ETV Bharat / state

ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ.. ಹನಿಟ್ರ್ಯಾಪ್​ ಆರೋಪದ ಕುರಿತು ಪೊಲೀಸರಿಂದ ತನಿಖೆ

ಮಡಿಕೇರಿ ನಗರದ ಉಕ್ಕುಡ ಸಮೀಪದ ಪಂಪಿನ ಕೆರೆಯಲ್ಲಿ ಮಾಜಿ ಸೈನಿಕ ಸಂದೇಶ್​ ಅವರ ಮೃತದೇಹ ಪತ್ತೆಯಾಗಿದೆ.

ಹನಿಟ್ರ್ಯಾಪ್​ ಆರೋಪದ ಕುರಿತು ಪೊಲೀಸರಿಂದ ತನಿಖೆ

author img

By ETV Bharat Karnataka Team

Published : Nov 9, 2023, 5:55 PM IST

Updated : Nov 9, 2023, 8:49 PM IST

ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್

ಕೊಡಗು (ಮಡಿಕೇರಿ): ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಮಾಜಿ ಸೈನಿಕ, ನಗರದ ಉಕ್ಕುಡ ನಿವಾಸಿ ಸಂದೇಶ್‌ (38) ಅವರ ಮೃತದೇಹ ಸಮೀಪದ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ. ಜಿಲ್ಲಾ ಪೊಲೀಸರು ಸತತ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆಸಿದ್ದಾರೆ.

ಮಂಗಳವಾರ ಸಂದೇಶ ಅವರು ನಾಪತ್ತೆಯಾಗಿದ್ದು, ಮನೆಯಲ್ಲಿ ಡೆತ್‌ನೋಟ್‌ ಮತ್ತು ಕೆರೆಯ ದಂಡೆಯಲ್ಲಿ ಅವರ ಚಪ್ಪಲಿ ಮತ್ತು ವಾಚ್‌ ಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಸ್ಥಳೀಯ ಮುಳುಗುತಜ್ಞರು ಶೋಧ ನಡೆಸಿದರೂ ಸುಳಿವು ಲಭಿಸದ ಕಾರಣ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರನ್ನು ಕರೆಸಲಾಗಿತ್ತು. ಬುಧವಾರ ರಾತ್ರಿ 8.20ರ ಸುಮಾರಿಗೆ 40 ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ ಮಹಜರಿಗಾಗಿ ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ ಸಂದೇಶ್ ಮೃತದೇಹ ರವಾನೆ ಮಾಡಲಾಗಿತ್ತು.

ಮೃತನ ಪತ್ನಿಯಿಂದ ಪೊಲೀಸ್​ ಠಾಣೆಗೆ ದೂರು; ಮಾಜಿ ಸೈನಿಕ ಸಂದೇಶ್ ತನ್ನ ಸಾವಿಗೆ ಮಹಿಳೆ ಹಾಗೂ ಆಕೆಯನ್ನು ಬೆಂಬಲಿಸುತ್ತಿದ್ದ ಇತರ ಇಬ್ಬರು ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಮಂಗಳವಾರ ಸಂಜೆ ಪಂಪಿನ ಕೆರೆಗೆ ಹಾರಿದ್ದರು. ಸಾವಿಗೀಡಾದ ಸಂದೇಶ್​ ಪತ್ನಿ ದೂರಿನ ಆಧಾರದ ಮೇರೆಗೆ ಸದ್ಯದಲ್ಲಿಯೇ ಮಹಿಳೆ ಹಾಗೂ ಇತರ ಆರೋಪಿಗಳನ್ನು ಪೊಲೀಸರು ತನಿಖೆ ನಡೆಸಿ ಬಂಧಿಸುವ ಸಾಧ್ಯತೆ ಇದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮಾರ್ಗದರ್ಶನದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ.

ಮಹಿಳೆಯನ್ನು ಕೂಡಲೇ ಬಂಧಿಸಬೇಕು. ಡೆತ್​ನೋಟ್​ನಲ್ಲಿ ಹೆಸರಿರುವ ಉಳಿದ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಂದೇಶ್ ಸಂಬಂಧಿಕರು, ಗೆಳೆಯರು ಒತ್ತಾಯಿಸಿದ್ದಾರೆ. ಪಂಪಿನಕೆರೆಯಲ್ಲಿ ಸಂಬಂಧಿಕರ ನೋವಿನ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಜರಿಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಂದೇಶ್ ಮೖತದೇಹ ರವಾನೆ ಮಾಡಲಾಗಿದೆ.

ಮೃತದೇಹ ಪತ್ತೆಗೂ ಮುನ್ನ ಈ ಕುರಿತಂತೆ ಮಾಹಿತಿ ನೀಡಿದ್ದ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್​, ''ಡೆತ್​ನೋಟ್​ ಬರೆದಿಟ್ಟು ಮಾಜಿ ಯೋಧ ಸಂದೇಶ್​ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೇಶ್ ಅವರ ಪತ್ನಿ ನಮ್ಮ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಮಹಿಳೆಯೊಬ್ಬರು ತಮ್ಮ ಗಂಡನಿಗೆ ಹೆದರಿಸಿ ದುಡ್ಡು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ಅನ್ನು ದಾಖಲು ಮಾಡಿದ್ದೇವೆ. ಪಂಪಿನ ಕೆರೆಯಲ್ಲಿ ನಮ್ಮ ಇನ್​ಸ್ಪೆಕ್ಟರ್​, ಸಬ್​ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ಮೃತದೇಹವನ್ನು ಹುಡುಕುತ್ತಿದ್ದೇವೆ. ಅವರು ಸೂಸೈಡ್​ ಮಾಡಿಕೊಂಡಿದ್ದಾರಾ?. ಅಥವಾ ಬೇರೆ ಎಲ್ಲಿಯಾದ್ರು ಹೋಗಿದ್ದಾರಾ ಎಂಬುದನ್ನು ನೋಡುತ್ತಿದ್ದೇವೆ'' ಎಂದಿದ್ದರು.

ಅಲ್ಲದೇ ವಸೂಲಿ ಮಾಡಿರುವ ಹಣದ ಬಗ್ಗೆಯೂ ನಾವು ತನಿಖೆ ಮಾಡುತ್ತೇವೆ. ಎರಡು ವಿಚಾರಗಳಿಗೂ ನಾವು ತನಿಖೆ ನಡೆಸುತ್ತಿದ್ದೇವೆ. ಒಂದು ಸುಸೈಡ್​ ಬಗ್ಗೆ ಮತ್ತೊಂದು ಬೇರೆ ಏನಾದ್ರು ಆಗಿರಬಹುದಾ? ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾರಂಭದಲ್ಲಿ ನಾವು ಮಿಸ್ಸಿಂಗ್ ಕೇಸ್​ ಹಾಕಿದ್ದೇವೆ. ಇವತ್ತು ಅವರು ಬಂದು ದುಡ್ಡು ವಸೂಲಿ ಹಾಗೂ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಮೃತದೇಹ ಸಿಕ್ಕಿದ ನಂತರ ಆತ್ಮಹತ್ಯೆ ಎಂಬುದು ತಿಳಿದುಬರುತ್ತೆ. ಅನಂತರ ನಾವು ಸೆಕ್ಷನ್​ 306ಅನ್ನು ಸೇರಿಸಲು ಅವಕಾಶ ಇರುತ್ತೆ'' ಎಂದು ಎಸ್​ಪಿ ತಿಳಿಸಿದ್ದರು.

ಇದನ್ನೂ ಓದಿ: ಮಡಿಕೇರಿ: ಡೆತ್​ನೋಟ್​ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ

Last Updated : Nov 9, 2023, 8:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.