ಕುಶಾಲನಗರ: ನಾಡಹಬ್ಬ ಮೈಸೂರು ದಸರಾಗೆ ಆಗಮಿಸಿದ ಆನೆಗಳು ಈ ಬಾರಿಯೂ ಕಾಡಿಗೆ ಹೋಗಲು ಹಿಂಜರಿದಿರುವ ಘಟನೆ ನಡೆದಿದೆ.
ವಿಕ್ರಮ ಆನೆ ಇಳಿಯಲು ಹಿಂದೇಟು ಹಾಕಿದ್ದು, ಬಳಿಕ ಮಾವುತನ ಸೂಚನೆ ನಂತರ ಲಾರಿಯಿಂದ ಇಳಿದಿದ್ದಾನೆ. ಮೈಸೂರಿನಿಂದ ನೇರವಾಗಿ ಕೊಡಗಿನ ದುಬಾರೆ ಸಾಕಾನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಕಾಡಿಗೆ ಆನೆಗಳನ್ನು ಲಾರಿಯಲ್ಲಿ ಸಾಗಿಸಲಾಯಿತು. ವಿಕ್ರಮ ಮತ್ತು ಕಾವೇರಿ ಆನೆಯನ್ನು ಕಾಡಿನಲ್ಲಿ ಇಳಿಸಲಾಯಿತು.
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕೊಡಗಿನಿಂದ ನಾಲ್ಕು ಆನೆಗಳು ತೆರಳಿದ್ದವು. ಇದೀಗ ಮತ್ತೆ ಕಾಡಿಗೆ ಮರಳಿವೆ. ದಸರಾದಲ್ಲಿ ಭಾಗವಹಿಸಲು 15 ದಿನಗಳ ಹಿಂದೆ ಕೊಡಗಿನ ಆನೆಕಾಡು ಮತ್ತು ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳನ್ನು ಮೈಸೂರಿಗೆ ಕರೆದೊಯ್ಯಲಾಗಿತ್ತು.