ETV Bharat / state

ವಿರಾಜಪೇಟೆಯಲ್ಲಿ ಭಾರಿ ಗಾತ್ರದ ಸರ್ಪ ಸೆರೆ... ಕಾಳಿಂಗನಿಗೇ ನೀರು ಕುಡಿಸಿದ ಭೂಪ!

author img

By

Published : Jan 27, 2020, 1:10 PM IST

Updated : Jan 27, 2020, 2:21 PM IST

ವಿರಾಜಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಬೃಹತ್​ ಗಾತ್ರದ ಕಾಳಿಂಗ ಸರ್ಪವೊಂದು ಸೆರೆಯಾಗಿದೆ. ಉರಗ ತಜ್ಞ ಶರತ್ ಈ ಹಾವನ್ನು ಹಿಡಿದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಾವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

King cobra
ಭಾರಿ ಗಾತ್ರದ ಕಾಳಿಂಗ ಸರ್ಪ

ಮಡಿಕೇರಿ: ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.

ಗ್ರಾಮದ ಜಯ ಎಂಬುವರ ತೋಟದ ತಾಳೆ ಮರದಲ್ಲಿ ಬಂದು ಸೇರಿಕೊಂಡಿದ್ದ 12 ಅಡಿ ಉದ್ದ 17 ಕೆ.ಜಿ. ತೂಕದ ಹಾವನ್ನು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆ ನಡೆಸಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಭಾನುವಾರ ಸಂಜೆ 5:30 ರ ಸುಮಾರಿಗೆ ಹಾವು ಸಂಪಿಗೆ ಮರದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಶರತ್ ಮತ್ತು ಅವರ ತಂಡ ಸತತ ಒಂದು ಗಂಟೆ ಕಾಲ ಪ್ರಯಾಸಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ.

ಭಾರಿ ಗಾತ್ರದ ಕಾಳಿಂಗ ಸರ್ಪಕ್ಕೆ ನೀರು ಕುಡಿಸಿದ ಉರಗ ತಜ್ಞ ಶರತ್​

ಸೆರೆಹಿಡಿದ ಅಪರೂಪದ ಹಾವನ್ನು ಇಂದು ಮಡಿಕೇರಿಯ ಗಾಂಧಿ ಮೈದಾನಕ್ಕೆ ತಂದು ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸಿದರು. ಈ ವೇಳೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ ಶರತ್ ಅವರು ಕಾಳಿಂಗ ಸರ್ಪ ಅಳಿವಿನ ಅಂಚಿನಲ್ಲಿರುವ ಸರಿಸೃಪ. ಹಾವುಗಳ ಬಗ್ಗೆ ಇರುವ ಕೆಲ ತಪ್ಪು ತಿಳುವಳಿಕೆಗಳಿಂದ ಹೊರಬನ್ನಿ. ಹಾವುಗಳು ಕಂಡುಬಂದರೆ ಅವುಗಳನ್ನು ಕೊಲ್ಲಲು ಮುಂದಾಗದೇ ನಮಗೆ ಮಾಹಿತಿ ನೀಡಿದ್ರೆ ನಾವು ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ ಮನವಿ ಮಾಡಿದ್ರು.

ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸುವ ಕೆಲಸ ಮಾಡುತ್ತಿರುವ ಸ್ನೇಕ್ ಶರತ್ ಈವರೆಗೆ 3ಸಾವಿರಕ್ಕೂ ಹೆಚ್ಚು ಸರಿಸೃಪಗಳನ್ನು ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಲಾಂ ಹೇಳಲೇಬೇಕು.

Intro:ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ..!

ಕೊಡಗು/ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.
ಗ್ರಾಮದ ಜಯ ಎಂಬುವರ ತೋಟದ ತಾಳೆ ಮರದಲ್ಲಿ ಬಂದು ಸೇರಿಕೊಂಡಿದ್ದ 12 ಅಡಿ ಉದ್ದ 17 ಕೆ.ಜಿ.ತೂಕದ ಭಾರೀ ಗಾತ್ರದ ಹಾವನ್ನು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆಮಾಡಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ನೆನ್ನೆ ಸಂಜೆ 5:30 ರ ಸುಮಾರಿಗೆ ಹಾವು ಸಂಪಿಗೆ ಮರದಲ್ಲಿರುವ ಬಗ್ಗೆ  ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಶರತ್ ಮತ್ತು ಅವರ ತಂಡ ಸತತ ಒಂದು ಗಂಟೆ ಪ್ರಾಯಾಸಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಹಾವನ್ನು ಇಂದು ಮಡಿಕೇರಿಯ ಗಾಂಧಿ ಮೈದಾನಕ್ಕೆ ತಂದು ಸಾರ್ವಜನಿಕವಾಗಿ ಪ್ರದರ್ಶನಮಾಡಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸೋ ಶರತ್ ಹಾವುಗಳ ಅಳಿವಿನ ಬಗ್ಗೆ ಜನರಿಗೆ ಹಾವುಗಳ ಬಗ್ಗೆ ಇರುವ ಕೆಲ ತಪ್ಪು,ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿ ಹಾವು ಕಂಡರೆ ಕೊಲ್ಲಬೇಡಿ ನಮಗೆ ಮಾಹಿತಿ ನೀಡಿ ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ.‌ ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸುವ ಕೆಲಸಮಾಡುತ್ತಿರುವ ಸ್ನೇಕ್ ಶರತ್ ಈವರೆಗೆ 3ಬಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ.
ಇವುಗಳ ಪೈಕಿ 23 ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಸೇರಿವೆ, ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸಮಾಡೋ ಕಾಳಿಂಗ ಸರ್ಪ ಆಕಶ್ಮಿಕವಾಗಿ ನೀರಿನ ಸಮೀಪ ಇರುವ ತಾಳೆ ಮರಕ್ಕೆ ಬಂದು ಸೇರಿಕೊಂಡಿತ್ತು, ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಶರತ್ ವಿರಾಜಪೇಟೆ ಸಮೀಪದ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
Last Updated : Jan 27, 2020, 2:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.