ವಿರಾಜಪೇಟೆ (ಕೊಡಗು): ವಿದ್ಯುತ್ ಸ್ಪರ್ಶದಿಂದ ಹೆಣ್ಣಾನೆ ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು 20 ವರ್ಷ ಪ್ರಾಯದ ಹೆಣ್ಣಾನೆ ಬಲಿಯಾಗಿದೆ. ಮಂಚಳ್ಳಿಯ ಎಂ.ಜಿ. ಕುಶಾ ಬೆಳ್ಳಿಯಪ್ಪ ಎಂಬುವರ ಕಾಫಿ ತೋಟದಲ್ಲಿ ಆನೆ ಸಾವನ್ನಪ್ಪಿದೆ. ಸ್ಥಳಕ್ಕೆ ಶ್ರೀಮಂಗಲ ಎಸಿಎಫ್ ಉತ್ತಪ್ಪ, ಆರ್‌ಎಫ್‌ಒ ವೀರೆಂದ್ರ ಹಾಗೂ ರಾಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.