ಕೊಡಗು : ಹಣ್ಣುಗಳ ಜಾತಿಯಲ್ಲೇ ಅಗ್ರಸ್ಥಾನ ಹೊಂದಿರುವ ಹಣ್ಣು ಮಾವು. ಅದು ಹಣ್ಣುಗಳ ರಾಜಾ ಅಂತಾನೆ ಫೇಮಸ್. ನೋಡಿದರೆ ತಿನ್ನಬೇಕು ಅನ್ನಿಸುವ ರುಚಿಕರವಾದ ಹಣ್ಣುಗಳ ರಾಜಾ ಮಾವಿನ ಹಣ್ಣಿನ ಮೇಳ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಆರಂಭವಾಗಿದೆ. ಮೊದಲ ಬಾರಿಗೆ ಆಯೋಜನೆಗೊಂಡಿರುವ ಕಾರಣ ಜನರಿಂದಲೂ ಸಖತ್ ರೆಸ್ಪಾನ್ಸ್ ದೊರೆಯುತ್ತಿದೆ.
ನೋಡಿದೊಡನೆ ಬಾಯಲ್ಲಿ ನೀರುರಿಸುವ ಬಗೆ ಬಗೆಯ ಮಾವಿನ ಹಣ್ಣು : 10ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ನಡೆಯುತ್ತಿದೆ. ಕೊಡಗು ಮಾತ್ರವಲ್ಲದೆ ವಿವಿಧ ಜೆಲ್ಲೆಗಳಿಂದ ವ್ಯಾಪಾರಸ್ಥರು ಆಗಮಿಸಿದ್ದು, ಮಾರಾಟದಲ್ಲಿ ಬ್ಯುಸಿಯಾಗಿದ್ದಾರೆ. ಮಡಿಕೇರಿಯಲ್ಲಿ ನಾಲ್ಕು ದಿನಗಳ ಕಾಲ ಮಾವು ಮೇಳ ನಡೆಯಲಿದೆ. ಕೊಡಗಿನಲ್ಲಿ ಜನ ಮಾವಿನ ಹಣ್ಣಿನ ರುಚಿ ಸವಿಯಲಿದ್ದಾರೆ.
ಮಡಿಕೇರಿಯ ಹಾಪ್ಕಾಮ್ಸ್ ಆವರಣದಲ್ಲಿ ಮೇಳ : ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ನಾಲ್ಕು ದಿನಗಳ ಕಾಲ ಮಾವು ಮೇಳ ಆಯೋಜಿಸಲಾಗಿದೆ. ಮಡಿಕೇರಿಯ ಹಾಪ್ಕಾಮ್ಸ್ ಆವರಣದಲ್ಲಿ ಸುಮಾರು 18ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ. ಇಂದಿನಿಂದ 6ನೇ ತಾರೀಖಿನವರೆಗೆ ಮೇಳ ನಡೆಯಲಿದೆ. ಕೊಡಗು ಮಾತ್ರವಲ್ಲದೆ, ಮಂಡ್ಯ, ಮೈಸೂರು, ಜಾಮರಾಜನಗರ ಸೇರಿದಂತೆ ನಾನಾ ಭಾಗಗಳ ರೈತರು ತಾವೇ ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಒಂದು ಸುವರ್ಣ ಅವಕಾಶ ನೀಡಲಾಗಿದೆ.
ರೈತರಿಗೆ ಬೆಳೆದ ಬೆಳೆಯ ಮಾರಾಟ ಮಾಡಲು ಹಾಗೂ ಸಣ್ಣ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಪ್‌ಕಾಮ್ಸ್ ಆವರಣದಲ್ಲಿ ನಡೆಯುತ್ತಿರುವ ಮಾರಾಟ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ನೀಡದೆ ಉಚಿತ ಅವಕಾಶ ನೀಡಲಾಗಿದೆ.
ಮಲಗೋವ, ಬೇಗನ್‌ಪಲ್ಲಿ, ರಸಪುರಿ, ಬಾದಾಮಿ, ತೋತಾಪುರಿ, ಮಲ್ಲಿಕಾ ಜೊತೆ ಕೊಡಗಿನ ಕಾಡು ಮಾವಿನ ಹಣ್ಣು ಸೇರಿದಂತೆ 10ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಜನರನ್ನು ಸಖತ್ ಅಟ್ರಾಕ್ಟ್ ಮಾಡಿದವು. ಈ ರೀತಿಯ ಮೇಳಗಳನ್ನು ಮಾಡುವುದರಿಂದ ರೈತರಿಗೆ ಸಾಕಷ್ಟು ಉತ್ತೇಜನ ನೀಡಲು ಸಹಕಾರಿಯಾಗಿದೆ. ಇಷ್ಟು ದಿನಗಳ ಕಾಲ ವಾಣಿಜ್ಯ ಬೆಳೆಗಳನ್ನು ಮಾತ್ರ ಇಲ್ಲಿ ಪ್ರದರ್ಶನ, ಮಾರಾಟ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮಾವು ಮೇಳ ಆಯೋಜಿಸಿರುವುದು ತುಂಬಾ ಖುಷಿ ಕೊಟ್ಟಿದೆ.
ಗ್ರಾಹಕರ ರೆಸ್ಪಾನ್ಸ್ ಕೂಡ ಉತ್ತಮವಾಗಿದೆ ಅಂತಾರೆ ವ್ಯಾಪಾರಸ್ಥರು. ಮೊದಲ ಬಾರಿಗೆ ಆಯೋಜನೆಗೊಂಡ ಮೇಳದಲ್ಲಿ ಹಣ್ಣುಗಳ ಖರೀದಿಗೆ ಗ್ರಾಹಕರ ದಂಡೇ ಬರುತ್ತಿದೆ. ಇನ್ನೆರಡು ದಿನ ನಡೆಯಲಿರುವ ಮೇಳದಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಜನ ಆಗಮಿಸುವ ನಿರಿಕ್ಷೇಯಲ್ಲಿದ್ದಾರೆ ಮಾವು ವ್ಯಾಪಾರಸ್ಥರು.
ಇದನ್ನೂ ಓದಿ: ಲಾಲ್ಬಾಗ್ನಲ್ಲಿ ಮಾವುಗಳ ಮೇಳ: ಮೇ 16ರಿಂದ ಆನ್ಲೈನ್ ಮೂಲಕ ಮಾವು ಖರೀದಿಗೆ ಅವಕಾಶ