ETV Bharat / state

ಕೋವಿಡ್​ ನಿಯಮಗಳೊಂದಿಗೆ ಹೊಸ ವ‌ರ್ಷಾಚರಣೆಗೆ ಸಿದ್ಧವಾಗಿದೆ ಕೊಡಗು

ಕೊಡಗು ಜಿಲ್ಲೆಯಲ್ಲಿ ಅಧಿಕೃತವಾಗಿ 800 ಹೋಂ‌ಸ್ಟೆ‌ಗಳಿವೆ. ಇಲ್ಲಿರುವ ರೆಸಾರ್ಟ್, ಹೋಂಸ್ಟೆಗಳಲ್ಲಿ ಸರ್ಕಾರದ ನಿರ್ದೇಶನದ ಪ್ರಕಾರ ಕೋವಿಡ್‌ ನಿಯಮಗಳನ್ನು ಹೊಸ ವರ್ಷಾಚರಣೆಗೂ ಅನ್ವಯಿಸಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

Kovid rules applied in Kodagu resorts
ರೆಸಾರ್ಟ್
author img

By

Published : Dec 15, 2020, 3:26 PM IST

ಕೊಡಗು: ಯುವ ಸಮೂಹ ಹೊಸ ವ‌ರ್ಷ‌ವನ್ನು ಸ್ವಾಗತಿಸುವ ಉತ್ಸಾಹದಲ್ಲಿದೆ‌. ಜಿಲ್ಲೆಯ ಪ್ರವಾಸಿತಾಣಗಳು, ರೆಸಾರ್ಟ್ ಹಾಗೂ ಹೋಂ ಸ್ಟೇಗಳತ್ತ ಯುವಕರು ಮುಖ ಮಾಡುತ್ತಾರೆ. ಆದರೆ ಈ ಬಾರಿ ಪ್ರವಾಸಿತಾಣಗಳಿಗೆ ಹೋಗುವ ಮೊದಲು ಜಿಲ್ಲಾಡಳಿತ ಕೆಲವು ರೂಲ್ಸ್‌ಗಳನ್ನು ಪಾಲಿಸುವಂತೆ ಆದೇಶಿಸಿದೆ.

ಹೋಂಸ್ಟೆ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅನಂತಶಯನ ಪ್ರತಿಕ್ರಿಯೆ

ರೆಸಾರ್ಟ್​ಗಳಲ್ಲಿ ನವಜೋಡಿಗೆ ಮಾತ್ರ ಅವಕಾಶ

ಕೊರೊನಾ ಬಳಿಕ ದೈನಂದಿನ ಬದುಕಿನಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆ ಹೊಸ ವರ್ಷದ ಆಚರಣೆಗೆ ಹೋಂಸ್ಟೆ, ರೆಸಾರ್ಟ್ ಮಾಲೀಕರು ಒಂದಿಷ್ಟು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಮಾಡಿಕೊಂಡಿದ್ದಾರೆ.‌ ಹೊಸ ವರ್ಷಕ್ಕೆ ಆಗಮಿಸುವ ಅತಿಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಿದ್ದಾರೆ.‌ ಅಲ್ಲದೆ ನವ ಜೋಡಿಗಳು ಹಾಗೂ ಕುಟುಂಬಸ್ಥರಿಗೆ ಮಾತ್ರ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ. ಅಬ್ಬರದ ಧ್ವನಿವರ್ಧಕಗಳಿಲ್ಲದೆ‌ ಅತ್ಯಂತ ಸರಳವಾಗಿ ಹೊಸ ವರ್ಷವನ್ನು ಸ್ವಾಗತಿಸಲು ಅನುಮತಿಸಲಾಗಿದೆ.

ಓದಿ: ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಜೆಡಿಎಸ್ ವಿರೋಧ: ದೇವೇಗೌಡ

ಈಗಾಗಲೇ ಪ್ರವಾಸಿತಾಣಗಳಿಗೆ ಆಗಮಿಸುತ್ತಿರುವ ಪ್ರವಾಸಿಗರಲ್ಲಿ ಹಲವರು ಮಾಸ್ಕ್ ಧರಿಸದಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಟಾಸ್ಕ್ ಪೋಸ್೯ ತಂಡ ರಚಿಸಿ ದಂಡ ವಿಧಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.