ETV Bharat / state

ಲಾಕ್‌ಡೌನ್ ಉಲ್ಲಂಘಿಸಿದ ಹೋಂ ಸ್ಟೇಗೆ ಬೀಗ: ನನಗೆ ಡಿಜಿ-ಐಜಿ ಗೊತ್ತು ಎಂದ ಮಾಲೀಕ!

ಲಾಕ್‍ಡೌನ್ ಉಲ್ಲಂಘಿಸಿ ಬೆಂಗಳೂರು ಮೂಲದ ಮೂವರಿಗೆ ಆಶ್ರಯ ನೀಡಿದ್ದ ಹೋಂ ಸ್ಟೇಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀಗ ಮುದ್ರೆ ಹಾಕಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಳೆ ಗರಂಗದೂರಿನಲ್ಲಿ ನಡೆದಿದೆ.‌

Kodagu
ಲಾಕ್‌ಡೌನ್ ಉಲ್ಲಂಘಿಸಿದ ಹೋಂ ಸ್ಟೇಗೆ ಬೀಗ: ನನಗೆ ಡಿಜಿ-ಐಜಿ ಗೊತ್ತು ಎಂದು ಹೋಂ ಸ್ಟೇ ಮಾಲೀಕ..!
author img

By

Published : May 8, 2020, 11:44 PM IST

ಸೋಮವಾರಪೇಟೆ(ಕೊಡಗು): ಕೊವೀಡ್-19 ನಿಯಂತ್ರಿಸಲು ಸರ್ಕಾರ ಸಾಕಷ್ಡು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕರ್ನಾಟಕದ ಕಾಶ್ಮೀರ ಕೊಡಗಿನ ಕೆಲವು ಹೋಂ ಸ್ಟೇಗಳಲ್ಲಿ ಹಣವಂತರ ಮೋಜು ಮಸ್ತಿ ಸದ್ದಿಲ್ಲದೆ ನಡೆಯುತ್ತಿದೆ.

ಲಾಕ್‌ಡೌನ್ ಉಲ್ಲಂಘಿಸಿದ ಹೋಂ ಸ್ಟೇಗೆ ಬೀಗ

ಲಾಕ್‍ಡೌನ್ ಉಲ್ಲಂಘಿಸಿ ಬೆಂಗಳೂರು ಮೂಲದ ಮೂವರಿಗೆ ಆಶ್ರಯ ನೀಡಿದ್ದ ಹೋಂ ಸ್ಟೇಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀಗ ಮುದ್ರೆ ಹಾಕಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಳೆ ಗರಂಗದೂರಿನಲ್ಲಿ ನಡೆದಿದೆ.‌ ಹಳೇ ಗರಂಗದೂರಿನ ನವೀನ್ ಚಲ್ಲಂ ಎಂಬುವರ ಮಾಲೀಕತ್ವದ ವುಡ್ ಪೀಕರ್ ಹೆಸರಿನ ಹೋಂ ಸ್ಟೇನಲ್ಲಿ ಮೇ 6ರಂದೇ ಬೆಂಗಳೂರಿನ ಗೌಡನಪಾಳ್ಯದ ಸೃಜನ್, ಜಯನಗರದ ನಿವಾಸಿ ರಘುರಾಮ್ ಹಾಗೂ ಹೋಂ ಸ್ಟೇ ಮಾಲೀಕನ ಮಗ ರೋಷನ್ ಉಳಿದಿದ್ದರಂತೆ.‌

ಅಲ್ಲದೆ ರಾತ್ರಿ ಡಿಜೆ ಹಾಡು ಹಾಕಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎನ್ನುವ ಸ್ಥಳೀಯರ ಆರೋಪದ ಮೇರೆಗೆ ಗರಂದೂರಿನ ಪಂಚಾಯಿತಿ ಅಧಿಕಾರಿ ವಿಜಯ್ ಲೋಕೇಶ್ ಹಾಗೂ ಸಿಬ್ಬಂದಿ ಹೋಗಿ ಪರಿಶೀಲಿಸಿದಾಗ ಮೂವರು ಅಲ್ಲಿಯೇ ವಾಸ್ತವ್ಯ ಹೂಡಿರುವುದು ಗೊತ್ತಾಗಿತ್ತು. ಇನ್ನು ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಹೋಂ ಸ್ಟೇ ಮಾಲೀಕರಾದ ನವೀನ್ ಚಲ್ಲಂಗೆ ದೂರವಾಣಿ ಮೂಲಕ ಕರೆ ಮಾಡಿ ಕೇಳಿದಾಗ, ನನಗೆ ಐಜಿ ಗೊತ್ತು. ಯಾರೂ ಅಲ್ಲಿಗೆ ಬಂದು ಪರಿಶೀಲಿಸಬೇಕಾಗಿಲ್ಲ. ನಾನು ಬಂದಾಗ ಕಳುಹಿಸಲು ಹೇಳಿ. ನನ್ನ ಮಗ ಅನುಮತಿ ತೆಗೆದುಕೊಂಡೇ ಬಂದಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ನಾನು ಎಷ್ಟು ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಿದ್ದೇನೆ ಎಂದೆಲ್ಲಾ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಹರದೂರಿನ ಹೋಂ ಸ್ಟೇ‌ನಲ್ಲಿ ಉಳಿದಿದ್ದವರು ನನಗೆ ಪ್ರಭಾವಿಗಳು ಗೊತ್ತು. ಏನೂ ಮಾಡಲು ಸಾಧ್ಯವಿಲ್ಲ. ಹೀಗೆ ಮಾತನಾಡಿದ್ದಾರೆ. ಜಿಲ್ಲೆ ಇದೀಗ ತಾನೇ ಕೊರೊನಾ ಮುಕ್ತ ಆಗಿದೆ. ಈ ಹಿನ್ನೆಲೆಯಲ್ಲಿ ‌ಅವರನ್ನು 14 ದಿನ ಕ್ವಾರಂಟೈನ್‌ ಮಾಡಬೇಕು ಎಂದು ತಿಳಿಸಿದ್ದೆ. ಹೀಗಿದ್ದರೂ ಅವರು ವಾಪಸ್ ಹೋಗಿದ್ದಾರೆ. ಯಾರು ಎಷ್ಟೇ ದೊಡ್ಡವರಾದರೂ ಸರಿಯೇ ಕೊವೀಡ್-19 ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು ಎಂದು ಸ್ಥಳೀಯ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಚಾಯಿತಿ ವತಿಯಿಂದ ಪರಿಶೀಲನೆ ನಡೆಸಿದಾಗ ಹೋಂ ಸ್ಟೇ‌ನಲ್ಲಿ ಕೆಲಸ‌ ಮಾಡುತ್ತಿರುವವರಿಗೆ ಆಹಾರ ಸಾಮಾಗ್ರಿಗಳನ್ನು ಕೊಡಲು ಬಂದಿರುವುದಾಗಿ ಅವರು ಹೇಳಿದ್ದಾರೆ. ಟಾಸ್ಕ್‌ ಫೋರ್ಸ್ ತಂಡದಿಂದ ಲಾಕ್‌ಡೌನ್ ವೇಳೆ ಅನಧಿಕೃತವಾಗಿ ಹೋಂ ಸ್ಟೇ ತೆರಿದಿದ್ದರಿಂದ ಹೋಂ ಸ್ಟೇಗೆ ಬೀಗಮುದ್ರೆ ಹಾಕಿ ನೋಟಿಸ್ ನೀಡಲಾಗಿದೆ. ಒಂದು ದಿನಕ್ಕೆ ಅಂತಾ ಪಾಸ್ ತೆಗೆದುಕೊಂಡು ಬಂದಿದ್ದವರನ್ನು ಕ್ವಾರಂಟೈನ್ ಮಾಡದೆ ಯಾವ ಮಾನದಂಡದ ಮೇಲೆ ಮೂವರನ್ನೂ ವಾಪಸ್ ಕಳುಹಿಸಿದ್ದಾರೆ ಎನ್ನುವುದು ಮತ್ತೊಂದೆಡೆ ಗೊಂದಲ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.