ಕೊಡಗು: ಬೆಳ್ಳಂ ಬೆಳಿಗ್ಗೆಯೆ ಕಾಫಿ ತೋಟದ ಮಧ್ಯೆ ಕಾಡಾನೆ ಮರಿಯೊಂದು ಕಾಣಿಸಿಕೊಂಡಿದೆ.
ಸೋಮವಾರಪೇಟೆ ತಾಲೂಕು ನಂಜರಾಜ ಪಟ್ಟಣದ ಬಳಿಯ ಕಾಫಿ ತೋಟದಲ್ಲಿ ಆನೆ ಮರಿ ಪ್ರತ್ಯಕ್ಷವಾಗಿದ್ದು, ಆನೆಯನ್ನು ಕಂಡ ಜನರು ಭಯಭೀತರಾಗಿದ್ದಾರೆ.
ಸದ್ಯ ಕಾಫಿ ಕೊಯ್ಲು ಪ್ರಾರಂಭವಾಗಿರುವುದರಿಂದ ಕಾರ್ಮಿಕರು ತೋಟಕ್ಕೆ ಹೋಗಲು ಹೆದರುತ್ತಿದ್ದು, ಅರಣ್ಯ ಇಲಾಖೆಯವರು, ಆನೆಗಳು ತೋಟಕ್ಕೆ ಲಗ್ಗೆಯಿಡುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.