ETV Bharat / state

ಸೌಂದರ್ಯದ ಖನಿ ಕೊಡಗು.. ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ‌ ಇರ್ಫು ಫಾಲ್ಸ್ - Irfu Falls is a popular tourist attraction, ETV Bharath, kannada news, Madikeri, kodagu, Irfu falls

ಹಸಿರ ಹಾಸಿಗೆ ಹೊದ್ದು ಮಲಗಿರುವ ಪರ್ವತಗಳು, ಮುಗಿಲಿಗೆ ಮುತ್ತಿಡುವಂತೆ ಭಾಸವಾಗುವ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು...ಇನ್ನು ಮಳೆಗಾಲದಲ್ಲಿ ಧುಮ್ಮಿಕ್ಕಿ  ಹರಿವ ಜಲಪಾತಗಳ ರಮಣೀಯ ಸೌಂದರ್ಯ ತಣಿಯಲು ಆಗಮಿಸುತ್ತಿರುವ ಪ್ರವಾಸಿಗರು.

ಇರ್ಫು ಜಲಪಾತ
author img

By

Published : Jul 19, 2019, 10:11 PM IST

ಕೊಡಗು: ಹಸಿರ ಹಾಸಿಗೆ ಹೊದ್ದು ಮಲಗಿರುವ ಪರ್ವತಗಳು, ಮುಗಿಲಿಗೆ ಮುತ್ತಿಡುವಂತೆ ಭಾಸವಾಗುವ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು...ಇನ್ನು ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿವ ಜಲಪಾತಗಳ ರಮಣೀಯ ಸೌಂದರ್ಯ ತಣಿಯಲು ಆಗಮಿಸುತ್ತಿರುವ ಪ್ರವಾಸಿಗರು. ಇವೆಲ್ಲವೂ ಕಂಡು ಬಂದಿದ್ದು ಕೊಡಗಿನ ರಮಣೀಯ ಇರ್ಫು‌ ಜಲಪಾತದ ಬಳಿ.

ಇರ್ಫು ಜಲಪಾತ

ಮಂಜಿನ ನಗರಿ ಮಡಿಕೇರಿಯಲ್ಲಿ ಇರುವ ಪ್ರಮುಖ ಜಲಪಾತಗಳಲ್ಲಿ ಇರ್ಫು ಕೂಡ ಒಂದು. ಮಳೆಗಾಲದಲ್ಲಿ ಭೋರ್ಗರೆದು ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯಕ್ಕೆ ಮಾರು ಹೋಗುವ ಪ್ರವಾಸಿಗನಿಲ್ಲ. ಅದನ್ನು ಸವಿಯುವುದೇ ಕಣ್ಣಿಗೆ ಹಬ್ಬ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ತನ್ನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ವಿಸ್ತಾರವಾದ ಬೆಟ್ಟದ ಮೇಲಿಂದ ಹಾಲಿನ ನೊರೆಯ‌ ರೂಪದಲ್ಲಿ‌ ಧರೆಗಿಳಿಯುವ ಜಲರಾಶಿ ಕಣ್ತುಂಬಿ ಕೊಳ್ಳುವುದೇ ಒಂದು ಸೊಗಸು. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಜಲಪಾತದ ಸೊಬಗು ನೋಡಿ ಮೈಮರೆತು ಇಲ್ಲಿಯೇ ದಿನ ಕಳೆಯುತ್ತಾರೆ. ‌ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ನೀರಲ್ಲಿ ತೊಯ್ದು ಮನರಂಜನೆ ಪಡೆಯುತ್ತಾರೆ.

ಮಳೆಗಾಲ ಶುರುವಾಗುತ್ತಿದ್ದಂತೆ ಕೊಡಗಿನ ಹಲವು ಜಲಪಾತಗಳಿಗೆ ಪ್ರವಾಸ ಕೈಗೊಳ್ಳುತ್ತೇನೆ. ಅದರಲ್ಲಿ ವಿಶೇಷವಾಗಿ ಇರ್ಫು ಫಾಲ್ಸ್ ಕೂಡ. ಕೆಲಸದ‌ ಒತ್ತಡದ ನಡುವೆ ವಾರಾಂತ್ಯದಲ್ಲಿ ಇಲ್ಲಿಗೆ‌‌ ಬಂದರೆ ಮನರಂಜನೆ ಜೊತೆಗೆ ನೆಮ್ಮದಿ ಸಿಗುತ್ತೆ ಎನ್ನುತ್ತಾರೆ ಪ್ರವಾಸಿಗ ಮಹೇಶ್.

ಇದು ಕಾವೇರಿಯ ಉಪನದಿ ಲಕ್ಷ್ಮಣತೀರ್ಥ ನದಿಯಾಗಿದೆ. ಪುರಾತನ ಕಾಲದಲ್ಲಿ ಲಕ್ಷ್ಮಣ ಇಲ್ಲಿ ನೀರು ಕುಡಿದಿದ್ದ ಎಂಬ ಐತಿಹ್ಯವಿದೆ. ಬಿಟ್ಟು, ಬಿಟ್ಟು ಬರುತ್ತಿರುವ ಮುಂಗಾರಿನ ಜೊತೆಗೆ, ಚುಮು ಚುಮು ಚಳಿಯನ್ನು ಲೆಕ್ಕಿಸದೆ ಆಗಮಿಸಿ ಕ್ಷೀರಧಾರೆ ರೀತಿಯಲ್ಲಿ ಹರಿಯುವ ನೀರಿನಲ್ಲಿ ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ ಎನ್ನುತ್ತಾರೆ ಪ್ರವಾಸಿಗ ಸಂತೋಷ್.

Intro:ಸೌಂದರ್ಯದ ಖನಿ ಕೊಡಗು; ಪ್ರವಾಸಿಗರನ್ನು ಸೆಳೆಯುತ್ತಿದೆ‌ ಇರ್ಫು ಜಲಪಾತ 

ಕೊಡಗು: ಹಸಿರ ಹಾಸಿಗೆಯನ್ನೆ ಹೊದ್ದು ಮಲಗಿರುವ ಪರ್ವತಗಳ ರಾಶಿ, ಮುಗಿಲಿಗೆ ಮುತ್ತಿಡುವಂತೆ ಭಾಸವಾಗುವ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು...ಇನ್ನು ಮಳೆಗಾಲದಲ್ಲಿ ದುಮ್ಮಿಕ್ಕಿ ಹರಿವ ಜಲಪಾತಗಳ ರಮಣೀಯ ಸೌಂದರ್ಯ ನೋಡಿ ತಣಿಯಲು ಆಗಮಿಸುತ್ತಿರು ಪ್ರವಾಸಿಗರು. ಇವೆಲ್ಲವೂ ಕಂಡು ಬಂದಿದ್ದು ಇರ್ಫು‌ ಜಲಪಾತದ ಬಳಿ. 

ಮಂಜಿನ ನಗರಿ ಮಡಿಕೇರಿಯಲ್ಲಿನ ಪ್ರಮುಖ ಜಲಪಾತಗಳಲ್ಲಿ ಇರ್ಫು ಜಲಪಾತ ಕೂಡ. ಮಳೆಗಾಲದಲ್ಲಿ ಬೋರ್ಗೆರೆದು ಎತ್ತರದಿಂದ ದುಮ್ಮಿಕ್ಕುವ ಫಾಲ್ಸ್‌ ಸೌಂದರ್ಯ ಸವಿಯುವುದೇ ಕಣ್ಣಿಗೆ ಹಬ್ಬ.ಮುಂಗಾರು ಮಳೆ ಆರಂಭವಾಗುತ್ತಲೆ ತನ್ನ ಸೌಂದರ್ಯ  ಇಮ್ಮಡಿಗೊಳ್ಳುತ್ತದೆ.ವಿಸ್ತಾರವಾದ ಬೆಟ್ಟದ ಮೇಲಿಂದ ಹಾಲಿನ ನೊರೆಯ‌ ರೂಪದಲ್ಲಿ‌ ಧರೆಗಿಳಿಯುವ ಜಲರಾಶಿ ಕಣ್ತುಂಬಿ ಕೊಳ್ಳುವುದೇ ಒಂದು ಸೊಗಸು.ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಜಲಪಾತದ ಸೊಬಗು ನೋಡಿ ಮೈ ಮರೆತು‌ ಸೆಲ್ಫಿ  ತೆಗೆದುಕೊಂಡು. ನೀರಲ್ಲಿ ತೊಯ್ದು ಮನರಂಜನೆ ಪಡೆಯುತ್ತಾರೆ. 

ರಾಜ್ಯದಲ್ಲಿ ಕೊಡಗು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಮಳೆಗಾಲದಲ್ಲಿ ನಾನು ಇಲ್ಲಿ ಹಲವು ಜಲಪಾತಗಳನ್ನು ಕಾಣಬಹುದು.ಅದರಲ್ಲಿ ವಿಶೇಷವಾಗಿ ಇರ್ಫು ಫಾಲ್ಸ್ ಕೂಡ.ಕೆಲಸದ‌ ಒತ್ತಡದ ನಡುವೆ ವಾರಾಂತ್ಯದಲ್ಲಿ ಇಲ್ಲಿಗೆ‌‌ ಬಂದರೆ ಮನರಂಜನೆ ಜೊತೆಗೆ ನೆಮ್ಮದಿ ಸಿಗುತ್ತೆ ಎನ್ನುತ್ತಾರೆ ಪ್ರವಾಸಿಗ ಮಹೇಶ್.

ಬೈಟ್-1 ಮಹೇಶ್, ಪ್ರವಾಸಿಗ 

ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದ ಬೆಟ್ಟಗುಡ್ಡಗಳ ನಡುವೆ ದುಮ್ಮಿಕ್ಕುವ ಈ ಜಲಪಾತ ಕೊಡಗಿನ ಪ್ರಮುಖ ಜಲಪಾತಗಳಲ್ಲಿ ಒಂದು. ಸದಾ ಹಸಿರಿನಿಂದ ಕೂಡಿರುವ ಗಿರಿ-ಶಿಖರಗಳ ಮಧ್ಯೆ ಮುಮ್ಮಿಕ್ಕುವ ಜಲಪಾತದ ನೋಡಲು ಪ್ರತಿನಿತ್ಯ ಹಲವು ಪ್ರವಾಸಿಗರು ಬರುತ್ತಾರೆ.ಇದು ಕಾವೇರಿಯ ಉಪನದಿ ಲಕ್ಷ್ಮಣತೀರ್ಥ ನದಿ ಆಗಿದ್ದು, ಪುರಾತನ ಕಾಲದಲ್ಲಿ ಲಕ್ಷ್ಮಣ ಇಲ್ಲಿ ಬಂದು ನೀರು ಕುಡಿದಿದ್ದ ಎಂಬ ಐತಿಹ್ಯವಿದೆ.  

ಐತಿಹಾಸಿಕ ಹಿನ್ನಲೆ ಒಳಗೊಂಡ ಇರ್ಫು ಜಲಪಾತದಲ್ಲಿ, ಬಿಟ್ಟು, ಬಿಟ್ಟು ಬರುತ್ತಿರುವ ಮುಂಗಾರಿನ ಜೊತೆಗೆ , ಚುಮು ಚುಮು ಚಳಿಯನ್ನು ಲೆಕ್ಕಿಸದೆ ಆಗಮಿಸಿ ಕ್ಷೀರಧಾರೆ ರೀತಿಯಲ್ಲಿ ಹರಿಯುವ ನೀರಿನಲ್ಲಿ ಕಾಲ ಕಳೆವುದೇ  ಗೊತ್ತಾಗಲ್ಲ ಅಂತಾರೆ ಪ್ರವಾಸಿಗ ಸಂತೋಷ್.

 ಬೈಟ್-2 ಸಂತೋಷ್, ಪ್ರವಾಸಿಗ 

ಒಟ್ಟಿನಲ್ಲಿ ‌ಪಶ್ಚಿಮಘಟ್ಟದಲ್ಲಿ ಇರುವ ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನ ಸೆಳೆಯುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ-ತೊರೆಗಳು ಪ್ರಾಕೃತಿಕ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಿದ್ದು, ನಿಸರ್ಗದ ತಪ್ಪಲಿನ ಪ್ರವಾಸಿತಾಣಗಳು ಮುಂಗಾರು ಮಳೆಯ ಸಿಂಚನಕ್ಕೆ ಹೊಸರೂಪ ತಳೆದು ಕಣ್ಮನ ಸೆಳೆಯುತ್ತಿವೆ.‌

-ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌

Body:0

Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.