ETV Bharat / state

ಕೊಡಗಿನಲ್ಲಿ ಸಂತ್ರಸ್ತರ ಆಕ್ರೋಶ.. ಶಾಸಕ ಕೆ ಜಿ ಬೋಪ್ಪಯ್ಯ ಪರಾರಿ ಆರೋಪ - ಈಟಿವಿ ಭಾರತ್ ಕನ್ನಡ ಸುದ್ದಿ

ಕೊಡಗು ಗಡಿಭಾಗ ಕೊಹಿನಾಡು ಗ್ರಾಮ ಕಿಂಡಿ ಅಣೆಕಟ್ಟಿನ ಜಲಪ್ರಳಯಕ್ಕೆ ತುತ್ತಾಗಿದೆ. ಆದರೆ ಇಲ್ಲಿನ ಶಾಸಕ ಕೆ ಜಿ ಬೋಪ್ಪಯ್ಯ ಅವರು ಜನರ ಕಷ್ಟಗಳನ್ನು ಕೇಳದೆ ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶಾಸಕ ಕೆ ಜಿ ಬೋಪ್ಪಯ್ಯ ಪರಾರಿ
ಶಾಸಕ ಕೆ ಜಿ ಬೋಪ್ಪಯ್ಯ ಪರಾರಿ
author img

By

Published : Sep 9, 2022, 5:36 PM IST

ಕೊಡಗು: ಮಳೆಯ ಆರ್ಭಟಕ್ಕೆ ಕೊಡಗಿನಲ್ಲಿ ಜಲಪ್ರಳಯವಾಗಿ ನದಿ ತೀರ ಪ್ರದೇಶದ ಜನರು ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಜೀವನ ಕಳೆಯುತ್ತಿದ್ದರು. ಕೊಡಗು ಗಡಿಭಾಗ ಕೊಹಿನಾಡು ಗ್ರಾಮದಲ್ಲಿ ಕಿಂಡಿ ಅಣೆಕಟ್ಟಿನ ಜಲಪ್ರಳಯಕ್ಕೆ ತುತ್ತಾಗಿದ್ದರಿಂದ ಶಾಸಕ ಕೆ. ಜಿ ಬೋಪ್ಪಯ್ಯ ಜನರ ಕಷ್ಟಗಳನ್ನು ಕೇಳದೆ ನಮಗೂ ನಿಮಗೂ ಸಂಬಂಧವಿಲ್ಲದಂತೆ ಹೋಗಿದ್ದಾರೆ ಎಂದು ಕೋಹಿನಾಡಿ ಜನರು ಆರೋಪ ಮಾಡಿದ್ದಾರೆ.

ಕೊಯಾನಾಡಿನಲ್ಲಿ ಅವೈಜ್ಞಾನಿಕ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ. ಮನೆ - ಮಠ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿದ್ದ ಸಂತ್ರಸ್ತರನ್ನು ಭೇಟಿಯಾಗಲು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಭೇಟಿ ನೀಡಿದ್ದರು. ಈ ವೇಳೆ, ಸಂತ್ರಸ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಇದೊಂದು ಪ್ರಕೃತಿ ವಿಕೋಪದಿಂದ ಆಗಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ. ಇದು ಮಾನವ ನಿರ್ಮಿತ ವಿಕೋಪವಾಗಿದೆ. ನಮ್ಮನ್ನು ನೀವೆಲ್ಲ ಸೇರಿ ನಿರಾಶ್ರಿತರನ್ನಾಗಿ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡರು. ಮುಖ್ಯಮಂತ್ರಿ ಆದಿಯಾಗಿ ಹಲವು ಸಚಿವರು ಬಂದು ಹೋದರು. ಯಾರಿಂದಲೂ ಪರಿಹಾರ ದೊರಕಿಲ್ಲ. ನೀವು ಕೂಡ ನಮ್ಮ ಅಳಲು ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾವು ಮತ್ತು ಕುಟುಂಬಸ್ಥರೆಲ್ಲರೂ ಇದೇ ಕಿಂಡಿ ಅಣೆಕಟ್ಟುವಿನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ಭರಿತರಾಗಿ ಸಂತ್ರಸ್ತರು ಹೇಳಿದರು.

ಯಾರ ಮಾತನ್ನು ಕೇಳಲು ತಯಾರಿಲ್ಲದ ಶಾಸಕರು ಪಲಾಯನ ಮಾಡಿದರು. ತಹಶೀಲ್ದಾರ್, ಪಂಚಾಯತ್ ಸದಸ್ಯರುಗಳು ನಮಗೂ ಕಿಂಡಿಗೂ ಯಾವುದೇ ಸಂಬಂಧ ಇಲ್ಲದಂತೆ ಸ್ಥಳದಿಂದ ಪಲಾಯನ ಮಾಡಿದ್ರು. ಶಾಸಕರು ಒಂದು ಹಂತದಲ್ಲಿ ಜನರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರಾದರೂ ಅಲ್ಲಿಯ ನಿರಾಶ್ರಿತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ತೆರಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.

ಓದಿ: ಬೆಂಗಳೂರಿನಲ್ಲಿ ತಗ್ಗಿದ ಮಳೆಯ ಪ್ರಮಾಣ: ರೈನ್ ಬೋ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಯಥಾಸ್ಥಿತಿಯತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.