ಶನಿವಾರಸಂತೆ/ಕೊಡಗು: ಸೀಲ್‌ಡೌನ್ ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಏರಿಯಾವನ್ನು ಸೀಲ್‌ಡೌನ್ ಮಾಡಬೇಡಿ ಎಂದು ಸ್ಥಳೀಯರು ಆಗ್ರಹಿಸಿದ ಘಟನೆ ಜಿಲ್ಲೆಯ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ನಡೆದಿದೆ.
ಸೀಲ್‌ಡೌನ್ ಮಾಡಿ ತೆರವುಗೊಳಿಸುವಾಗ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಮಹಿಳೆ ಗುಣಮುಖರಾಗಿ ಮನೆಗೆ ವಾಪಸಾಗಿದ್ದರು. ಆದರೆ ಇದೀಗ ಮಹಿಳೆಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಧಿಕಾರಿಗಳು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಏರಿಯಾವನ್ನು ಮತ್ತೆ ಸೀಲ್‌ಡೌನ್ ಮಾಡದಂತೆ ಆಗ್ರಹಿಸಿದ್ದಾರೆ.
ನಾಳೆ ಏರಿಯಾದ ಸೀಲ್‌ಡೌನ್ ತೆರೆವುಗೊಳಿಸಬೇಕಿತ್ತು. ಆದರೆ ಮತ್ತೊಂದು ಪಾಸಿಟಿವ್ ವರದಿ ಬಂದಿರುವುದರಿಂದ ಮತ್ತೆ ಸೀಲ್‌ಡೌನ್ ಮಾಡುವ ಸಾಧ್ಯತೆಗಳಿವೆ. ಬಡಾವಣೆಯಲ್ಲಿ ಬಹುತೇಕರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಮತ್ತೆ ಸೀಲ್‌ಡೌನ್ ಮಾಡಿದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಬೇಕಿದ್ದರೆ ಸೋಂಕಿತರ ಮನೆಯನ್ನು ಮಾತ್ರ ಸೀಲ್‌ಡೌನ್ ಮಾಡಿ ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.