ಕೊಡಗು: ಗುಂಡಿಕ್ಕಿ ಹಸುವನ್ನು ಹತ್ಯೆ ಮಾಡಿ ಬಂದೂಕು ತೋರಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಬಂದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆಶೀಕ್(26) ಬಂಧಿತ ಆರೋಪಿ. ನಾಪೋಕ್ಲುವಿನ ಕೊಳಕೇರಿಯಲ್ಲಿ ಆರೋಪಿ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಬೆಳಗ್ಗೆ ಹಸು ಮೆಯಲು ಬಿಡಲಾಗಿತ್ತು. ಸಂಜೆ ಆದರೂ ಹಸು ಮನೆ ಬಂದಿರಲಿಲ್ಲ. ನಂತರ ಸ್ಥಳೀಯರು ಮತ್ತು 50ಕ್ಕೂ ಹೆಚ್ಚು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಒಟ್ಟಿಗೆ ಸೇರಿ ಎಲ್ಲಾ ಭಾಗದಲ್ಲಿ ಹಸುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಸಂಜೆ 7 ಗಂಟೆಗೆ ವೇಳೆಗೆ ಕಾಡಿನ ನಡುವೆ ಮಾಂಸ ತೆಗೆಯುತ್ತಿದ್ದ ದೃಶ್ಯ ಕಂಡು ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳು ಮುಂಚೂಣಿ ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದರು.