ಮಡಿಕೇರಿ: ಲಾಕ್ಡೌನ್ನಿಂದ ಕೆಲಸವಿಲ್ಲದೆ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಕೊಡಗಿನ ಬಡ ಅರ್ಚಕರು ಹಾಗೂ ಸವಿತಾ ಸಮಾಜದವರಿಗೆ ರಾಮಕೃಷ್ಣ ಆಶ್ರಮ ಅಗತ್ಯ ವಸ್ತುಗಳನ್ನು ವಿತರಿಸಿದೆ.
ಇಲ್ಲಿನ ಗೋಣಿಕೊಪ್ಪದ ರಾಮಕೃಷ್ಣ ಶಾರದ ಆಶ್ರಮದ ಭೋದ ಸ್ವರೂಪಾನಂದ ಸ್ವಾಮೀಜಿ, ಬಡವರ ನೆರವಿಗೆ ಧಾವಿಸಿದ್ದಾರೆ. ಬಡ ಅರ್ಚಕರು ಹಾಗೂ ಸವಿತಾ ಸಮಾಜದವರಿಗೆ ಅಗತ್ಯ ದಿನಸಿ ಪದಾರ್ಥ ಸೇರಿದಂತೆ ತರಕಾರಿಗಳನ್ನು ವಿತರಿಸಿದ್ದಾರೆ.
ಇನ್ನು ರೈತರು ಬೆಳೆದ ಕುಂಬಳಕಾಯಿ ಹಾಗೂ ಎಲೆಕೋಸನ್ನು ಖರೀದಿಸಿದ ಸ್ವಾಮೀಜಿ, ಅವುಗಳನ್ನು ನಿರ್ಗತಿಕರಿಗೆ ವಿತರಿಸುತ್ತಿದ್ದಾರೆ.