ಮಡಿಕೇರಿ(ಕೊಡಗು): ಬೆಟ್ಟ ಗುಡ್ಡಗಳಿಂದ ಕೂಡಿದ ಕಾಫಿ ಬೀಡು ಕೊಡಗು ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತಿಯಲ್ಲಿ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
ಅಮ್ಮತಿ ಭಾಗದಲ್ಲಿ ಗಿರಿಜನರು ಕಾಫಿ ತೋಟದ ಲೈನ್ ಮನೆಯಲ್ಲಿ, ಕಾಡುಗಳಲ್ಲಿ ಹೆಚ್ಚಾಗಿ ವಾಸಮಾಡುತ್ತಾರೆ. ಇಲ್ಲಿಯ ಜನರಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ, ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದರು. ಆಸ್ಪತ್ರೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನೂಕೂಲವಾಗಿದೆ.
ಮಕ್ಕಳಿಗೆ, ಗರ್ಭಿಣಿಯರಿಗೆ ಆರೋಗ್ಯದ ಸಮಸ್ಯೆ ಉಂಟಾದರೆ ಅಥವಾ ಕಾಡು ಪ್ರಾಣಿಗಳ ದಾಳಿ ಸಂಭವಿಸಿದರೇ ಹತ್ತಿರದಲ್ಲಿ ತಕ್ಷಣ ಚಿಕಿತ್ಸೆ ದೊರೆಯಲಿದೆ. ಮೊದಲಿಗೆ ಆರೋಗ್ಯದ ಸಮಸ್ಯೆ ಕಾಣಿಸಿದಲ್ಲಿ ಮಡಿಕೇರಿ, ಮೈಸೂರು, ಮಂಗಳೂರಿಗೆ ಹೋಗಬೇಕಾಗುತ್ತಿತ್ತು. ಆದರೇ ಈಗ ಹತ್ತಿರದಲ್ಲೇ ಈ ಆಸ್ಪತ್ರೆ ಇರುವ ಕಾರಣ ಸಿದ್ದಾಪುರ, ಅಮ್ಮತಿ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಭಾಗದ ಜನರಿಗೆ ಸಹಕಾರಿಯಾಗಲಿದೆ. ಇನ್ನು, ಎಲ್ಲಾ ಸಮಯದಲ್ಲೂ ಆಂಬ್ಯುಲೆನ್ಸ್ ಸೇವೆ ದೊರೆಯಲಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
ಈ ಸುಸಜ್ಜಿತ ಆಸ್ಪತ್ರೆಯಲ್ಲಿ 48 ಹಾಸಿಗೆ ವ್ಯವಸ್ಥೆ ಇದ್ದು, ಶಸ್ತ್ರಚಿಕಿತ್ಸೆ, ಇಸಿಜಿ, ಡೆಂಟಲ್, ಆಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಯಾಲಿಸಿಸ್, ಫಿಸಿಯೋ ಥೆರಪಿ ಚಿಕಿತ್ಸೆ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್‌ನಿಂದ ದೇಶದ ಪ್ರಗತಿಗೆ ಇನ್ನಷ್ಟು ಕೊಡುಗೆ: ಪ್ರಧಾನಿ ಮೋದಿ