ETV Bharat / state

ಅಸಲಿ ಚಿನ್ನ ಕದ್ದು ಅದೇ ಜಾಗಕ್ಕೆ ನಕಲಿ ಬಂಗಾರ ಇಟ್ಟು ಕೈಚಳಕ.. ಇಬ್ಬರು ಆರೋಪಿಗಳ ಬಂಧನ - etv bharat kannada

ಚಿನ್ನಾಭರಣ ಅಂಗಡಿಗೆ ತೆರಳಿ ಚಿನ್ನ ಕದ್ದಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಅಸಲಿ ಚಿನ್ನ ಕದ್ದು ವಂಚಿಸಿದ್ದ ಇಬ್ಬರ ಬಂಧನ
ಅಸಲಿ ಚಿನ್ನ ಕದ್ದು ವಂಚಿಸಿದ್ದ ಇಬ್ಬರ ಬಂಧನ
author img

By

Published : Jul 11, 2023, 12:06 PM IST

ಕೊಡಗು: ಚಿನ್ನ ಖರೀದಿಸುವ ನೆಪದಲ್ಲಿ ಅಸಲಿ ಚಿನ್ನ ಕದ್ದು ಅದೇ ಜಾಗಕ್ಕೆ ನಕಲಿ ಚಿನ್ನ ಇಟ್ಟು ಜನರಿಗೆ ಮೋಸ ಮಾಡುತ್ತಿದ್ದ ಇಬ್ಬರು ಮಹಿಳಾ ವಂಚಕರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿತರನ್ನು ಚಿತ್ರದುರ್ಗ ಜಿಲ್ಲೆಯ ಪಾಮರಹಳ್ಳಿಯ ಕೈರುನ್ (46) ಹಾಗೂ ಜೈರಾಭಿ (36) ಎಂದು ಗುರುತಿಸಲಾಗಿದೆ. ಬಂಧಿತರಿಂದ 22.34 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಹಿನ್ನೆಲೆ.. ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಥಬೀದಿಯಲ್ಲಿರುವ ಶೀತಲ್ ಚಿನ್ನಾಭರಣದ ಅಂಗಡಿಗೆ ಜೂ.5ರಂದು ಆರೋಪಿಗಳು ಬಂದಿದ್ದರು. ಬುರ್ಖಾ ಧರಿಸಿದ್ದ ಆರೋಪಿಗಳೊಂದಿಗೆ ಓರ್ವ ಯುವಕ ಸಹ ಇದ್ದ. ಯುವಕ ವ್ಯಾಪಾರಿಯನ್ನು ಮಾತನಾಡಿಸುತ್ತ ಗಮನ ಬೇರೆಡೆ ಸೆಳೆದಿದ್ದ. ಈ ವೇಳೆ ಮಹಿಳೆಯರು ಸುಮಾರು 22.4 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿದ್ದರು. ಇವರ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್‍ಪಿ ಆರ್.ವಿ ಗಂಗಾಧರಪ್ಪ, ಕುಶಾಲನಗರ ವೃತ್ತದ ಇಸ್ಪೆಕ್ಟರ್ ಬಿ.ಜಿ ಮಹೇಶ್, ನಗರ ಠಾಣಾಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ. ಅಲ್ಲದೇ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಜಿಲ್ಲಾ ಪೊಲೀಸ್ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂಟಿ ಮನೆ ಮತ್ತು ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ನೋಡಿ ಖದೀಮರು ದುಷ್ಕೃತ್ಯ ಎಸಗುತ್ತಿರುವುದು ಹೆಚ್ಚಾಗಿದೆ. ಹಾಗಾಗಿ ಮನೆ ಮಾಲೀಕರು ಬೀದಿಗಳಲ್ಲಿ ಅನುಮಾನದಿಂದ ಸಂಚಾರ ಮಾಡುವ ವ್ಯಕ್ತಿಗಳ ಮೇಲೆ ನಿಗಾ ಇಟ್ಟು ಸ್ಥಳೀಯ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ಬೆಂಗಳೂರಲ್ಲೂ ಇಂತಹ ಘಟನೆ ನಡೆದಿತ್ತು. ಅಸಲಿ ಚಿನ್ನ ಎಂದು ನಂಬಿಸಿ ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ತಮ್ಮ‌ ಜಮೀನಿನಲ್ಲಿ ಚಿನ್ನ ಸಿಕ್ಕಿದೆ ಎಂದು ಜನರನ್ನು ನಂಬಿಸಿ ವ್ಯಕ್ತಿಯೊಬ್ಬರಿಗೆ ಚಿನ್ನ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಮಂಡ್ಯದ ಸಂತೆಮಳ ಗ್ರಾಮದ ನಿವಾಸಿಗಳಾದ ಅರ್ಜುನ್ ಹಾಗೂ ಮತ್ತೊಬ್ಬನನ್ನು ಬಂಧಿಸಿ, ಅವರಲ್ಲಿದ್ದ 1298 ಗ್ರಾಂ ನಕಲಿ ಚಿನ್ನ ಹಾಗೂ ಒಂದು ಮೊಬೈಲ್ ಫೋನ್ ಜಪ್ತಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ನಕಲಿ ಗೋಲ್ಡ್ ಗ್ಯಾಂಗ್​ನಿಂದ ಮೋಸ ಹೋದಿರಾ ಜೋಕೆ.. ವಂಚಕರ ಬಗ್ಗೆ ದಾವಣಗೆರೆ ಎಸ್​ಪಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.