ETV Bharat / state

ಜಾತಿ ವರ್ಗೀಕರಣ ಪಟ್ಟಿಯಲ್ಲಿರುವಂತೆ ಕಾಪಾಳರ ವರದಿ ತಯಾರಿಸಿ ಪರಿಶಿಷ್ಟ ಪಂಗಡ ಆಯೋಗಕ್ಕೆ ಸಲ್ಲಿಸಲಾಗುತ್ತೆ : ಕೆ. ಜಯಪ್ರಕಾಶ ಹೆಗ್ಡೆ - ಕೊಡಗು ಕಾಪಾಳ ಸಮುದಾಯದ ಕುರಿತು ಕೆ ಜಯಪ್ರಕಾಶ್ ಹೆಗ್ಡೆ ಮಾಹಿತಿ

ಕೆ. ಜಯಪ್ರಕಾಶ ಹೆಗ್ಡೆ ಮತ್ತು ಸದಸ್ಯರಾದ ಹೆಚ್. ಎಸ್. ಕಲ್ಯಾಣ್ ಕುಮಾರ್, ಬಿ. ಎಸ್. ರಾಜಶೇಖರ್, ಕೆ. ಟಿ ಸುವರ್ಣ, ಅರುಣ್ ಕುಮಾರ್, ಶಾರದಾ ನಾಯ್ಕ ಹಾಗೂ ಇತರರು ಕೊಡಗು ಜಿಲ್ಲೆಯ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕಾಪಾಳ ಸಮಾಜದವರ ಸ್ಥಿತಿಗತಿ ಆಲಿಸಿದರು..

ಕೆ. ಜಯಪ್ರಕಾಶ ಹೆಗ್ಡೆ
ಕೆ. ಜಯಪ್ರಕಾಶ ಹೆಗ್ಡೆ
author img

By

Published : Apr 6, 2022, 3:35 PM IST

ಮಡಿಕೇರಿ : ಹಿಂದುಳಿದ ವರ್ಗಗಳ ಜಾತಿ ವರ್ಗೀಕರಣ ಪಟ್ಟಿಯಲ್ಲಿ ಕೆಟಗರಿ-1ರ ಕ್ರಮ ಸಂಖ್ಯೆ 26ರಲ್ಲಿ ‘ಕೊಡಗು ಕಾಪಾಳ’ ಎಂದು ಇದೆ. ತಮ್ಮ ಜೀವನ ಶೈಲಿಯನ್ನು ಗಮನಿಸಿದಾಗ ಬುಡಕಟ್ಟು ಸಂಸ್ಕೃತಿ, ಸಂಪ್ರದಾಯ ಹೊಂದಿದೆ. ಆ ನಿಟ್ಟಿನಲ್ಲಿ ವರದಿ ತಯಾರಿಸಿ ಪರಿಶಿಷ್ಟ ಪಂಗಡ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿರುವುದು..

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ತಂಡವು ಕಕ್ಕಬ್ಬೆ ಗ್ರಾಪಂ ವ್ಯಾಪ್ತಿಯ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ಕಾಪಾಳ ಸಮಾಜದವರು ವಾಸಿಸುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸುದೀರ್ಘವಾಗಿ ಚರ್ಚಿಸಿ ಮಾಹಿತಿ ಪಡೆದರು. ಆರಂಭದಲ್ಲಿ ಮಾತನಾಡಿದ ಕಾಪಾಳ ಸಮಾಜದ ಪ್ರಮುಖರಾದ ಕಾಪಾಳರ ತಮ್ಮಯ್ಯ ಅವರು, ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ 32 ಮನೆಗಳಿವೆ.

ಸುಮಾರು 200ಕ್ಕಿಂತ ಕಡಿಮೆ ಜನಸಂಖ್ಯೆಯಲ್ಲಿದ್ದಾರೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಕಾಪಾಳ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ದಟ್ಟ ಕಾನನದಲ್ಲಿ ವಾಸಿಸುತ್ತಿದ್ದ ಕಾಪಾಳ ಜನಾಂಗದವರನ್ನು ಅಂದಿನ ರಾಜರು ನಾಲ್ಕುನಾಡು ಅರಮನೆ ‘ಕಾವಲು ಕಾಯಲು’ ಕರೆದುಕೊಂಡು ಬಂದರು.

ಕಾಪಾಳರು ಎಂದರೆ ಕಾವಲುಗಾರರು, ಕಾಪಾಡುವವರು, ರಕ್ಷಕರು ಎಂಬ ಅರ್ಥವಿದೆ ಎಂದು ಕಾಪಾಳರ ತಮ್ಮಯ್ಯ ಅವರು ತಿಳಿಸಿದರು. ಅಂದಿನ ರಾಜರು ಕಾಪಾಳ ಸಮಾಜದವರಿಗೆ ಸ್ವಲ್ಪ ಜಾಗ ನೀಡಿ ನಾಲ್ಕುನಾಡು ಅರಮನೆ ಕಾವಲುಗಾರರನ್ನಾಗಿ ನೇಮಿಸಿಕೊಂಡಿದ್ದರು. ಕಾಪಾಳ ಸಮಾಜವು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ತುಂಬಾ ಹಿಂದೆ ಉಳಿದಿದೆ. ಕಾಪಾಳ ಜನಾಂಗಕ್ಕೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ.

ಆದ್ದರಿಂದ, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಅವರು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ಅವರು, ಕಾಪಾಳ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವರು ಮತ್ತು ಸರ್ಕಾರಿ ಉದ್ಯೋಗ ಪಡೆದಿರುವವರು ಎಷ್ಟು ಮಂದಿ ಎಂದು ಮಾಹಿತಿ ಪಡೆದರು.

ಯಾರೂ ಸಹ ಸರ್ಕಾರಿ ಉದ್ಯೋಗ ಪಡೆದಿಲ್ಲ : ಈ ಸಂದರ್ಭದಲ್ಲಿ ಒಂದಿಬ್ಬರು ಪದವಿ ಹಂತಕ್ಕೆ ಓದಿದ್ದಾರೆ. ಅದು ಬಿಟ್ಟು ಯಾರೂ ಸಹ ಸರ್ಕಾರಿ ಉದ್ಯೋಗವನ್ನು ಪಡೆದಿಲ್ಲ ಎಂದು ಕಾಪಾಳರ ಪ್ರಮುಖರೊಬ್ಬರು ಮಾಹಿತಿ ನೀಡಿದರು. ಕಾಪಾಳರು ಕೊಡಗಿನ ಮೂಲ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಕೊಡವ ಸಂಸ್ಕೃತಿ, ಸಂಪ್ರದಾಯ ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕುಡಿಯರ ಭರತ್‍ಚಂದ್ರ ದೇವಯ್ಯ ಮತ್ತು ಕಾಪಾಳ ಜನಾಂಗದ ಪ್ರಮುಖರಾದ ಪೊನ್ನಪ್ಪ ಅವರು ಮಾತನಾಡಿ, ಕಾಪಾಳ ಸಮುದಾಯದ ಬಗ್ಗೆ ಕುಲಶಾಸ್ತ್ರ ಅಧ್ಯಯನ ಆಗಬೇಕು. ತಾತ ಮುತ್ತಾತಂದಿರ ಹೆಸರಿನಲ್ಲಿ ಭೂಮಿ ಇದೆ. ಆದರೆ, ಮಕ್ಕಳ ಹೆಸರಿಗೆ ಆರ್​ಟಿಸಿ ಆಗಿಲ್ಲ ಎಂದು ಅವರು ತಿಳಿಸಿದರು. ಪಂಚಾಯತ್‌ ವತಿಯಿಂದ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಅವರು ಕೋರಿದರು.

ಮಾಹಿತಿ ಆಲಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಅವರು, ಏಪ್ರಿಲ್ 6ರಂದು ಜಿಲ್ಲಾಧಿಕಾರಿ ಅವರ ಜೊತೆ ಸಭೆ ನಡೆಯಲಿದ್ದೇವೆ. ಈ ಸಭೆಯಲ್ಲಿ ಕಾಪಾಳರ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಕಾಪಾಳರ ಸ್ಥಿತಿಗತಿ ಆಲಿಸುವ ಸಂದರ್ಭದಲ್ಲಿ ಕಾಪಾಳ ಸಮಾಜದ ಪ್ರಮುಖರು ದುಡಿ ನುಡಿಸಿದರು. ಮಹಿಳೆಯರು ನೃತ್ಯ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾಪಾಳರ ಪ್ರಕಾಶ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಕಾಪಾಳರ ಹಿರಿಯರೊಂದಿಗೆ ಮಾತುಕತೆ ನಡೆಸಿದರು.

ಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ: ಸರ್ಕಾರಕ್ಕೆ ಪ್ರಮೋದಾ ದೇವಿ ಸಲಹೆ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.