ಮಡಿಕೇರಿ: ಪುಟ್ಟ ಕಂದಮ್ಮನನ್ನು ಅನಾಥವಾಗಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರ ಹೊರವಲಯದ ಪಂಪ್ ಹೌಸ್ ಬಳಿ ನಡೆದಿದೆ.
ಚೇತನ್ (34), ಪತ್ನಿ ವಾಣಿ (28) ಮೃತ ದಂಪತಿ. ಚೇತನ್ ಮಡಿಕೇರಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಸಲ ಮಾಡುತ್ತಿದ್ದರು. ಕೆಲಸ ಮುಗಿಸಿ ಚೇತನ್ ಊಟಕ್ಕೆಂದು ಮನೆಗೆ ಬಂದಿದ್ದ ವೇಳೆ ಮನೆ ಒಳಗಿನಿಂದ ಮಗು ಅಳುವ ಶಬ್ದ ಕೇಳಿಬಂದಿತ್ತು. ತಕ್ಷಣ ಚೇತನ್ ಬಾಗಿಲು ಒಡೆದು ಒಳನುಗ್ಗಿದಾಗ ವಾಣಿ ನೇಣಿಗೆ ಶರಣಾಗಿದ್ದರು.
ಇದನ್ನು ಕಂಡ ಚೇತನ್ ಪತ್ನಿ ಮೃತದೇಹ ಇಳಿಸಿ ಸ್ವತಃ ಪೊಲೀಸ್ ಠಾಣೆಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ತಿಳಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವ ವೇಳೆಗಾಗಲೇ ಚೇತನ್ ಕೂಡ ಹೆಣವಾಗಿ ಬಿದ್ದಿದ್ದ.
ಇನ್ನು ದಂಪತಿಗಳ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಕುರಿತು ಮಡಿಕೇರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿ ಮಗುವನ್ನು ಅನಾಐವಾಗಿಸಿ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಮನಕಲಕುವಂತಿದೆ.