ಕೊಡಗು (ಮಡಿಕೇರಿ): ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್-ಸಲಿನಾಮ ಕ್ರೈಸ್ತ ದಂಪತಿಯನ್ನು ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮಕ್ಕೆ ಕೇರಳದಿಂದ ಬಂದ ದಂಪತಿ ಗ್ರಾಮದಲ್ಲಿರುವ ಬಡ ವರ್ಗದವರನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ KL-12-N2494 ಕಾರಿನಲ್ಲಿ ಕೇರಳದ ಪಡಿಜ್ಞಾತ ಗ್ರಾಮದ ಕುರಿಯಚ್ಚನ್ ಹಾಗೂ ಸೆಲ್ವಿ ಎಂಬ ದಂಪತಿಗಳು ಕೊಡಗಿನ ಮಂಚಳ್ಳಿ ಗ್ರಾಮಕ್ಕೆ ಬಂದಿದ್ದರು. ದಂಪತಿ ಗ್ರಾಮಕ್ಕೆ ಬಂದು ಮತಾಂತರ ಮಾಡುವ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಂಚಳ್ಳಿ ಗ್ರಾಮದ ಮೂರು ಎಕರೆ ಪೈಸಾರಿ ಕಾಲೋನಿಯ ಪಣಿ ಎರವರ ಮುತ್ತ ಎಂಬವರ ಮನೆಗೆ ಬಂದ ಕೇರಳದ ಮಾನಂದವಾಡಿಯ ಕುರಿಯಚ್ಚನ್ ಹಾಗೂ ಆತನ ಪತ್ನಿ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಕುಟ್ಟಪೊಲೀಸ್ ಠಾಣೆಗೆ ದೂರು ನೀಡಿರುವ ಮುತ್ತ ತಮ್ಮನ್ನು ಮತಾಂತರಗೊಳಿಸಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ. ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ದಂಪತಿ ಯತ್ನಿಸುತ್ತಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ದಂಪತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಓದಿ: ಮೊಮ್ಮಗಳ ಸಾವು: ಜಿ. ಟಿ. ದೇವೇಗೌಡ ಕುಟುಂಬಸ್ಥರ ಭೇಟಿ ಮಾಡಿ ಬಿಜೆಪಿ ನಾಯಕರ ಸಾಂತ್ವನ