ETV Bharat / state

ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಂ ಸ್ಟೇಯಲ್ಲಿ ಸಾವು

ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಮಡಿಕೇರಿಯ ಹೋಂ ಸ್ಟೇಯಲ್ಲಿ ನಡೆದಿದೆ.

medical student dies in kodagu home stay
ಮೆಡಿಕಲ್​ ವಿದ್ಯಾರ್ಥಿನಿ ಸಾವು
author img

By

Published : Oct 26, 2021, 9:42 PM IST

Updated : Oct 26, 2021, 10:03 PM IST

ಕೊಡಗು:ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವನ್ನಪ್ಪಿದ ಘಟನೆ ಮಡಿಕೇರಿಯ ಹೋಂ ಸ್ಟೇಯಲ್ಲಿ ನಡೆದಿದೆ. ವಿಘ್ನೇಶ್ವರಿ ಈಶ್ವರ್ (24) ಮೃತ ಯುವತಿ. ಇವರು ಕೇರಳ ಮೂಲದವರಾಗಿದ್ದು, ಇವರ ತಂದೆ ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಈ ಮೃತ ಯುವತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು.

ಮೆಡಿಕಲ್​ ವಿದ್ಯಾರ್ಥಿನಿ ಸಾವು

ಇವರು ಇತ್ತೀಚಿಗೆ ಗೆಳತಿಯರೊಂದಿಗೆ ಕರ್ನಾಟಕಕ್ಕೆ ಬಂದಿದ್ದು, 5 ದಿನದ ಪ್ರವಾಸಕ್ಕೆಂದು ಸ್ನೇಹಿತೆಯರೊಂದಿಗೆ ಮಡಿಕೇರಿಗೆ ಆಗಮಿಸಿದ್ದರು. ಮಡಿಕೇರಿ ನಗರದ ಡೈರಿ ಫಾರ್ಮ್ ನಲ್ಲಿರುವ ಹೋಂ ಸ್ಟೇಯಲ್ಲಿ ಸ್ಟೇ ಯಾಗಿದ್ದಾರೆ. ತಲಕಾವೇರಿಗೆ ಹೋಗಿ ಹೋಂ ಸ್ಟೇಗೆ ಬಂದು ಕ್ರಿಕೆಟ್ ನೋಡುತ್ತಿದ್ದ ಸಂದರ್ಭದಲ್ಲಿ ಈ ವಿದ್ಯಾರ್ಥಿನಿ ಬಾತ್ ರೂಂಗೆ ಹೋಗಿದ್ದು, ಉಳಿದ ನಾಲ್ಕು ವಿದ್ಯಾರ್ಥಿಗಳು ಕ್ರಿಕೆಟ್ ನೋಡುತ್ತಿದ್ದರು.

ಒಂದು ಗಂಟೆಯಾದರೂ ಬಾತ್ ರೂಂ ಬಾಗಿಲು ತೆಗೆಯದಿದ್ದಾಗ ರೂಂ ಬಾಗಿಲು ಒಡೆದು ನೋಡಿದಾಗ ಯುವತಿ ಬಾತ್ ರೂಂ ನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದರು. ತಕ್ಷಣ ಅಲ್ಲಿನ ಸಿಬ್ಬಂದಿಗೆ ತಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಲೀಕ್ ಆಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

medical student dies in kodagu home stay
ಮಡಿಕೇರಿ ಹೋಂ ಸ್ಟೇ

ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಂ ಸ್ಟೇ ಮಾಲೀಕ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೋಂ ಸ್ಟೇ ಗಳು ಹೆಚ್ಚಾಗಿದ್ದು, ಅಧಿಕೃತ ಹೋಂ ಸ್ಟೇ ಗಳು‌ ಮತ್ತು ಅನಧಿಕೃತ ಹೋಂ ಸ್ಟೇ ಗಳು ಹೆಚ್ಚಾಗಿವೆ. ಪ್ರವಾಸಿಗರು ಬರುವಾಗ ಹೋಂ ಸ್ಟೇ ಬಗ್ಗೆ ಪರಿಶೀಲನೆ ಮಾಡಿ ಬರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Last Updated : Oct 26, 2021, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.