ETV Bharat / state

ಕೊಡಗಿನಲ್ಲಿ ಕೈಲ್​ ಮುಹೂರ್ತ ಹಬ್ಬದ ಸಂಭ್ರಮ: ಗಮನ ಸೆಳೆದ ಆಕರ್ಷಕ ನೃತ್ಯ ಪ್ರದರ್ಶನ - kodagu dance performance

ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿನಲ್ಲಿರುವ ಕೊಡವ ಸಾಂಪ್ರದಾಯಿಕ ಕಲೆಗಳನ್ನ ಉಳಿಸಿ ಬೆಳೆಸುವ ಸಲುವಾಗಿ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೋವಿ‌ ಪ್ರದರ್ಶನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

Kyle Muhurta festival celebration at Kodagu
ಕೊಡಗಿನಲ್ಲಿ ಕೈಲ್​ ಮುಹೂರ್ತ ಹಬ್ಬದ ಸಂಭ್ರಮ
author img

By

Published : Oct 1, 2021, 7:54 AM IST

ಮಡಿಕೇರಿ: ಕೊಡಗಿನ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿವಿಗಾಗಿ ಕೊಡವ ಸಾಹಿತ್ಯ ಅಕಾಡೆಮಿಯಿಂದ ವಿರಾಜಪೇಟೆಯ ಬಿಟ್ಟಗಾಂಲದ ಕೊಡವ ಹೆಗ್ಗಡೆ ಸಮಾಜದಲ್ಲಿ 'ಕೈಲ್ ಮುಹೂರ್ತ' ಹಬ್ಬದ ಪ್ರಯುಕ್ತ ಕೋವಿ‌ ಪ್ರದರ್ಶನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲೆಯಲ್ಲಿ ಕೊಡವ ಭಾಷೆ ಮಾತನಾಡುವ 18 ಸಮುದಾಯದವರು ಒಟ್ಟಿಗೆ ಸೇರಿ, ಕೋವಿಯ ಮಹತ್ವ ಮತ್ತು ಕಲೆ, ಸಂಸ್ಕೃತಿ ಉಳಿವಿನ ಕುರಿತು ಯುವ ಜನತೆಗೆ ಮಾಹಿತಿ ನೀಡಿದರು.

ಕೊಡಗಿನಲ್ಲಿ ಕೈಲ್​ ಮುಹೂರ್ತ ಹಬ್ಬದ ಸಂಭ್ರಮ

ಕೈಲ್ ಮುಹೂರ್ತ ಹಬ್ಬದ ನಿಮಿತ್ತ ನಡೆದ ಕಾರ್ಯಮದಲ್ಲಿ ಎಲ್ಲರೂ ಗನ್ ತಂದು ಪೂಜೆ ಸಲ್ಲಿಸಿ, ಕೋವಿ ಪ್ರದರ್ಶನ ಮಾಡಿದ್ರು. ಅಷ್ಟೇ ಅಲ್ಲದೆ, ಕೊಡವರ ಉಡುಪು ತೊಟ್ಟು ಮಹಿಳೆಯರು, ಪುರುಷರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೊಳ್ಕಾಟ್ ,ಉಮ್ಮತ್ತಾಟ್, ಉರುಟ್ಟಿಕೊಟ್ಟಾಟ್, ಕತ್ತಿಯಾಟ್, ಪರೆಯಕಳಿ, ಚೌರಿಯಾಟ್ ನೃತ್ಯ ಪ್ರದರ್ಶನ ಮಾಡುವ ಮೂಲಕ ಸಖತ್ ಎಂಜಾಯ್ ಮಾಡಿದ್ರು.

ಇನ್ನು ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿನಲ್ಲಿರುವ ಕೊಡವ ಸಾಂಪ್ರದಾಯಿಕ ಕಲೆಗಳನ್ನ ಉಳಿಸಿ, ಬೆಳೆಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನೂರಾರು ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.