ETV Bharat / state

ಮಡಿಕೇರಿಯಲ್ಲಿ ವೆಂಕಟ ತಂದಿಟ್ಟ ಸಂಕಟ... ಕಾರು ಗ್ಲಾಸ್​ ಪುಡಿಪುಡಿ, ಸ್ಥಳೀಯರಿಂದ ಬಿಸಿಬಿಸಿ ಕಜ್ಜಾಯ! - ಸ್ಯಾಂಡಲ್​ವುಡ್​ ನಟ

ಸ್ಯಾಂಡಲ್​ವುಡ್​ ನಟ ಹುಚ್ಚ ವೆಂಕಟ್​ ಮಡಿಕೇರಿಯಲ್ಲಿ ಅಟ್ಟಹಾಸ ಮೆರೆದಿದ್ದು, ಇಲ್ಲಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸು ಪುಡಿ ಪುಡಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದೆ.

ಮಡಿಕೇರಿಯಲ್ಲಿ ವೆಂಕಟ ಹುಚ್ಚಾಟ
author img

By

Published : Aug 29, 2019, 10:01 PM IST

ಮಡಿಕೇರಿ: ಚೆನ್ನೈ ನಗರದಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಆಟಾಟೋಪ ಮುಂದುವರೆಸಿದ್ದಾರೆ. ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಮಡಿಕೇರಿ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನ ಗಾಜನ್ನು ವೆಂಕಟ್ ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ. ನಂತರ ಕಾರು ಚಾಲಕನ ಪಕ್ಕದ ಬಾಗಿಲು ಮುರಿಯಲು ಮುಂದಾಗಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಅವರು ಕೆಲಕಾಲ ಆತಂಕ ಸೃಷ್ಟಿಸಿದ್ರು. ಪುಟ್‌ಫಾತ್ ಮೇಲೆಲ್ಲಾ ದಿಲೀಪ್‌ ಎಂಬವರ ಮೇಲೆ ಹಲ್ಲೆ ನಡೆಸಲು ಅಟ್ಟಾಡಿಸಿದ್ದಾರೆ. ಅಲ್ಲದೆ ಹೋಟೇಲ್ ಮುಂದೆ ನಿಲ್ಲಿಸಿದ್ದ ಮಾರುತಿ 800 ಕಾರಿನ ಮೇಲೂ ಕಲ್ಲೆಸೆದು ಗಾಜು ಪುಡಿಮಾಡಿದ್ದಲ್ಲದೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ಮಡಿಕೇರಿಯಲ್ಲಿ ವೆಂಕಟ ಹುಚ್ಚಾಟ

ನಾಪೋಕ್ಲು ನಿವಾಸಿ ದಿಲೀಪ್, ಹೋಟೆಲ್ ಕೂರ್ಗ್ ಮ್ಯಾಂಡ್ರಿಲ್ ಬಳಿ ಕಾರು ಪಾರ್ಕ್​ ಮಾಡಿ ಹುಚ್ಚ ವೆಂಕಟ್​​ ಅವರನ್ನು ಆಶ್ಚರ್ಯದಿಂದ ನೋಡಿದ್ದಾರೆ. ಇದು ಹುಚ್ಚ ವೆಂಕಟ್ ಅವರನ್ನು ಕೆರಳಿಸಿದೆ. ಆಮೇಲೆ ಏನು ನಡೀತು ಅನ್ನೋದನ್ನು ದಿಲೀಪ್ ವಿವರಿಸಿದ್ರು.ವೆಂಕಟ್ ಹುಚ್ಚಾಟ ಮೀತಿ ಮೀರಿದಾಗ ಸ್ಥಳಕ್ಕೆ ಬಂದ ಮಡಿಕೇರಿ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ. ತಂದ ನಂತರ ಅವರನ್ನು ಪೊಲೀಸ್ ಭದ್ರತೆಯಲ್ಲಿ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Intro:Body:

ಮಡಿಕೇರಿ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನ ಗಾಜನ್ನು ವೆಂಕಟ್ ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ. ನಂತರ ಕಾರು ಚಾಲಕನ ಪಕ್ಕದ ಬಾಗಿಲು ಕೀಳಲು ಮುಂದಾಗಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಅವರು ಕೆಲಕಾಲ ಆತಂಕ ಸೃಷ್ಟಿಸಿದ್ರು. ಪುಟ್‌ಫಾತ್ ಮೇಲೆಲ್ಲಾ ದಿಲೀಪ್‌ ಎಂಬವರ ಮೇಲೆ ಹಲ್ಲೆ ನಡೆಸಲು ಅಟ್ಟಾಡಿಸಿದ್ದಾರೆ. ಅಲ್ಲದೆ ಹೋಟೇಲ್ ಮುಂದೆ ನಿಲ್ಲಿಸಿದ್ದ  ಮಾರುತಿ 800 ಕಾರಿನ ಮೇಲೂ ಕಲ್ಲೆಸೆದು ಪುಡಿಮಾಡಿದ್ದಲ್ಲದೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ನಾಪೋಕ್ಲು ನಿವಾಸಿ ದಿಲೀಪ್, ಹೋಟೆಲ್ ಕೂರ್ಗ್ ಮ್ಯಾಂಡ್ರಿಲ್ ಬಳಿ ಕಾರು ಪಾರ್ಕ್​ ಮಾಡಿ ಹುಚ್ಚ ವೆಂಕಟ್​​ ಅವರನ್ನು ಆಶ್ಚರ್ಯದಿಂದ ನೋಡಿದ್ದಾರೆ. ಇದು ಹುಚ್ಚ ವೆಂಕಟ್ ಅವರನ್ನು ಕೆರಳಿಸಿದೆ. ಆಮೇಲೆ ಏನು ನಡೀತು ಅನ್ನೋದನ್ನು ದಿಲೀಪ್ ವಿವರಿಸಿದ್ರು.ವೆಂಕಟ್ ಹುಚ್ಚಾಟ ಮೀತಿ ಮೀರಿದಾಗ ಸ್ಥಳಕ್ಕೆ ಬಂದ ಮಡಿಕೇರಿ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ. ತಂದ ನಂತರ ಅವರನ್ನು ಪೊಲೀಸ್ ಭದ್ರತೆಯಲ್ಲಿ ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.