ETV Bharat / state

ಕೊಡಗು: ನಾಲ್ಕು ತಿಂಗಳ ಗರ್ಭಿಣಿ ಕಾಡಾನೆ ಸಾವು..!

author img

By

Published : Aug 18, 2020, 5:38 PM IST

ಬೈರಂಬಾಡ ಗ್ರಾಮದ ಕಾಫಿ ತೋಟದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಕಾಡಾನೆ ಸಾವನ್ನಪ್ಪಿದೆ.

Elephant death
Elephant death

ಮಡಿಕೇರಿ: ನಾಲ್ಕು ತಿಂಗಳ ಗರ್ಭಿಣಿ ಕಾಡಾನೆಯೊಂದು ಸಾವನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಬೈರಂಬಾಡದಲ್ಲಿ ನಡೆದಿದೆ.

ಬೈರಂಬಾಡ ಗ್ರಾಮದ ಮುಕ್ಕಾಟಿರ ರಂಜನ್ ಅವರ ಕಾಫಿ ತೋಟದಲ್ಲಿ ಎರಡು ದಿನಗಳಿಂದ ಹೆಣ್ಣಾನೆಯೊಂದು ನೋವಿನಿಂದ ನರಳಾಡುತ್ತಿತ್ತು. ಆನೆಗೆ ಚಿಕಿತ್ಸೆ ನೀಡುವ ಸಲುವಾಗಿ ಅರಣ್ಯಾಧಿಕಾರಿಗಳು ತೆರಳಿದ್ದ ಸಂದರ್ಭ ಕಾಡಾನೆ ಸ್ಪಂದಿಸಲಿಲ್ಲ. ನೋವು ತಾಳಲಾರದೆ ತೋಟದ ಹಳ್ಳಕ್ಕೆ ಬಿದ್ದು ಸಾವನಪ್ಪಿದೆ ಎಂದು ಅರಣ್ಯ ಅಧಿಕಾರಿ ರೋಶಿನಿ ತಿಳಿಸಿದ್ದಾರೆ.

ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರಾದ ಮುಜೀಬ್‌ ನಡೆಸಿದ್ದಾರೆ. ಆನೆಯ ಅಂತ್ಯ ಸಂಸ್ಕಾರವನ್ನು ತೋಟದಲ್ಲೇ ನೆರವೇರಿಸಲಾಗಿದೆ. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಮನೋಜ್, ಸಚಿನ್, ಸಂಜಿತ್ ಸೇರಿದಂತೆ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ ಟೀಂ ಪಾಲ್ಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.