ETV Bharat / state

ಕೊಡಗು : ನಿಷೇಧಿತ ಲಾಟರಿ ಮಾರುತ್ತಿದ್ದ ವ್ಯಕ್ತಿಯ ಬಂಧನ

ಈತ ತಮಗೆ ಬೇಕಾದವರಿಗೆ ಮಾತ್ರ ಲಾಟರಿಗಳನ್ನು ಗೌಪ್ಯವಾಗಿ ಮಾರಾಟ ಮಾಡುತ್ತಿದ್ದ. ಕೊಡಗು ಕೇರಳದ ಗಡಿಭಾಗ ಆಗಿದೆ. ಕೇರಳದ ಕೆಲಸಗಾರರು ಜಿಲ್ಲೆಯಲ್ಲಿರುವುದರಿಂದ ಕೇರಳದ ಲಾಟರಿಗೆ ಬೇಡಿಕೆ ಹೆಚ್ಚಿತ್ತು ಎನ್ನಲಾಗಿದೆ..

ನಿಷೇಧಿತ ಲಾಟರಿ ಮಾರುತ್ತಿದ್ದ ವ್ಯಕ್ತಿಯ ಬಂಧನ
Kutta police arrested accused
author img

By

Published : Dec 2, 2020, 4:35 PM IST

ಕೊಡಗು : ನಿಷೇಧಿತ ಕೇರಳ ರಾಜ್ಯದ ಲಾಟರಿ ಟಿಕೆಟ್‌ ಮಾರಾಟ‌ ಮಾಡುತ್ತಿದ್ದ ವ್ಯಕ್ತಿಯನ್ನು ಕುಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಕೊಡಗಿನಲ್ಲಿ ನಿಷೇಧಿತ ಲಾಟರಿ ಮಾರುತ್ತಿದ್ದ ವ್ಯಕ್ತಿಯ ಬಂಧನ

ಸುರೇಶ್‌‌ (60) ಎಂಬಾತ ಬಂಧಿತ ಆರೋಪಿ. ಬಂಧಿತನಿಂದ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳು ಸೇರಿದಂತೆ ₹1200 ನಗದನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲೆಯ ಗಡಿ ಭಾಗದಲ್ಲಿ ದಂಧೆ ನಡೆಯುತ್ತಿರುವ ಬಗ್ಗೆ ಅನುಮಾನಗಳಿದ್ದರೂ ಬೆಳಕಿಗೆ ಬಂದಿರಲಿಲ್ಲ. ಇದೀಗ ಕೊಡಗಿನ ಕುಟ್ಟ ಗ್ರಾಮದಲ್ಲಿರುವ ಅಂಗಡಿಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಈತ ತಮಗೆ ಬೇಕಾದವರಿಗೆ ಮಾತ್ರ ಲಾಟರಿಗಳನ್ನು ಗೌಪ್ಯವಾಗಿ ಮಾರಾಟ ಮಾಡುತ್ತಿದ್ದ. ಕೊಡಗು ಕೇರಳದ ಗಡಿಭಾಗ ಆಗಿದೆ. ಕೇರಳದ ಕೆಲಸಗಾರರು ಜಿಲ್ಲೆಯಲ್ಲಿರುವುದರಿಂದ ಕೇರಳದ ಲಾಟರಿಗೆ ಬೇಡಿಕೆ ಹೆಚ್ಚಿತ್ತು ಎನ್ನಲಾಗಿದೆ.

ಈ ಮಧ್ಯೆ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣ ಕಾರ್ಯ ನಿರತರಾದ ಕುಟ್ಟ ಸರ್ಕಲ್ ಇನ್ಸ್‌ಪೆಕ್ಟರ್ ಎಸ್ ಪರಶಿವಮೂರ್ತಿ ಮತ್ತು ಸಿಬ್ಬಂದಿ ಪಟ್ಟಣದ ಅಂಗಡಿಯಲ್ಲಿ ಕರ್ನಾಟಕದಲ್ಲಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.