ETV Bharat / state

ಮಡಿಕೇರಿ ದಸರಾ ಆಚರಣೆ.. ಡಿಜೆಗೆ ನಿರ್ಬಂಧ, ನಿರಾಶರಾದ ಜನತೆ - ಈಟಿವಿ ಭಾರತ ಕನ್ನಡ

ರಾತ್ರಿ 10 ಗಂಟೆ ಬಳಿಕ ಡಿಜೆ ಸೌಂಡ್ಸ್ ಬಳಕೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಅದ್ಧೂರಿ ಮಡಿಕೇರಿ ದಸರಾ ಆಚರಣೆಗೆ ಮುಂದಾಗಿದ್ದ ಜಿಲ್ಲೆಯ ಜನತೆಗೆ ನಿರಾಶೆ ಉಂಟಾಗಿದೆ.

madikeri-dasara-celebration
ಮಡಿಕೇರಿ ದಸರಾ ಆಚರಣೆ..ಡಿಜೆಗೆ ನಿರ್ಬಂಧ, ನಿರಾಸೆಯಲ್ಲಿ ಜನತೆ
author img

By

Published : Sep 10, 2022, 8:30 PM IST

ಕೊಡಗು : ನಾಡ ಹಬ್ಬ ದಸರಾ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಕಿನ ಹಬ್ಬ ಮಡಿಕೇರಿ ದಸರಾಗೂ ಭರ್ಜರಿ ತಯಾರಿ ನಡೆಯುತ್ತಿದೆ. ಈ ವರ್ಷ ಅದ್ದೂರಿಯಾಗಿ ದಸರಾ ಆಚರಿಸಿಲು ಮುಂದಾಗಿದ್ದ ಮಡಿಕೇರಿ ಜನತೆಗೆ ಸುಪ್ರೀಂಕೋರ್ಟ್ ಆದೇಶ ಭಾರಿ ನಿರಾಶೆ ಮೂಡಿಸಿದೆ.

ರಾತ್ರಿ ಡಿಜೆ ಸೌಂಡ್ಸ್​ಗೆ ಸುಪ್ರೀಂ ನಿರ್ಬಂಧ : ಕಳೆದ ಮೂರು ವರ್ಷಗಳಿಂದ ಮಂಕಾಗಿದ್ದ ದಸರಾ ಆಚರಣೆಯನ್ನು ಅದ್ದೂರಿಯಾಗಿ ಮಾಡಲು ದಸರಾ ಸಮಿತಿ ಸಕಲ‌ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ ಇದೀಗ ಇವೆದೆಲ್ಲದಕ್ಕೂ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ‌. ರಾತ್ರಿ 10 ಗಂಟೆಯ ನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸದಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ರಾತ್ರಿ10 ಗಂಟೆಯ ಬಳಿಕ ಆರಂಭವಾಗುವ ದಸರಾ: ಆದರೆ ಕೊಡಗಿನಲ್ಲಿ ಸಾಮಾನ್ಯವಾಗಿ 10 ಗಂಟೆಯ ಬಳಿಕ ದಸರಾ ಆಚರಣೆ ಪ್ರಾರಂಭವಾಗುತ್ತದೆ. ನಾಡ ಹಬ್ಬ ಮೈಸೂರು ದಸರಾವನ್ನು ಮುಗಿಸಿ ಹೆಚ್ಚಿನ ಜನರು ಮಡಿಕೇರಿ ದಸರಾ ಆಚರಣೆ ವೀಕ್ಷಿಸಲು ಆಗಮಿಸುತ್ತಾರೆ. ಇಲ್ಲಿ ನಡೆಯುವ ದಶ ಮಂಟಪಗಳ ಶೋಭಾಯಾತ್ರೆ ಜನರ ಪ್ರಮುಖವಾಗಿ ಆಕರ್ಷಣೆಯಾಗಿದೆ.

ಇಲ್ಲಿನ ಪ್ರತಿಯೊಂದು ಮಂಟಪಗಳು ಪೌರಾಣಿಕ ಕಥಾ ಸಾರಾಂಶವನ್ನೊಳಗೊಂಡ ಟ್ಯಾಬ್ಲೋಗಳ ಪ್ರದರ್ಶನ ಮಾಡುತ್ತದೆ. ಈ ಸಂದರ್ಭದಲ್ಲಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತದೆ. ಇಲ್ಲಿ ನಡೆಯುವ ಡಿಜೆ ಸೌಂಡ್ಸ್ ಗೂ ಕೂಡ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಮಡಿಕೇರಿ ದಸರಾ ಆಚರಣೆ..ಡಿಜೆಗೆ ನಿರ್ಬಂಧ, ನಿರಾಸೆಯಲ್ಲಿ ಜನತೆ

ಮಡಿಕೇರಿ ದಸರಾ ಆಚರಣೆಗೆ ಸಕಲ ಸಿದ್ಧತೆ : ಜಿಲ್ಲೆಯಲ್ಲಿ ದಸರಾ ಆಚರಣೆಗೆ ಸಕಲ‌ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಡಿಕೇರಿ ದಸರಾ ಆಚರಣೆಗೆ ಸರ್ಕಾರ 1 ಕೋಟಿ ಅನದಾನ ಬಿಡುಗಡೆ ಮಾಡಿದೆ. ಹೀಗಾಗಿ ದಸರಾ ಆಚರಣೆಯನ್ನು ಬಹಳ ಅದ್ದೂರಿಯಾಗಿ ನಡೆಸಲು ಸಮಿತಿ ತಿರ್ಮಾನಿಸಿತ್ತು. ಸರ್ಕಾರದ 1 ಕೋಟಿ ಅನುದಾನದಲ್ಲಿ ಪ್ರತಿ ಮಂಟಪಗಳಿಗೆ ಎರಡೂವರೆ ಲಕ್ಷ ರೂ ವ್ಯಯಿಸಿ, ಉಳಿದ ಹಣವನ್ನು ಕರಗ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಆದರೆ,ಈ ಬಾರಿ ಸುಪ್ರೀಂ ಕೋರ್ಟ್ ಆದೇಶದಿಂದ ಅದ್ದೂರಿ ದಸರಾ ಆಚರಣೆಗೆ ನಿರಾಶೆ ಮೂಡಿದೆ. ದಸರ ಸಮಿತಿಯಿಂದಲೂ ನಮಗೆ ಸಾಕಷ್ಟು ಮನವಿಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಇಲ್ಲಿನ ದಸರಾ ಆಚರಣೆ ವಿನಾಯಿತಿ ನಿಡುವಂತೆ ಮನವಿ ಮಾಡಲಾಗವುದು ಎಂದು ಶಾಸಕರು ಹೇಳಿದರು.

ಇದನ್ನೂ ಓದಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.