ETV Bharat / state

ದುಬೈನಿಂದ ಬಂದವನಿಗೆ ಜ್ವರ... ಕೊಡಗಿನಲ್ಲೂ ಕೊರೊನಾ ಭೀತಿ

ವಿಶ್ವದೆಲ್ಲೆಡೆ ತಲ್ಲಣ ಉಂಟು ಮಾಡಿರುವ ಕೊರೊನಾ ವೈರಸ್​ ಪ್ರವಾಸಿ ಹಾಗೂ ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲೂ ಆತಂಕ ಸೃಷ್ಟಿಸಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Coronavirus threat in kodagu
ಕೊಡಗಿನಲ್ಲೂ ಕೊರೊನಾ ವೈರಸ್​ ಭೀತಿ
author img

By

Published : Mar 13, 2020, 12:29 PM IST

ಕೊಡಗು: ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ರಾಜ್ಯದಲ್ಲಿ ಅಷ್ಟೇ ಅಲ್ಲ ಪ್ರವಾಸಿ ಹಾಗೂ ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲೂ ಆತಂಕಕ್ಕೆ ಕಾರಣವಾಗಿದೆ.

ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕೊಡಗಿಗೆ ಪ್ರವಾಸಿಗರು ನಿತ್ಯ ಬಂದು ಹೋಗುತ್ತಾರೆ. ಅದರಲ್ಲೂ ಕೊಡಗಿನಿಂದ ಕೇರಳಕ್ಕೆ ಸಾವಿರಾರು ಜನರು ಹಲವು ವ್ಯವಹಾರಗಳಿಗೆ ಹೋಗಿ ಬರುತ್ತಾರೆ. ಆದರೆ ಕೇರಳದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರೂ ಮುಕ್ತವಾಗಿ ಜನರು ಕೇರಳಕ್ಕೆ ಬಂದು ಹೋಗುತ್ತಿದ್ದಾರೆ.

ಜೊತೆಗೆ ದುಬೈಗೆ ಹೋಗಿ ಬಂದಿದ್ದ ವ್ಯಕ್ತಿ ಕೂಡ ನಿನ್ನೆಯಿಂದ ಜ್ವರದಿಂದ ಬಳಲುತ್ತಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.