ಕೊಡಗು: ಇಬ್ಬರು ಹೆಂಡತಿಯರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಬಳಂಜಿಗೆರೆಯಲ್ಲಿ ನಡೆದಿದೆ.
ವಶಿಕಾ ದೇವಿ (27) ಹತ ಮಹಿಳೆ. ಜಾರ್ಖಂಡ್ ಮೂಲದ ದಯಾನಂದ್ ಎಂಬಾತನಿಗೆ ಇಬ್ಬರು ಹೆಂಡತಿಯರಿದ್ದು, ಏಳು ವರ್ಷಗಳ ಹಿಂದೆ ಆಶಿಕಾಳನ್ನು ಮದುವೆಯಾಗಿದ್ದನು. ಒಂದು ವರ್ಷದ ಹಿಂದೆ ವಶಿಕಾಳನ್ನು ಎರಡನೇ ಮದುವೆಯಾಗಿದ್ದನು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ಆಗಾಗ ಜಗಳ ಆಗುತ್ತಿತ್ತು. ಆದರೆ ನಿನ್ನೆ ಕಾಫಿ ತೋಟದಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಇಬ್ಬರ ನಡುವೆ ತರಾಕಕ್ಕೇರಿದೆ. ಕೋಪದಲ್ಲಿ ಆಶಿಕಾ ಕತ್ತಿಯಿಂದ ವಶಿಕಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.