ETV Bharat / state

ವಿರಾಜಪೇಟೆ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ.. ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಸಕ್ಸಸ್​ - ​ ಈಟಿವಿ ಭಾರತ್​ ಕರ್ನಾಟಕ

ವಿರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ.

ಕಾಡಾನೆ ಸೆರೆ
ಕಾಡಾನೆ ಸೆರೆ
author img

By

Published : Jun 25, 2023, 6:14 PM IST

Updated : Jun 25, 2023, 10:16 PM IST

ಕಾಡಾನೆ ಸೆರೆ ಕಾರ್ಯಾಚರಣೆ

ಕೊಡಗು : ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಂಡಂಗಾಲ ಗ್ರಾಮದ ಬಳಿ 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಇಂದು (ಭಾನುವಾರ) ಸೆರೆ ಹಿಡಿದಿದ್ದಾರೆ. ಕಾಡಾನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಡಿ. ಬಿ ಕುಪ್ಪೆ ಅರಣ್ಯ ವಲಯಕ್ಕೆ ಬಿಡಲು ಅರಣ್ಯ ಇಲಾಖೆ ನಿರ್ಧಾರಿಸಿದೆ.

ಒಂದೇ ತಿಂಗಳಲ್ಲಿ ಬೇರೆ ಬೇರೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಕಾರ್ಮಿಕರ ಮೇಲೆ ದಾಳಿ ಮಾಡಿತ್ತು. ಇದರಿಂದ ಸುತ್ತಲಿನ ಸ್ಥಳೀಯರು ಭಯದಲ್ಲಿ ಜೀವನ ಮಾಡುವಂತಾಗಿತ್ತು. ಇದೀಗ ಕಾಡಾನೆ ಸೆರೆಯಿಂದ ಸ್ಥಳೀಯರಲ್ಲಿ ಆತಂಕ‌ ದೂರವಾಗಿದೆ. ದುಬಾರೆ ಸಾಕಾನೆ ಶಿಬಿರದಿಂದ 3 ಆನೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಸಹಕಾರದೊಂದಿಗೆ ಸತತ ಎರಡು ದಿನಗಳ ಕಾಲ ಕಾವಡಿಗರು, ಮಾವುತರು ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾ ಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ವಿರಾಜಪೇಟೆ ಉಪ ಅರಣ್ಯಾಧಿಕಾರಿ ಬಿ.ಎಂ ಚನ್ನಬಸಪ್ಪ ಅವರು ಮಾತನಾಡಿ, ಕಳೆದ 2 ತಿಂಗಳಿನಿಂದ ಆನೆ ದಾಳಿ ಇಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಸರ್ಕಾರದಿಂದ 2 ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಆದೇಶ ಬಂದಿತ್ತು. ಆದರಂತೆ ನಮ್ಮ ಅರಣ್ಯಾಧಿಕಾರಗಳ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡು ಅಭಿಮನ್ಯು, ಪ್ರಶಾಂತ, ಹರ್ಷ ಸೇರಿದಂತೆ 4 ಸಾಕಾನೆಗಳ ನೆರವಿನಿಂದ 2 ಗಂಟೆ ಸಮಯದಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಹಾಗು ನಮ್ಮ ಮೇಲಾಧಿಕಾರಿಗಳ ನಿರ್ದೇಶನದಂತೆ ರೇಡಿಯೋ ಕಾಲರ್ ಆಳವಡಿಸಿ ಡಿ.ಬಿ ಕುಪ್ಪೆ ಅರಣ್ಯ ವಲಯಕ್ಕೆ ಬಿಡಲಾಗವುದು ಎಂದು ತಿಳಿಸಿದರು.

ಕಾರ್ಯಾಚರಣೆಗೆ ಮೊದಲು ವಿರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕಣ್ಣಂಗಾಲ, ಯಡೂರು, ಹಚ್ಚಿನಾಡು, ಕಾವಾಡಿ, ಕುಂಬೇರಿ, ಪುಲೀಯೇಲಿ, ಹೊಸೂರು, ಸಿದ್ದಾಪುರ, ಇಂಜಲಗೆರೆ, ಅನಂದಪುರ, ಗುಹ್ಯ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ಮತ್ತು ಶಾಲಾ ಮಕ್ಕಳು ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಅಲ್ಲದೆ, ಆನೆ ಕಂಡು ಬಂದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿತ್ತು.

ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ : ಇತ್ತೀಚಿಗೆ ಮಾವಿನ ತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿತ್ತು. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ವೀರಭದ್ರಯ್ಯ ಸಾವನ್ನಪ್ಪಿದ್ದರು. ಇವರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಲೋಕೇಶ್ ಎಂಬುವರ ಮಾವಿನ ತೋಟವನ್ನು ಕಾಯುವ ಕೆಲಸ ಮಾಡುತ್ತಿದ್ದರು. ತೋಟಕ್ಕೆ ಮುಂಜಾನೆ ಆನೆ ದಾಳಿ ನಡೆಸಿದ್ದು, ಈ ವೇಳೆ ವೀರಭದ್ರಯ್ಯ ಸಾವನ್ನಪ್ಪಿದ್ದರು. ಬಳಿಕ, ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ, ಆನೆ ಸೆರೆಗೆ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡವನ್ನು ಕೆರೆತಂದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೂ ಜೂನ್​ 8 ರಂದು ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿತ್ತು.

ಇದನ್ನೂ ಓದಿ : ರಾಮನಗರದಲ್ಲಿ ಮಹಿಳೆಯರಿಬ್ಬರ ಮೇಲೆ ಕಾಡಾನೆ ದಾಳಿ: ಒಬ್ಬರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Last Updated : Jun 25, 2023, 10:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.