ETV Bharat / state

ಕೊಡಗು ಜಿಲ್ಲೆಗಿಲ್ಲ ಅನ್‌ಲಾಕ್‌ ಭಾಗ್ಯ : ಜುಲೈ 19ರವರೆಗೆ ಲಾಕ್‌ಡೌನ್‌ ಮುಂದುವರಿಕೆ

ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಬಂದ ಜನರಿಂದ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಕಾಫಿ ಕೆಲಸಕ್ಕೆ ಮತ್ತು ಪ್ರವಾಸಕ್ಕೆ ಬಂದವರಿಂದ ಕೋವಿಡ್ ಹರಡುತ್ತಿದೆ. ಈ ಕಾರಣಕ್ಕಾಗಿ ಜಿಲೆಯಲ್ಲಿ ಲಾಕ್‌ಡೌನ್ ಯತಾಸ್ಥಿತಿ ಮುಂದುವರೆದಿದೆ. ಕೋವಿಡ್ ನಿಯಮ ಪಾಲನೆ ಮಾಡುವಂತೆ ಶಾಸಕ ಕೆ.ಜಿ ಬೋಪ್ಪಯ್ಯ ಜನರಿಗೆ ಮನವಿ ಮಾಡಿದ್ದಾರೆ..

kodagu-district
ಕೊಡಗು ಜಿಲ್ಲೆ
author img

By

Published : Jul 4, 2021, 7:15 PM IST

ಕೊಡಗು : ಜಿಲ್ಲೆಯಲ್ಲಿ ಕೋವಿಡ್​​ ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಹಿನ್ನೆಲೆ ಜುಲೈ 19ರವರೆಗೆ ಲಾಕ್​ಡೌನ್​ ಮುಂದುವರೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದರಿಂದ ಅಂಗಡಿ-ಮುಂಗಟ್ಟು ತೆರೆದು ವ್ಯಾಪಾರ, ವಹಿವಾಟು ಮಾಡಬಹುದು ಎಂದು ಆಸೆ ಹೊಂದಿದ್ದ ಕೊಡಗಿನ ಜನರಿಗೆ ನಿರಾಶೆ ಉಂಟಾಗಿದೆ.

ಕೊಡಗು ಹೊರತುಪಡಿಸಿ ರಾಜ್ಯಾದ್ಯಂತ ಅನ್‌ಲಾಕ್‌ ಘೋಷಣೆ ಮಾಡಲಾಗಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗದ ಕಾರಣ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮುಂದುವರಿಕೆ ಮಾಡಲಾಗಿದ್ದು, ಜುಲೈ 19ರವರೆಗೆ ಪರಿಷ್ಕೃತ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆದೇಶ ಹೊರಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್‌ ಮುಂದುವರಿಕೆ

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಅಗತ್ಯ ವಸ್ತು ಖರೀದಿ ಅವಧಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಖರೀದಿಸಲು ಅವಕಾಶ ಇರುತ್ತದೆ. ಹೋಟೆಲ್, ಬಾರ್ ಅಂಡ್‌ ರೆಸ್ಟೋರೆಂಟ್‍ನಲ್ಲಿ ಪಾರ್ಸೆಲ್‍ಗೆ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಕೊಡಗಿಗೆ ಆಗಮಿಸುವವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ. ಭಾಗಮಂಡಲದಲ್ಲಿ ಮೃತರ ಪಿಂಡ ಪ್ರದಾನಕ್ಕೆ ಅವಕಾಶ ನೀಡಲಾಗಿದೆ. ಐದು ಜನರು ಮಾತ್ರ ಭಾಗವಹಿಸಬಹುದು. ಪ್ರವಾಸೋದ್ಯಮ ಚಟುವಟಿಕೆಗಳಿಗೂ ನಿರ್ಬಂಧ ಮುಂದುವರಿಕೆಯಾಗಲಿದೆ.

ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಬಂದ ಜನರಿಂದ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಕಾಫಿ ಕೆಲಸಕ್ಕೆ ಮತ್ತು ಪ್ರವಾಸಕ್ಕೆ ಬಂದವರಿಂದ ಕೋವಿಡ್ ಹರಡುತ್ತಿದೆ. ಈ ಕಾರಣಕ್ಕಾಗಿ ಜಿಲೆಯಲ್ಲಿ ಲಾಕ್‌ಡೌನ್ ಯತಾಸ್ಥಿತಿ ಮುಂದುವರೆದಿದೆ. ಕೋವಿಡ್ ನಿಯಮ ಪಾಲನೆ ಮಾಡುವಂತೆ ಶಾಸಕ ಕೆ.ಜಿ ಬೋಪ್ಪಯ್ಯ ಜನರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.