ETV Bharat / state

ಅಪಾಯವನ್ನು ಆಹ್ವಾನಿಸ್ತಿದೆ ಬ್ರಿಟಿಷರ ಕಾಲದ ಟ್ಯಾಂಕ್​: ಅವಘಡಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ!

author img

By

Published : Oct 11, 2019, 11:13 AM IST

Updated : Oct 11, 2019, 3:57 PM IST

ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ವಾಟರ್ ಟ್ಯಾಂಕ್ ಸದ್ಯಕ್ಕೆ ಆಯಸ್ಸು ಕಳೆದುಕೊಂಡಿದೆ.‌ ಈ ಟ್ಯಾಂಕ್‌ನಿಂದಲೇ ನಿತ್ಯ ಮಡಿಕೇರಿಯ ಹಲವು ಬಡಾವಣೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನಿರ್ಮಾಣ ಮಾಡಿ ಸಾಕಷ್ಟು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಅದು ಬೀಳುವ ಹಂತ ತಲುಪಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಬ್ರೀಟಿಷರ ಕಾಲದ ಟ್ಯಾಂಕರ್

ಕೊಡಗು : ಸಿಮೆಂಟ್ ಹೊದಿಕೆಯಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು, ಟ್ಯಾಂಕ್‌ನಿಂದ ಜಿನುಗುತ್ತಿರುವ ನೀರು, ನೆತ್ತಿ ಮೇಲೆ ಯಮನಂತೆ ಅಸ್ತಿತ್ವವಿಲ್ಲದೇ ನಿಂತಿರುವ ಸಾವಿರ ಲೀಟರ್ ನೀರು ಸಾಮರ್ಥ್ಯದ ಬೃಹತ್ ಗಾತ್ರದ ಟ್ಯಾಂಕ್. ಇವೆಲ್ಲವೂ ಕಂಡುಬಂದಿದ್ದು, ನಗರದ ಹೃದಯ ಭಾಗದಲ್ಲಿರುವ ಮಡಿಕೇರಿಯ ಕೋಟೆ ಆವರಣದಲ್ಲಿ.

ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ವಾಟರ್ ಟ್ಯಾಂಕ್ ಆಯಸ್ಸು ಕಳೆದುಕೊಂಡಿದೆ.‌ ಈ ಟ್ಯಾಂಕ್‌ನಿಂದಲೇ ನಿತ್ಯ ಮಡಿಕೇರಿಯ ಹಲವು ಬಡಾವಣೆಗಳಿಗೆ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನಿರ್ಮಾಣ ಮಾಡಿ ಸಾಕಷ್ಟು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಅದು ಬೀಳುವ ಹಂತ ತಲುಪಿದೆ. ಇಷ್ಟೆಲ್ಲ ಆದರೂ ಈ ಟ್ಯಾಂಕ್ ದುರಸ್ತಿ ಮಾಡುವುದಾಗಲಿ ಅಥವಾ ತೆರವು ಗೊಳಿಸುವುದಕ್ಕಾಗಲಿ ಸಾಧ್ಯವಿಲ್ಲದಂತಾಗಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಬ್ರಿಟಿಷರ ಕಾಲದ ಟ್ಯಾಂಕ್

ಇದು ಬ್ರಿಟಿಷರ ಕಾಲದ್ದು. ನಾವು ದುರಸ್ತಿ ಮಾಡುತ್ತೇವೆ ಅಂದರೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಬೇಡ ಎನ್ನುತ್ತಿದ್ದಾರೆ. ನಮ್ಮ ಸುಪರ್ದಿಗಾದರೂ ಕೊಡಿ ಅಂತಾ ಜಿಲ್ಲಾ ಪಂಚಾಯಿತಿಯಿಂದ ಕೇಳಿದ್ದೇವೆ‌. ಹೀಗಾಗಿ ತಿಂಗಳ ಕೊನೆಯಲ್ಲಿ, ನಾವು ಕೋಟೆ ಆವರಣ ಖಾಲಿ‌ ಮಾಡುತ್ತೇವೆ.‌ ಟ್ಯಾಂಕ್‌ನ್ನು ಆದಷ್ಟು ಬೇಗ ದುರಸ್ತಿಗೆ ಮನವಿ ಮಾಡುತ್ತೇವೆ ಅಂತಿದ್ದಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್.

ಈ ಕೋಟೆ ವೀಕ್ಷಣೆಗೆ ನಿತ್ಯ ಹಲವಾರು ಪ್ರವಾಸಿಗರು ಬರುತ್ತಾರೆ. ಅಪಾಯ ಹಂತದಲ್ಲಿರುವ ನೀರಿನ ಟ್ಯಾಂಕ್​ ಯಮಸ್ವರೂಪಿಯಾಗಿ ಬಲಿಗಾಗಿ ಕಾದು ನಿಂತಂತಿದೆ. ಸದ್ಯ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಟ್ಯಾಂಕ್​ ಅಭಿವೃದ್ಧಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಮಾತು.

Intro:ಮಡಿಕೇರಿ ಕೋಟೆ ಆವರಣದಲ್ಲೊಂದು ಯಮರೂಪಿ ವಾಟರ್ ಟ್ಯಾಂಕ್..!

ಕೊಡಗು: ಮಂಜಿನ ನಗರಿ ಮಡಿಕೇರಿ್ ಸೌಂದರ್ಯದ ಜೊತೆಗೆ ರಾಜ-ಮಹಾರಾಜರ ಆಳ್ವಿಕೆಯ ಕೋಟೆಗಳನ್ನೂ ಹೊಂದಿರುವ ಸುಂದರ ಜಿಲ್ಲೆ.‌ ಪ್ರವಾಸಿಗರ ನೆಚ್ಚಿನ ತಾಣ.ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿ ಕೋಟೆ ಆವರಣದಲ್ಲಿ ಯಮರೂಪಿ ವಾಟರ್ ಟ್ಯಾಂಕ್‌ವೊಂದು ಶಿಥಿಲಾವಸ್ಥೆ ತಲುಪಿದ್ದು ಆಗಲೋ..ಈಗಲೊ ಎನ್ನುವ ಸ್ಥಿತಿಯಲ್ಲಿದ್ದು‌ ಪ್ರವಾಸಿಗರೂ ಸೇರಿದಂತೆ ಸ್ಥಳೀಯರಿಗೂ ಭೀತಿ ಮೂಢಿಸಿದೆ..!

ಸಿಮೆಂಟ್ ಹೊಂದಿಕೆಯಿಂದ ಹೊರ ಬಂದಿರುವ ಕಬ್ಬಿಣದ ಸರಳುಗಳು, ಟ್ಯಾಂಕ್‌ನಿಂದ ಜಿನಗುತ್ತಿರುವ ನೀರು, ನೆತ್ತಿ ಮೇಲೆ ಯಮನಂತೆ ಅಸ್ಥಿತ್ವವಿಲ್ಲದೆ ನಿಂತಿರುವ ಸಾವಿರ ಲೀಟರ್ ನೀರು ಸಾಮರ್ಥ್ಯದ ಬೃಹತ್ ಗಾತ್ರದ ಟ್ಯಾಂಕ್....ಇವೆಲ್ಲವೂ ಕಂಡುಬಂದಿದ್ದು ನಗರದ ಹೃದಯ ಭಾಗದಲ್ಲಿರುವ ಮಡಿಕೇರಿಯ ಕೋಟೆ ಆವರಣದಲ್ಲಿ.

ಹೌದು‌...ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಈ ವಾಟರ್ ಟ್ಯಾಂಕ್ ಸಧ್ಯಕ್ಕೆ ಆಯಸ್ಸು ಕಳೆದುಕೊಂಡಿದೆ.‌ ಈ ಟ್ಯಾಂಕ್‌ನಿಂದಲೇ ಪ್ರತಿನಿತ್ಯ ಮಡಿಕೇರಿಯ ಹಲವು ಬಡಾವಣೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದರೆ ನಿರ್ಮಾಣ ಮಾಡಿ ಸಾಕಷ್ಟು ವರ್ಷಗಳು ಕಳೆದಿರುವ ಹಿನ್ನಲೆಯಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಅದು ಬೀಳುವ ಹಂತ ತಲುಪಿದೆ.ಇಷ್ಟೆಲ್ಲ ಆದರೂ ಈ ಟ್ಯಾಂಕ್ ದುರಸ್ತಿ ಮಾಡುವುದಾಗಲಿ ಅಥವಾ ತೆರವು ಗೊಳಿಸುವುದಕ್ಕಾಗಲಿ ಸಾಧ್ಯವಿಲ್ಲದಂತಾಗಿದೆ.

ಇದು ಬ್ರೀಟಿಷರ ಕಾಲದ್ದು. ನಾವು ದುರಸ್ತಿ ಮಾಡುತ್ತೇವೆ
ಅಂದರೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಬೇಡಾ ಎನ್ನುತ್ತಿದ್ದಾರೆ. ಹೋಗ್ಲಿ ನಮ್ಮ ಸುಪರ್ದಿಗಾದರೂ
ಕೊಡಿ ಅಂತಾ ಜಿಲ್ಲಾ ಪಂಚಾಯಿತಿಯಿಂದ ಕೇಳಿದ್ದೇವೆ‌
ಹೀಗಾಗಿ ತಿಂಗಳ ಕೊನೆಯಲ್ಲಿ ನಾವು ಕೋಟೆ ಆವರಣ ಖಾಲಿ‌ ಮಾಡುತ್ತೇವೆ.‌ ಟ್ಯಾಂಕ್‌ಅನ್ನು ಆದಷ್ಟು ಬೇಗ ದುರಸ್ತಿಗೆ ಮನವಿ ಮಾಡುತ್ತೇವೆ ಅಂತಿದ್ದಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್.

ಬೈಟ್-1 ಹರೀಶ್, ಜಿ.ಪಂ ಅಧ್ಯಕ್ಷ.

ಇನ್ನೂ ಕೋಟೆ ಪ್ರವಾಸಿಗರ ಟೂರಿಸ್ಟ್ ಸ್ಪಾಟ್ ಕೂಡ ಆಗಿದೆ. ಹೀಗಾಗಿ ಕೊಡಗಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಕೋಟೆ ವೀಕ್ಷಣೆಗೆ ಭೇಟಿ ಕೊಡುತ್ತಾರೆ.ಪ್ರತಿನಿತ್ಯ ಕೋಟೆಗೆ ಬರುವ ಪ್ರವಾಸಿಗರು ಕೆಲ ಕಾಲ ಸಮಯ ಕಳೆಯುತ್ತಾರೆ.ಕುಟುಂಬ ಸದಸ್ಯರು, ಮಕ್ಕಳೊಂದಿಗೆ ಬರುವ ಪ್ರವಾಸಿಗರು ಈ ಟ್ಯಾಂಕ್ ನಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಕೂಡ ಹೆಚ್ಚಿದೆ. ಹೀಗಾಗಿ ನಿಮ್ಮ ಕಿತ್ತಾಟ ಬಿಡಿ.ಟ್ಯಾಂಕ್ ದುರಸ್ಥಿಮಾಡಿದರೆ ಪ್ರಯೋಜನವಾಗಲ್ಲ.ಅದನ್ನು ಸಂಪೂರ್ಣ ನೆಲಸಮ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸ್ತಿದ್ದಾರೆ.

ಬೈಟ್-2 ರವೀಗೌಡ, ಮಡಿಕೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ

ಒಟ್ಟಿನಲ್ಲಿ ಜಿಲ್ಲಾಡಳಿತ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಗಳ ಜಟಾಪಟಿ ಮಧ್ಯೆ ಸುಂದರ ಪ್ರವಾಸಿ ತಾಣದಲ್ಲಿ ಅಪಾಯವೊಂದು ಕಾದು ನಿಂತಿದ್ದು, ಪರಿಸ್ಥಿತಿ ಕೈ ಮೀರುವ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
Last Updated : Oct 11, 2019, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.