ETV Bharat / state

26 ವರ್ಷದ ವ್ಯಕ್ತಿಗೆ ಕೊರೊನಾ ದೃಢ: ಕೊಡಗು ಜಿಲ್ಲಾಧಿಕಾರಿ ಸ್ಪಷ್ಟನೆ

ಬರೋಬ್ಬರಿ 60 ದಿನಗಳು ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಗೆ ಮುಂಬೈ ಕಂಟಕವಾಗಿ ಪರಿಣಮಿಸಿದೆ. ಮುಂಬೈನಿಂದ ಬಂದ 26 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ.

chikkamagaluru
ಜಿಲ್ಲಾಧಿಕಾರಿ
author img

By

Published : May 24, 2020, 6:44 PM IST

ಕೊಡಗು: ಮುಂಬೈನಿಂದ ಕೊಡಗಿಗೆ ಬಂದಿದ್ದ 26 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಮೇ 19ರ ರಾತ್ರಿ 11 ಗಂಟೆಗೆ ಮುಂಬೈನಿಂದ ವಿಶೇಷ ರೈಲಿನಲ್ಲಿ ಹೊರಟು ಮರುದಿನ ಬೆಳಗ್ಗೆ ಮಂಗಳೂರು ರೈಲ್ವೆ ನಿಲ್ದಾಣ ತಲುಪಿದ್ದರು. ಪಿ 2003 ಸೋಂಕಿತ ವ್ಯಕ್ತಿ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ನೇರವಾಗಿ ಇಬ್ಬರೊಂದಿಗೆ ಖಾಸಗಿ ಕಾರಿನಲ್ಲಿ ಕೊಡಗಿನ ಚೆಕ್ ಪೋಸ್ಟ್ ಸಂಪಾಜೆಗೆ ಬಂದಿದ್ದರು.

ಬ್ಯಾಂಕ್ ಉದ್ಯೋಗಿಯಾಗಿರುವ ಸೋಂಕಿತನನ್ನು ಮುಂಬೈನಿಂದ ಬಂದಿದ್ದ ಕಾರಣದಿಂದ ಸಂಪಾಜೆ ಚೆಕ್ ಪೋಸ್ಟ್​ನಿಂದ ಮಡಿಕೇರಿಯಲ್ಲಿರುವ ಕೊಡಗು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ವರದಿಯಲ್ಲಿ ವ್ಯಕ್ತಿಗೆ ಸೋಂಕು ಇರುವುದು ದೃಢವಾಗಿದೆ.

ಸದ್ಯ ಮಡಿಕೇರಿ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯನ್ನು ನೇರವಾಗಿ ಆಸ್ಪತ್ರೆಗೆ ಕರೆತಂದಿದ್ದರಿಂದ ಯಾವುದೇ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಆದರೆ, ಮುಂಬೈನಿಂದ ಬಂದ ವಿಶೇಷ ರೈಲು ಕೇರಳದ ತ್ರಿಶೂರ್‌ಗೆ ಹೋಗಿದ್ದರು. ವ್ಯಕ್ತಿಯ ಪ್ರಯಾಣಿಸಿದ ಬಗ್ಗೆ ಕೇರಳ ಮತ್ತು ಮುಂಬೈ ಎರಡು ಕಡೆಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.