ಕೊಡಗು: ಮೇಲ್ಮನೆ ಅಂದರೆ ಚಿಂತಕರ ಚಾವಡಿ ಅಂತಾರೆ, ಆದರೆ ಅಧಿಕಾರದಾಸೆಗೆ ಈ ರೀತಿ ಮಾಡ್ಬಿಟ್ಟರು. ಈ ಕಹಿ ಘಟನೆ ನಡೆಯಲು ಕಾಂಗ್ರೆಸ್ ಕಾರಣ ಎಂದು ವಸತಿ ಸಚಿವ ವಿ.ಸೋಮಣ್ಣ ದೂರಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಎರಡು ಬಾರಿ ಪರಿಷತ್ ಸದಸ್ಯನಾಗಿದ್ದೆ. ಅಲ್ಲಿ ನಡೆದಿರುವುದು ಪಕ್ಷಾತೀತವಾಗಿ ಎಲ್ಲರೂ ತಲೆ ತಗ್ಗಿಸಬೇಕಾದ ವಿಷಯ. ಸ್ಪೀಕರ್ ರಾಜೀನಾಮೆ ನೀಡಲು ಸಿದ್ಧರಿದ್ದರು. ಆದರೆ, ಅವರ ಪಕ್ಷದವರು ತಡೆಯಲು ಮುಂದಾದರು. ಕಾಂಗ್ರೆಸ್‌ನವರು ಹತಾಶರಾಗಿ ಆ ಘಟನೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗಲಾಟೆ ಮಾಡಿದ ಎರಡೂ ಕುಟುಂಬಗಳು ನಮ್ಮ ಸಂಬಂಧಿಕರು: ರಮೇಶ ಜಾರಕಿಹೊಳಿ
ಇನ್ನು ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಯ ವಿಚಾರ. ಡಿಕೆಶಿ ಜತೆ ಮಾತುಕತೆ ಮಾಡಿದ್ದರೆ. ಅವರಿಗೆ ಒಳ್ಳೆಯದಾಗಲಿ. ಮುಳುಗುವ ಹಡಗಿಗೆ ಹೋಗ್ತೇನೆ ಅಂದ್ರೆ ಹೋಗಲಿ. ಅವರ ತಂದೆ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ತಂದೆ ನಮ್ಮ ಪಕ್ಷದ ಸಂಸದರು. ಆದರೆ ಅವರ ಮಗ ಕಾಂಗ್ರೆಸ್ಗೆ ಹೋಗುವುದಾದರೆ ಹೋಗಲಿ ಎಂದು ಅಭಿಪ್ರಾಯಪಟ್ಟರು.