ETV Bharat / state

ಸಂತ್ರಸ್ಥರ ಸಂತೈಸಿ 4 ದಿನಕ್ಕೆ ಸುಸ್ತಾದ ಜಿಲ್ಲಾಡಳಿತ: ಮನೆಗೆ ಹಿಂತಿರುಗಿ ಎಂದ ಅಧಿಕಾರಿಗಳು

ಈಗ ನಮ್ಮನ್ನು ಇಲ್ಲಿಂದ ತೆರಳಲು ಹೇಳಿದ್ದಾರೆ. ಆದರೆ ಮತ್ತೆ ಮಳೆ ಹೆಚ್ಚಾಗಿ‌ ಅಪಾಯ ಇದೆ ಪುನಃ ಬನ್ನಿ ಎಂದರೆ ಯಾವುದೇ ಕಾರಣಕ್ಕೂ ನಾವು ಬರುವ ಮಾತೇ ಇಲ್ಲ ಎಂದು 2ನೇ ಮೊಣ್ಣಂಗೇರಿ ಹಾಗೂ ಕುಡಿಹಾರಿದ ಕಲ್ಲು ಗ್ರಾಮದ ಜನತೆ ಹೇಳುತ್ತಿದ್ದಾರೆ.

district administration told go back home to victims
ಮಡಿಕೇರಿಯ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರು
author img

By

Published : Aug 11, 2022, 7:11 PM IST

ಮಡಿಕೇರಿ: ತಾಲ್ಲೂಕಿನ ಗಾಳಿಬೀಡು ಪಂಚಾಯತ್​ಗೆ ಒಳಪಡುವ ಬೆಟ್ಟದ ತಪ್ಪಲಿನ ಪ್ರದೇಶಗಳಾದ 2ನೇ ಮೊಣ್ಣಂಗೇರಿ ಹಾಗೂ ಕುಡಿಹಾರಿದ ಕಲ್ಲು ಗ್ರಾಮದ ಜನರು ಸ್ವಲ್ಪ ಮಳೆ ಬಂದರೂ ಪ್ರಾಣ ಭಯದಲ್ಲೇ ಬದುಕಬೇಕು. ಹಾಗಾಗಿ ಈ ಗ್ರಾಮದ ಜನರನ್ನು ಜಿಲ್ಲಾಡಳಿತ ಮಡಿಕೇರಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಿತ್ತು. ಆದರೆ ಇದೀಗ ಅವರೆಲ್ಲರನ್ನೂ ಏಕಾಏಕಿ ಮನೆಗೆ ತೆರಳುವಂತೆ ಹೇಳಿರೋದು ನಿರಾಶ್ರಿತ ಕೇಂದ್ರದಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಮುಂದೇನು? ಎಂದು ತಿಳಿಯದೆ ಕಂಗಾಲಾಗಿದ್ದಾರೆ.

ಕೊಡಗು ಜಿಲ್ಲೆ, ಮಡಿಕೇರಿ ನಗರದಲ್ಲಿ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಿರಾಶ್ರಿತ ಕೇಂದ್ರವನ್ನು ತೆರೆಯಾಗಿದ್ದು, ಮೊದಲು ಆ ಗ್ರಾಮಗಳ ನಿರಾಶ್ರಿತರು ಯಾವುದೇ ಕಾರಣಕ್ಕೂ ಬರೋದಿಲ್ಲ ಎಂದಿದ್ದರು. ಆದರೆ ಜಿಲ್ಲಾಡಳಿತ ಅವರ ಮನವೊಲಿಸಿ ಮಡಿಕೇರಿಯ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಿತ್ತು. ಮೂವತ್ತು ಕುಟುಂಬದ ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ರೆಡ್​ಕ್ರಾಸ್​ನ ಒಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಿತ್ತು.

ಮಡಿಕೇರಿಯ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರು

10 ದಿನಗಳವರೆಗೆ ಇದೇ ನಿರಾಶ್ರಿತ ಕೇಂದ್ರದಲ್ಲಿ ಇರುವಂತೆಯೂ ಜಿಲ್ಲಾಡಳಿತ ಸೂಚಿಸಿದೆ. ಆದರೆ ಇದೀಗ ಇಂದು ಮಂಜಾನೆ ಮಳೆ ಕಡಿಮೆಯಾಗಿದೆ. ಎಲ್ಲರೂ ಮನೆಗಳಿಗೆ ತೆರಳಿ ಎಂದು ತಿಳಿಸಿದೆ. ಹೀಗಾಗಿ ನಿರಾಶ್ರಿತ ಕೇಂದ್ರದ ಜನತೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮಗೆ ತೆರಳಲು ಸರಿಯಾದ ರಸ್ತೆಯಿಲ್ಲ, ಸೇತುವೆಗಳಿಲ್ಲ, ಶೀಘ್ರವಾಗಿ ಅದನ್ನು ದುರಸ್ಥಿಪಡಿಸುವಂತೆ ಆಗ್ರಹಿಸಿದ್ದಾರೆ. ಈಗ ನಮ್ಮನ್ನು ಇಲ್ಲಿಂದ ತೆರಳಲು ಹೇಳಿದ್ದಾರೆ. ಆದರೆ ಮತ್ತೆ ಮಳೆ ಹೆಚ್ಚಾಗಿ‌, ಅಪಾಯ ಇದೆ ಪುನಃ ಬನ್ನಿ ಎಂದರೆ ಯಾವುದೇ ಕಾರಣಕ್ಕೂ ನಾವು ಬರುವ ಮಾತೇ ಇಲ್ಲ ಎಂದು ಗ್ರಾಮದ ಜನತೆ ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊಂಚಮಟ್ಟಿಗೆ ಮಳೆ ಕಡಿಮೆಯಾಗಿದ್ದು ನಿರಾಶ್ರಿತರನ್ನು ಅವರವರ ಊರುಗಳಿಗೆ ಕಳುಹಿಸುವ ಕೆಲಸ ಆಗುತ್ತಿದೆ. ನಿರಾಶ್ರಿತರ ಒಂದಷ್ಟು ಬೇಡಿಕೆಗಳಿವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಕೇಳಿದ್ದಾರೆ. ಅದನ್ನು ಕೂಡ ಮಾಡಿಕೊಡುವ ಕೆಲಸಕ್ಕೆ ನಮ್ಮ ಇಲಾಖೆ ಸಜ್ಜಾಗಿದೆ‌. ಏನೇ ತೊಂದರೆಗಳಾದರೂ ಇವರೆಲ್ಲರ ಸಹಾಯಕ್ಕೆ ತಕ್ಷಣದಲ್ಲಿ‌ ಸ್ಪಂದಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದಕ್ಕೆ ಪ್ರತ್ಯೇಕವಾಗಿ ಟಾಸ್ಕ್ ಫೋರ್ಸ್ ಇದೆ. ಕಳೆದ ನಾಲ್ಕು ವರ್ಷಗಳಿಂದಲೂ ಇದೇ ರೀತಿಯ ಸಮಸ್ಯೆಗಳಿದ್ದು ಶೀಘ್ರವಾಗಿ ಇವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಕೂಡ ಮುಂದಿನ ದಿನಗಳಲ್ಲಿ ನಡೆಯುತ್ತದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಿರಂತರ ಮಳೆ.. ಕೊಡಗುದಲ್ಲಿ ಮೂರು ವರ್ಷಗಳ ಹಿಂದಿನ ಘಟನೆ ಮರುಕಳಿಸುವ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.