ETV Bharat / state

ರಾಮ ಮಂದಿರ ನಿರ್ಮಾಣಕ್ಕೆ ತಲಕಾವೇರಿಯ ತೀರ್ಥ ರವಾನೆ - Kodagu

ಕೊಡಗಿನ ತಲಕಾವೇರಿ ಕ್ಷೇತ್ರದಿಂದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಲಕಾವೇರಿಯಿಂದ ಅಯೋಧ್ಯೆಗೆ ತೀರ್ಥವನ್ನು ಕಳುಹಿಸಿದ್ದಾರೆ.

Kodagu
ಕೊಡಗಿನಿಂದ ಮಣ್ಣು ಸಂಗ್ರಹಿಸಿದ ಹಿಂದೂ ಕಾರ್ಯಕರ್ತರು
author img

By

Published : Jul 23, 2020, 11:04 PM IST

ತಲಕಾವೇರಿ/ ಕೊಡಗು: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಕೊಡಗಿನಿಂದ ಮೃತ್ತಿಕೆ (ಮಣ್ಣು)ಯನ್ನು ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ಸಹಯೋಗದೊಂದಿಗೆ ಸಂಗ್ರಹಿಸಲಾಯಿತು.

Kodagu
ರಾಮ ಮಂದಿರ ನಿರ್ಮಿಸಲು ಕೊಡಗಿನಿಂದ ಮಣ್ಣು ಸಂಗ್ರಹ

ಕೊಡಗಿನ ತಲಕಾವೇರಿ ಕ್ಷೇತ್ರದಿಂದ ಮೃತ್ತಿಕೆ ಸಂಗ್ರಹಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ತಲಕಾವೇರಿಯಿಂದ ಅಯೋಧ್ಯೆಗೆ ತೀರ್ಥವನ್ನು ಕಳುಹಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಚಾರ. ಹಲವು ಹಿಂದೂ ಸಂಘಟನೆಯ ಕಾರ್ಯಕರ್ತರ ಬಲಿದಾನ ಕೊಟ್ಟಿರುವುದಕ್ಕೂ ಇಂದು ಸಾರ್ಥಕವಾಗಿದೆ. ಮುಂದಿನ ದಿನಗಳಲ್ಲಿ ದೇಶ ಸುಭಿಕ್ಷವಾಗಿ ವಿಶ್ವಗುರುವಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಹಾರೈಸಿದರು.

ಇನ್ನು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಇಂದು ಭಕ್ತಿ, ಶ್ರದ್ಧೆಯಿಂದ ಕುಲದೇವರಿಗೆ ಪೂಜೆ ಸಲ್ಲಿಸಿದ್ದೇವೆ. ನಾವು 1992 ರಲ್ಲಿ ಅಯೋಧ್ಯೆಗೆ ಹೋಗಿದ್ದೆವು. ಅಂದು ಹೋಗಿದ್ದಕ್ಕೆ ಇಂದು ಸಾರ್ಥಕವಾಗಿದೆ. ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಎಲ್ಲರೂ ಒಟ್ಟಾಗಿ ರಾಮಮಂದಿರ ನಿರ್ಮಾಣಕ್ಕೆ ಕೊಡಗಿನ ಪುಣ್ಯನದಿ ತಲಕಾವೇರಿಯಿಂದ ತೀರ್ಥವನ್ನು ಸಂಗ್ರಹಿಸಿ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.