ETV Bharat / state

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ.. ಗಂಭೀರ ಗಾಯ - ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರಿನಲ್ಲಿ ನಡೆದ ಘಟನೆ

ಕಲಾವತಿ (55) ಕಾಡಾನೆ ದಾಳಿಗೆ ಒಳಗಾದ ಮಹಿಳೆ. ಬೆಳಗ್ಗೆ 8 :15ರ ಸಮಯದಲ್ಲಿ ಮೂವರು ಮಹಿಳೆಯರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗವೊಂದು ದಾಳಿ ಮಾಡಿದೆ.

ಕಾಡಾನೆಗಳನ್ನು ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದರು.
author img

By

Published : Jul 28, 2019, 1:31 PM IST

ಕೊಡಗು: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಕಾಡಾನೆ ಗಂಭೀರವಾಗಿ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ‌.

ಕಾಡಾನೆ ದಾಳಿಗೆ ಗಾಯಗೊಂಡ ಮಹಿಳೆ

ಕಲಾವತಿ (55) ಎಂಬುವರು ಕಾಡಾನೆ ದಾಳಿಗೆ ಒಳಗಾದ ಮಹಿಳೆ. ಬೆಳಗ್ಗೆ 8:15 ರ ಸಮಯದಲ್ಲಿ ಮೂವರು ಮಹಿಳೆಯರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಪರಿಣಾಮ ಆಕೆಯ ತಲೆ ಹಾಗೂ ಕೈ ಕಾಲು ಭಾಗಗಳಿಗೆ ಗಾಯಗಳಾಗಿದ್ದು ಆಕೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಲಾಗಿದೆ.

ಮಹಿಳೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಥವಾ ಮಂಗಳೂರಿಗೆ ಕರೆದೊಯ್ಯುವ ಸಾಧ್ಯತೆಗಳಿವೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾವು ಆನೆಗಳನ್ನು ಹಿಡಿಯುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ನಿಜವಾಗಿಯೂ ಉಪಟಳ ಕೊಡುವ ಆನೆಗಳನ್ನು ಅವರು ಹಿಡಿಯುತ್ತಿಲ್ಲ.‌ ಈ ಭಾಗದಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ವಿಪರೀತವಾಗಿದೆ. ರೈಲ್ವೆ ಬ್ಯಾರಿಕೇಡ್ ಆಮೆ ಗತಿಯಲ್ಲಿ ಆಗುತ್ತಿದೆ. ಪುಂಡಾನೆ ಹಿಡಿಯಲು ಸರ್ಕಾರ ಬಿಡುಗಡೆ ಮಾಡಿರುವ ಹಣ ಏನಾಗುತ್ತಿದೆ‌ ಎಂದು ವಾಲ್ನೂರು ನಿವಾಸಿ ನರೇಂದ್ರ ಅಧಿಕಾರಿಗಳನ್ನು ಕೇಳುತ್ತಿದ್ದಾರೆ.

Intro:ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

ಕೊಡಗು: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ಗಂಭೀರವಾಗಿ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರಿನಲ್ಲಿ ಮುಂಜಾನೆ ನಡೆದಿದೆ‌.
ಕಲಾವತಿ (55) ಕಾಡಾನೆ ದಾಳಿಗೆ ಒಳಗಾದ ಕೂಲಿ ಕಾರ್ಮಿಕ ಮಹಿಳೆ. ಮುಂಜಾನೆ 8:15 ರ ಸಮಯದಲ್ಲಿ ಮೂವರು ಮಹಿಳೆಯರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾ-ಏಕಿ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಪರಿಣಾಮ ಆಕೆಯ ತಲೆ ಹಾಗೂ ಕೈ ಕಾಲು ಭಾಗಗಳಿಗೆ ಗಾಯಗಳಾಗಿದ್ದು ಆಕೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗಳಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಥವಾ ಮಂಗಳೂರು ಕರೆದೊಯ್ಯುವ ಸಾಧ್ಯತೆಗಳಿವೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವು ಆನೆಗಳನ್ನು ಹಿಡಿಯುತ್ತಿದ್ದೇವೆ ಅಂತಾ ಸರ್ಕಾರ
ಹೇಳುತ್ತಿದೆ. ನಿಜವಾಗಿಯೂ ಉಪಟಳ ಕೊಡುವ ಆನೆಗಳನ್ನು ಅವರು ಹಿಡಿಯುತ್ತಿಲ್ಲ.‌ಈ ಭಾಗದಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ವಿಪರೀತವಾಗಿದೆ.ರೈಲ್ವೆ ಬ್ಯಾರಿಕೇಡ್ ಆಮೆ ಗತಿಯಲ್ಲಿ ಆಗುತ್ತಿದೆ. ಪುಂಡಾನೆ ಹಿಡಿಯಲು ಸರ್ಕಾರ ಬಿಡುಗಡೆ ಮಾಡಿರುವ ಹಣ ಏನಾಗುತ್ತಿದೆ‌ ಎನ್ನುತ್ತಾರೆ ವಾಲ್ನೂರು ನಿವಾಸಿ ನರೇಂದ್ರ.

ಬೈಟ್-1 ನರೇಂದ್ರ, ವಾಲ್ನೂರು ನಿವಾಸಿ

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.