂ ಭೂಕುಸಿತದಿಂದ ಜಿಲ್ಲೆಯ ಜನತೆ ನಲುಗಿದ್ದಾರೆ. ಶಾಶ್ವತ ಪರಿಹಾರವನ್ನು ಕೇಳುತ್ತಿದ್ದಾರೆ. ಇಲ್ಲಿನ ಜನರು ಹಣಕ್ಕೆ ಆಸೆ ಪಡುತ್ತಿಲ್ಲ. ತಾತ್ಕಾಲಿಕ ಪರಿಹಾರವನ್ನು ಯಾರೂ ನಿರೀಕ್ಷಿಸುತ್ತಿಲ್ಲ.‌ 2018ರ ಸಮ್ಮಿಶ್ರ ಸರ್ಕಾರದಲ್ಲಿ 9.85 ಲಕ್ಷ ರೂ ವೆಚ್ಚದಲ್ಲಿ ನಿರಾಶ್ರಿತರಿಗೆ ಒಂದು ಸಾವಿರ ಮನೆಗಳನ್ನು ಕಟ್ಟಿಕೊಡಲಾಗಿತ್ತು. ಮನೆ ಕಳೆದುಕೊಂಡವರಿಗೆ ತಕ್ಷಣವೇ 1 ಲಕ್ಷ ಪರಿಹಾರ, ಮನೆಯ ವಸ್ತುಗಳು ಹಾಳಾಗಿದ್ದರೆ ಸುಮಾರು 50 ಸಾವಿರ ರೂ, ಹಾಗೆಯೇ ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಕೆಲವು ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಳ್ಳುವವರೆಗೆ 10 ಸಾವಿರ ರೂ ಬಾಡಿಗೆ ಕೊಡಲಾಗಿತ್ತು' ಎಂದು ತಿಳಿಸಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.