ETV Bharat / state

ಸುಮಲತಾಗೆ ಬೆಂಬಲವಾಗಿ ನಾನು ನಿಲ್ತೇನೆ : ಬಿಜೆಪಿ ಎಂಎಲ್​ಸಿ ಹೆಚ್ ವಿಶ್ವನಾಥ್​​

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಗಣಿಗಾರಿಕೆ ತಡೆಯಬೇಕು. ಜೆಡಿಎಸ್ ರೈತ ಪರವಾಗಿರುವ ಪಕ್ಷ. ರೈತರ ಪರವಾಗಿಯೇ ಇರಬೇಕು. ಅಣೆಕಟ್ಟು ವಿಚಾರ ಬಿಟ್ಟು ವೈಯಕ್ತಿಕವಾಗಿ ಹೋಗ್ತಿದೆ. ಸುಮಲತಾ ಅವರನ್ನ ಜನ ಆಯ್ಕೆ ಮಾಡಿದ್ದಾರೆ. ಅದಕ್ಕೆ ಜನಪರ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ನವರು ವೈಯಕ್ತಿಕವಾಗಿ ಮಾತಾನಾಡೋದು ಸರಿಯಲ್ಲ..

MLC H Vishwanath
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್
author img

By

Published : Jul 16, 2021, 9:54 PM IST

ಕೊಡಗು : ಕೆಆರ್‌ಎಸ್ ಕನ್ನಡಿಗರ ಆಸ್ತಿ. ಕನ್ನಡಿಗರ ಗರ್ವ. ಹಲವಾರು ವರ್ಷಗಳಿಂದ ಜಲಾಶಯದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಣೆಕಟ್ಟೆಗೆ ಅಪಾಯವಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಹ ಈಗ ಆತಂಕ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ನಡೆದ ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಒದಗಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಸದೆ ಸುಮಲತಾ ಬಳಿಕ ಈಗ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರದಿ..

ಎಲ್ಲಾ ಪಕ್ಷದವರು ಅಕ್ರಮದಲ್ಲಿದ್ದಾರೆ. ಶಾಸಕರೇ ಅಕ್ರಮ ಮಾಡ್ತಿದ್ರೆ ತಡೆಗಟ್ಟುವವರ್ಯಾರು?. ಸರ್ಕಾರ ಅಕ್ರಮದ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಕೆಆರ್‌ಎಸ್ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದ್ದು, ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆಯನ್ನು ಮುಚ್ಚಲು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸುಮಲತಾ ಬೆಂಬಲವಾಗಿ ನಾನು ನಿಲ್ತೇನೆ : ಕೆಆರ್‌ಎಸ್ ಅಣೆಕಟ್ಟೆಯಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಅಣೆಕಟ್ಟೆಗೆ ತೊಂದರೆಯಾಗದಂತೆ ತಡೆಯಲು ಅಕ್ರಮ ಗಣಿಗಾರಿಕೆ ಮುಚ್ಚಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ಅವರಿಗೆ ಬೆಂಬಲವಾಗಿ ನಾನು ನಿಲ್ತೇನೆ. ಕುಮಾರಸ್ವಾಮಿ ಯಾಕೆ ಸುಮಲತಾ ವಿರುದ್ಧ ಮಾತಾಡ್ತಾರೋ ಗೊತ್ತಿಲ್ಲ.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಗಣಿಗಾರಿಕೆ ತಡೆಯಬೇಕು. ಜೆಡಿಎಸ್ ರೈತ ಪರವಾಗಿರುವ ಪಕ್ಷ. ರೈತರ ಪರವಾಗಿಯೇ ಇರಬೇಕು. ಅಣೆಕಟ್ಟು ವಿಚಾರ ಬಿಟ್ಟು ವೈಯಕ್ತಿಕವಾಗಿ ಹೋಗ್ತಿದೆ. ಸುಮಲತಾ ಅವರನ್ನ ಜನ ಆಯ್ಕೆ ಮಾಡಿದ್ದಾರೆ. ಅದಕ್ಕೆ ಜನ ಪರ ಕೆಲಸ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್‌ನವರು ವೈಯಕ್ತಿಕವಾಗಿ ಮಾತಾನಾಡೋದು ಸರಿಯಲ್ಲ. ಡ್ಯಾಂ ಬಿರುಕು ಬಿಟ್ಟಿದೆ, ಬಿಟ್ಟಿಲ್ಲ ಅನ್ನೋದಕ್ಕೆ ಶಾಸಕರು ತಂತ್ರಜ್ಞರಲ್ಲ. ಅದರ ಪರಿಶೀಲನೆಗೆ ತಜ್ಞರಿದ್ದಾರೆ. ಸಚಿವರು, ಎಂಎಲ್‌ಎಗಳು ತಜ್ಞರಲ್ಲ ಎಂದು ವಿಶ್ವನಾಥ್ ಹೇಳಿದರು.

ಇದನ್ನೂ ಓದಿ: ಹಾರಂಗಿ ಜಲಾಶಯನಕ್ಕೆ ಬಾಗಿನ ಅರ್ಪಿಸಿದ ವಿ. ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.