ETV Bharat / state

ಮಾರುತಿ ವ್ಯಾನ್, ಲಾರಿ ಡಿಕ್ಕಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಾವು - ಕೊಡಗು

ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಪಕ್ಷದ ಸಭೆ ಮುಗಿಸಿ ಹಿಂತುರುಗತ್ತಿದ್ದಾಗ ಅಪಘಾತ ಸಂಭವಿಸಿದ್ದು, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಾವು
author img

By

Published : Mar 20, 2019, 11:10 AM IST

ಕೊಡಗು : ಮಡಿಕೇರಿ ಹೊರವಲಯದಲ್ಲಿ ತಡರಾತ್ರಿ ಮಾರುತಿ ವ್ಯಾನ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಮೃತಪಟ್ಟಿರುವಘಟನೆ ನಡೆದಿದೆ.

ಚುನಾವಣೆ ಹಿನ್ನೆಲೆ ಬಾಲಚಂದ್ರಪಕ್ಷದ ಸಭೆ ಮುಗಿದ ಬಳಿಕ ಸಂಪಾಜೆಯಲ್ಲಿರುವ ತನ್ನ ಮನೆಗೆ ಹಿಂತುರುಗತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.ಮಡಿಕೇರಿ ನಗರ ಹೊರವಲಯದ ಮೇಕೇರಿ ಮಾರ್ಗವಾಗಿ ತಾಳತ್ಮನೆ ರಸ್ತೆ ಮೂಲಕ ಮಂಗಳೂರು ರಸ್ತೆಗೆ ತೆರಳುವ ಮಾರ್ಗದಲ್ಲಿ ವೇಗವಾಗಿ ಅಜಾರುಕತೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಲಾರಿ ಡಿಕ್ಕಿಯಾದ ರಭಸಕ್ಕೆ ವ್ಯಾನಿನ ಮುಂಭಾಗ ಜಖಂಗೊಂಡಿದ್ದು,ಸ್ವತಃ ತಾವೇ ವ್ಯಾನ್ ಚಲಾಯಿಸುತ್ತಿದ್ದರಿಂದ ಬಾಲಚಂದ್ರ ಅವರಿಗೆ ಹೆಚ್ಚು ಪೆಟ್ಟಾಗಿತ್ತು.ಅದೇ ರಸ್ತೆಯಲ್ಲಿ ಬರುತ್ತಿದ್ದ ಬಾಲಚಂದ್ರ ರವರ ಸ್ನೇಹಿತರು ಅವರನ್ನು ಜಿಲ್ಲಾಸ್ಪತ್ರಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿಮಧ್ಯೆಯೇ ಅವರುಮೃತಪಟ್ಟಿದ್ದಾರೆ.

ಇನ್ನೂಘಟನೆಗೆ ಕಾರಣನಾದ ಲಾರಿ ಚಾಲಕ ಜಯನನ್ನು ಮಡಿಕೇರಿ ಗ್ರಾಮಾಂತರ ಪೋಲಿಸರು ಬಂಧಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Intro:ಕೊಡಗು : ಮಡಿಕೇರಿ ಹೊರವಲಯದಲ್ಲಿ ತಡರಾತ್ರಿ ಮಾರುತಿ ವ್ಯಾನ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆ ಮುಗಿದ ಬಳಿಕ ಸಂಪಾಜೆಯಲ್ಲಿರುವ ತನ್ನ ಮನೆಗೆ ಹಿಂತುರುಗತ್ತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. Body:ಮಡಿಕೇರಿ ನಗರ ಹೊರವಲಯದ ಮೇಕೇರಿ ಮಾರ್ಗವಾಗಿ ತಾಳತ್ಮನೆ ರಸ್ತೆ ಮೂಲಕ ಮಂಗಳೂರು ರಸ್ತೆಗೆ ತೆರಳುವ ಮಾರ್ಗದಲ್ಲಿ ವೇಗವಾಗಿ ಅಜಾರುಕತೆಯಿಂದ ಬಂದ ಲಾರಿ ಸ್ವತಃ ತಾವೇ ವ್ಯಾನ್ ಚಲಾಯಿಸುತ್ತಿದ್ದು ಲಾರಿ ಡಿಕ್ಕಿಯಾದ ರಭಸಕ್ಕೆ ವ್ಯಾನಿನಲ್ಲಿ ಮುಂಭಾಗ ಜಖಂಗೊಂಡಿದ್ದು ಅದೇ ರಸ್ತೆಯಲ್ಲಿ ಬರುತ್ತಿದ್ದ ಬಾಲಚಂದ್ರ ರವರ ಸ್ನೇಹಿತರು ಜಿಲ್ಲಾಸ್ಪತ್ರಗೆ ಕರೆದುಕೊಂಡು ಹೋಗುವ ಸಮಯದಲ್ಲೇ ಮೃತಪಟ್ಟಿದ್ದಾರೆ. Conclusion:ಘಟನೆಗೆ ಕಾರಣನಾದ ಲಾರಿ ಚಾಲಕ ಜಯನನ್ನು ಮಡಿಕೇರಿ ಗ್ರಾಮಾಂತರ ಪೋಲಿಸರು ಬಂಧಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.