ಕುಶಾಲನಗರ(ಕೊಡಗು): ಅಪಘಾತವಾಗಿ ಸ್ವಾಧೀನ ಕಳೆದುಕೊಂಡ ವ್ಯಕ್ತಿಯ ಚಿಕಿತ್ಸೆಗೂ ಲಾಕ್ಡೌನ್ ಎಫೆಕ್ಟ್ ಬಿಸಿ ತಟ್ಟಿರುವ ಘಟನೆ ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಕಂಡು ಬಂದಿದೆ.
ಕೊಡಗು ಜಿಲ್ಲೆ ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ಜೀವನ ನಡಸುತ್ತಿರುವ ವಿಲ್ಸ್ನ್ ಹಾಗೂ ಜಯಲಕ್ಷ್ಮಮ್ಮ ದಂಪತಿಗೆ ಲಾಕ್ಡೌನ್ನಿಂದಾಗಿ ಸೂಕ್ತ ಚಿಕಿತ್ಸೆ ದೊರಕದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ವಿಲ್ಸನ್ಗೆ ಅಪಘಾತ ಸಂಭವಿಸಿದ ಪರಿಣಾಮ ಕಾಲು ಸ್ವಾಧೀನ ಕಳೆದುಕೊಂಡಿದೆ. ಇದರಿಂದ ಕೆಲಸವನ್ನೂ ಮಾಡಲು ಸಾಧ್ಯವಾಗದಷ್ಟು ಅಸಹಾಯಕರಾಗಿಬಿಟ್ಟಿದ್ದಾರೆ.
ಮಂಗಳೂರಿನ ಸುಳ್ಯ ಆಸ್ಪತ್ರೆಯೊಂದರಲ್ಲಿ ಇವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಕೊವೀಡ್-19 ಪರಿಣಾಮ ಅಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ನನಗೂ ಆರೋಗ್ಯ ಕೂಡಾ ಸರಿಯಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಜೀವನ ನಡೆಸಬೇಕೋ ಎಂಬುದು ತಿಳಿಯದಾಗಿದೆ ಎಂದು ಪತ್ನಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.