ETV Bharat / state

ಹೃದಯಾಘಾತದಿಂದ ಕೊಡಗು ಮೂಲದ ಯೋಧ ಸಾವು: ಹುಟ್ಟೂರಿನಲ್ಲಿ ಸರ್ಕಾರಿ‌ ಗೌರವಗಳೊಂದಿಗೆ ಅಂತ್ಯಕ್ರಿಯೆ - ಕೊಡಗು ಮೂಲದ ಯೋಧ ಸಾವು

ಹೃದಯಾಘಾತದಿಂದ ಕೊಡಗು ಮೂಲದ ಯೋಧ ನಾಪಂಡ ಎನ್.ಸಿ. ಮಹೇಶ್(46) ಸಾವು. ಹುಟ್ಟೂರಿನಲ್ಲಿ ಸಕಲ ಸರ್ಕಾರಿ‌ ಗೌರವಗಳೊಂದಿಗೆ ಅಂತ್ಯಕ್ರಿಯೆ.

soldier dies
ಹೃದಯಾಘಾತದಿಂದ ಕೊಡಗು ಮೂಲದ ಯೋಧ ಸಾವು
author img

By

Published : Oct 14, 2022, 7:56 PM IST

ಕೊಡಗು: ಉತ್ತರ ಖಂಡದ ಜೋಶಿಮಾಥ್​​ ಎಂಬಲ್ಲಿ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಮೂಲದ ಯೋಧ ಹೃದಯಾಘಾತದಿಂದ ಮೃತ್ತಪಟ್ಟಿದ್ದ, ಇಂದು ಹುಟ್ಟೂರಿನಲ್ಲಿ ಸಕಲ ಸರ್ಕಾರಿ‌ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿರಂಗದೋರು ಗ್ರಾಮ ನಿವಾಸಿ ನಾಪಂಡ ಎನ್.ಸಿ. ಮಹೇಶ್(46) ಮೃತ ಯೋಧ. ಇವರು ಉತ್ತರ ಖಂಡದ ಜೋಶಿಮಾಥ್​ ಎಂಬಲ್ಲಿ ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕಲ್ ಇಂಜಿನಿಯರ್) ವಿಭಾಗದಲ್ಲಿ ಜೆಸಿಒ ಹುದ್ದೆಯಲ್ಲಿದ್ದರು.

ಕೊಡಗು ಮೂಲದ ಯೋಧ ಸಾವು: ಹುಟ್ಟೂರಿನಲ್ಲಿ ಸರ್ಕಾರಿ‌ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕಳೆದ 4 ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೀಡಾಗಿ ವಿಧಿವಶರಾವಗಿದ್ದ ಮಹೇಶ್ ಅವರ ಪಾರ್ಥೀವ ಶರೀರವನ್ನು ಬುಧವಾರ ಡೆಹರಾಡೂನ್‌ನಿಂದ ಸ್ವೀಕರಿಸಿ, ನಿನ್ನೆ(ಗುರುವಾರ) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸುಬೇದಾರ್ ವಿ. ಮಣಿ, ಹವಾಲ್ದಾರ್ ಪ್ರಸಾದ್, ನಾಯಕ್ ಟಿ.ಆರ್. ರಾಹುಲ್ ಅವರೊಂದಿಗೆ ಎಂಇಜಿ ನಿವೃತ್ತ ಸಿಬ್ಬಂದಿ ಮಡಿಕೇರಿಯ ನಂದಿನೆರವಂಡ ಕರುಂಬಯ್ಯ ಅವರು ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ನಿನ್ನೆ ಸಂಜೆ ಹುಟ್ಟೂರಿಗೆ ಕರೆತಂದಿದ್ದರು.

ಇದನ್ನೂ ಓದಿ: ಕಡಬದಲ್ಲಿ ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ

ನಿನ್ನೆ ಸಂಜೆಯೇ ಯೋಧನ ಪಾರ್ಥಿವ ಶರೀರ ಸೋಮವಾರ ಪೇಟೆ ಪಟ್ಟಣಕ್ಕೆ ಆಗಮಿಸುವ ಸುದ್ದಿ ತಿಳಿದಂತೆ ನೂರಾರು ಮಂದಿ ಪಟ್ಟಣದಲ್ಲಿ ಜಮಾವಣೆಗೊಂಡರು. ಆ್ಯಂಬುಲೆನ್ಸ್ ಆಗಮಿಸುತ್ತಿದ್ದಂತೆ 'ಭಾರತ್ ಮಾತಾ ಕೀ ಜೈ, ಅಮರ್ ರಹೇ ಅಮರ್ ರಹೇ, ಜೆಸಿಓ ಮಹೇಶ್ ಅಮರ್ ರಹೇ' ಎಂದು ಘೋಷಣೆಗಳನ್ನು ಮೊಳಗಿಸಿ ಪುಷ್ಪನಮನ ಸಲ್ಲಿಸಿದರು.

ಸೋಮವಾರ ಪೇಟೆಯಲ್ಲಿ ಸೇನೆಯ ಅಧಿಕಾರಿಗಳು ಹಾಗೂ ಕುಟುಂಬಸ್ಥರೊಂದಿಗೆ ಗ್ರಾಮದಲ್ಲಿ ಕಿರಗಂದೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮೃತದೇಹವನ್ನು ದರ್ಶನಕ್ಕೆ ಇಟ್ಟು ಬಳಿಕ ಗ್ರಾಮದಲ್ಲಿ ಕೊಡವ ಸಾಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ: ಪತ್ನಿ ಸೀಮಂತಕ್ಕೆ ಬಂದ ಯೋಧ ಅಪಘಾತದಲ್ಲಿ ಸಾವು.. ಹುಟ್ಟೂರು ಬೈಲಹೊಂಗಲದಲ್ಲಿ ಭಾವಪೂರ್ಣ ವಿದಾಯ

ಮಹೇಶ್ ಅವರು ಕಳೆದ ತಿಂಗಳು ಊರಿಗೆ ಬಂದು ಈ ತಿಂಗಳ 10ರಂದು ಮತ್ತೆ ಸೇವೆಗೆ ವಾಪಸ್​ ಆಗಿದ್ದರು. ಮುಂದಿನ ನಾಲ್ಕು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದ ಮಹೇಶ್ ಅವರು, ಕರ್ತವ್ಯಕ್ಕೆ ತೆರಳಿದ ಎರಡು ದಿನದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮೃತರು ತಾಯಿ ಮಲ್ಲಿಗೆ, ಪತ್ನಿ ವಿನಂತಿ, ಮಕ್ಕಳಾದ ತೀಕ್ಷ್ಮ ಹಾಗೂ ಕವನ್ ಅವರುಗಳನ್ನು ಅಗಲಿದ್ದಾರೆ. ಯೋಧನ ನಿಧನದಿಂದ ಕುಟುಂಬ ಹಾಗೂ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.‌

ಇನ್ನು ಮೂನಾಲ್ಕು ತಿಂಗಳಿನಲ್ಲಿ ಇವರು ಪ್ರಮೋಷನ್ ಪಡೆಯುವುದರ ಜೊತೆ ನಿವೃತಿ ಹೊಂದಿ ಮನೆಗೆ ವಾಪಸ್​ ಆಗುವ ಹಂಬಲದಲಿದ್ದರು. ಆದರೆ ಇಲ್ಲಿ ವಿಧಿ ಆಟವೇ ಬೇರೆಯಾಗಿದ್ದು, ಮಹೇಶ್ ಎಂಬ ಯೋಧ ಇನ್ನು ನೆನಪು ಮಾತ್ರ.

ಇದನ್ನೂ ಓದಿ: ಪಂಜಾಬ್​​ ರಸ್ತೆ ಅಪಘಾತದಲ್ಲಿ ಹಾವೇರಿ ಯೋಧ ಸಾವು : ಸಿಎಂ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.