ಮಡಿಕೇರಿ : ರಸ್ತೆಯಲ್ಲಿ ನಿಂತಿದ್ದ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಮಡಿಕೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ರಸ್ತೆ ಬದಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆ ಮಡಿಕೇರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಮಡಿಕೇರಿ ನಗರದ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ ಯುವತಿ ಅಂಗಡಿ ಮಾಲೀಕನಿಂದ 500ರೂ ಪಡೆದು ಗೂಗಲ್ ಪೇ ಮಾಡಿದ್ದಳು.ಈ ವೇಳೆ ಇನೋವಾ ಕಾರಿನಲ್ಲಿ ಆಗಮಿಸಿದವರು ಅಂಗಡಿ ಬಳಿ ನಿಂತಿದ್ದ ಯುವತಿಯನ್ನು ಬಲವಂತದಿಂದ ಕರೆದುಕೊಂಡು ಹೋಗಿರುವುದಾಗಿ ಅಂಗಡಿಯವನು ಹೇಳಿದ್ದಾನೆ. ಘಟನೆ ಬಳಿಕ ಸ್ಥಳೀಯರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಗಡಿ ಸಿಬ್ಬಂದಿ ರೆಹಮಾನ್ ಎಂಬುವವರು ಪೊಲೀಸರಿಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
ಕಾರು ಮಡಿಕೇರಿಯಿಂದ ಮೈಸೂರು ರಸ್ತೆಯಲ್ಲಿ ತೆರಳಿದ್ದು ಸುಂಟಿಕೊಪ್ಪ, ಕುಶಾಲನಗರದಲ್ಲಿ ನಾಕಾಬಂಧಿ ಮಾಡಲಾಗಿದೆ. ಪ್ರವಾಸಕ್ಕೆ ಬಂದ ಗೆಳೆಯರ ಮಧ್ಯೆ ಜಗಳವಾಗಿರೋ ಸಾಧ್ಯತೆ ಇದ್ದು, ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಓದಿ : ಕಲಬುರಗಿ ಬಳಿ ದಿಬ್ಬಣದ ಬಸ್ ಪಲ್ಟಿ: ಇಬ್ಬರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ