ಕೊಡಗು : ಐದು ಬಾರಿ ಶಾಸಕನಾಗಿರುವೆ. 23 ವರ್ಷಗಳಿಂದ ಜನ ಸೇವೆ ಸಲ್ಲಿಸುತ್ತಿರುವ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಂಚಿವ ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆ ಆಗುವುದೋ ಗೊತ್ತಿಲ್ಲ. ಆದ ಬಳಿಕ ಸಂಪುಟದಲ್ಲಿ ಸ್ಥಾನದ ಬಗ್ಗೆ ಹೇಳಬಲ್ಲೆ. ರಾಜ್ಯ ಸಮಿತಿ ಕೇಂದ್ರಕ್ಕೆ ನೀಡಿರುವ ಹೆಸರುಗಳ ವರದಿಯನ್ನು ನಾನು ನಂಬುವುದಿಲ್ಲ.
ರಾಜ್ಯದಲ್ಲಿ ಶಾಸಕ ಎಸ್ ಅಂಗಾರ ಮತ್ತು ನಾನು ಇಬ್ಬರು ಹಿರಿಯರಿದ್ದೇವೆ. ಅರ್ಹರನ್ನು ಕೇಂದ್ರ ಸಮಿತಿ ಶಿಫಾರಸು ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. ಸಿಎಂ ಬದಲಾವಣೆ ವದಂತಿಯ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರವಿದೆ. ಇವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಯಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದರು.