ETV Bharat / state

ಲಾಡ್ಜ್​​ನಲ್ಲಿ ವಿಷ ಸೇವಿಸಿ ತಾಯಿ ಆತ್ಮಹತ್ಯೆ.. ಮಗ ಆಸ್ಪತ್ರೆ ಪಾಲು: ಕಾರಣ ಮಾತ್ರ ನಿಗೂಢ! - ಕೊಡಗು ಸುದ್ದಿ

ಲಾಡ್ಜ್​​ನಲ್ಲಿ ತಂಗಿದ್ದ ತಾಯಿ - ಮಗ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ತಾಯಿ ಸಾವನಪ್ಪಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

mother-commit-suicide-in-lodge-son-in-serious-condition
ಲಾಡ್ಜ್​​ನಲ್ಲಿ ವಿಷ ಸೇವಿಸಿ ತಾಯಿ ಆತ್ಮಹತ್ಯೆ
author img

By

Published : Apr 9, 2021, 9:45 PM IST

ಕೊಡಗು: ಲಾಡ್ಜ್​​​ನಲ್ಲಿ ತಾಯಿ ಮಗ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿ ಅಸುನೀಗಿದರೆ ಮಗ ಆಸ್ಪತ್ರೆ ಪಾಲಾಗಿರುವ ಘಟನೆ ನಡೆದಿದೆ.

ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಪೂಜಾರಿ ಆರ್ಕೇಡ್​​ನಲ್ಲಿರುವ ಲಾಡ್ಜ್​​​ನಲ್ಲಿ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ಮಹಿಳೆ ಪ್ರಭಾವತಿ ಸಿ.ಎಸ್.(70) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ತಾಯಿ ಜೊತೆ ವಿಷ ಸೇವಿಸಿದ್ದ ಮಗ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.

ಏ.7ರಂದು ಮಧ್ಯಾಹ್ನದ ವೇಳೆ ಲಾಡ್ಜ್​​​ಗೆ ಆಗಮಿಸಿ, ತೋಲಂಡ ಸುಭಾಶ್ ಚಂಗಪ್ಪ ಎಂಬ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದರು. ಶುಕ್ರವಾರ ಸಂಜೆಯ ವೇಳೆ
ಲಾಡ್ಜ್​​​​​ನಲ್ಲಿ ವಿಪರೀತ ಕೀಟನಾಶಕದ ವಾಸನೆ ಬಂದ ಹಿನ್ನೆಲೆ ಸಿಬ್ಬಂದಿ ಬಾಗಿಲಿನ ಬಳಿ ತೆರಳಿ ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ಸಮ್ಮುಖದಲ್ಲೇ ಕೊಠಡಿ ತೆರದಿದ್ದಾರೆ. ಈ ವೇಳೆಗಾಗಲೇ ತಾಯಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದರೆ ಮಗ ನರಳಾಡುತ್ತಿದ್ದ. ತಕ್ಷಣವೇ ಆತನನ್ನು ಹತ್ತಿರದ ಗೋಣಿಕೊಪ್ಪ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಸ್-ಬೈಕ್ ಅಪಘಾತ: ವ್ಯಕ್ತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.