ETV Bharat / state

25 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಗೆಲುವಿನ ನಗೆಬೀರಿದ ಕಾಂಗ್ರೆಸ್ - Kodagu BJP stronghold for 25 years

ಕಳೆದ 25 ವರ್ಷಗಳಿಂದ ಸೋಲನ್ನೇ ಕಂಡಿರದ ಬಿಜೆಪಿ ಅಭ್ಯರ್ಥಿಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳು ಈ ಬಾರಿ ಸೋಲಿನ ರುಚಿ ತೋರಿಸಿದ್ದಾರೆ.

Congress Candidates who won
ಕಾಂಗ್ರೆಸ್​ನ ಗೆದ್ದ ಅಭ್ಯರ್ಥಿಗಳು
author img

By

Published : May 16, 2023, 2:18 PM IST

Updated : May 16, 2023, 4:56 PM IST

25 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಗೆಲುವಿನ ನಗೆಬೀರಿದ ಕಾಂಗ್ರೆಸ್

ಕೊಡಗು: 25 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಎರುಡು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪಕ್ಷ ಗೆಲುವಿನ ನಗೆಬೀರಿದೆ. 2023ರ ಚುನಾವಣೆಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಕನಸು ಹೊತ್ತಿದ್ದ ಶಾಸಕದ್ವಯರಿಗೆ ಕೊಡಗಿನಲ್ಲೇ ಸೋಲಿನ ರುಚಿ ತೋರಿಸಿದ್ದು ಮಾತ್ರ ಕೈ ನಾಯಕರು. ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ.

ಈ ಮೂಲಕ ಕೊಡಗಿನಲ್ಲಿ ಬಿಜೆಪಿಯ 20 ವರ್ಷಗಳ ಆಡಳಿತ ಅಂತ್ಯ ಕಂಡಿದೆ. ಕೊಡಗಿನಲ್ಲಿ ಕೊನೆಗೂ ಕಮಲ ಮುದುಡಿದೆ.‌ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ 5 ಬಾರಿ ಗೆಲವು ಸಾದಿಸಿದ್ದರು. 1994 ಹಾಗೂ 1999 ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದ ರಂಜನ್ 2004ರಲ್ಲಿ ಸೋಲು ಕಂಡಿದ್ದರು. ನಂತರ 2008, 2013 ಹಾಗೂ 2018 ರಲ್ಲಿ ಮೂರು ಬಾರಿ ಕೂಡ ರಂಜನ್ ಜಯ ಗಳಿಸಿ ಗೆಲುವಿನ ನಗೆ ಬೀರಿದ್ದರು. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಕಾಂಗ್ರೆಸ್​ನ ಡಾ. ಮಂತರ್ ಗೌಡ 4,402 ಮತಗಳಿಂದ ಜಯಗಳಿಸಿದ್ದಾರೆ. ರಂಜನ್ 80,477 ಮತಗಳನ್ನು ಪಡೆದರೆ ಮಂತರ್ ಗೌಡ 84,879 ಮತಗಳನ್ನು ಪಡೆದಿದ್ದಾರೆ.

ಇನ್ನೂ ವಿರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ ಬೊಪ್ಪಯ್ಯ ಸತತ ಮೂರು ಬಾರಿ ಜಯಗಳಿಸಿದ್ದರು. 2008, 2013, 2018 ರಲ್ಲಿ ಜಯಗಳಿಸಿ 2023ರ ಚುನಾವಣೆಯಲ್ಲಿ ಸೋಲನ್ನು ‌ಕಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಎ.ಎಸ್​.ಪೊನ್ನಣ್ಣ 4,291 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಕೆಜಿ ಬೋಪಯ್ಯ 79,500 ಮತಗಳನ್ನು ಪಡೆದರೆ ಎ.ಎಸ್​.ಪೊನ್ನಣ್ಣ 83,791 ಮತಗಳನ್ನು ಪಡೆದುಕೊಂಡು ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದೆ.

ಕೊಡಗಿನ ಜನತೆ ಜಾತಿ ರಾಜಕಾರಣದ ಲೆಕ್ಕಾಚಾರ ಹಾಕಿದರೆ, ಇಷ್ಟು ವರ್ಷ ವಿರಾಜಪೇಟೆಯಿಂದ ಬೋಪಯ್ಯ ಮಡಿಕೇರಿಯಿಂದ ರಂಜನ್ ಗೆಲುವು ಸಾಧಿಸುತ್ತಿರಲಿಲ್ಲ. ಇದೇ ಲೆಕ್ಕಾಚಾರದಲ್ಲಿ ಇಬ್ಬರು ಕೂಡ ಮತ್ತೆ ಸ್ಪರ್ಧೆ ಮಾಡಿದ್ದರು. ಆದರೆ ಕೊಡಗಿನ ಜನತೆ ನಾಯಕರಲ್ಲಿ ಬದಲಾವಣೆ ಬಯಸಿತ್ತು. ಆದರೂ ಹೈಕಮಾಂಡ್ ಇವರಿಗೆ ಮಣೆ ಹಾಕಿದ್ದು ಎಲ್ಲೋ ಒಂದು ಕಡೆ ಬಿಜೆಪಿಯ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕೊಡಗಿನ ಎರಡು ಕ್ಷೇತ್ರಗಳು ಕಾಂಗ್ರೆಸ್​ ತೆಕ್ಕೆಗೆ: 25 ವರ್ಷಗಳ ರಾಜಕೀಯಕ್ಕೆ ಸೋಲಿನ ರುಚಿ ತೋರಿಸಿದ ಕಾಂಗ್ರೆಸ್​ನ ಹೊಸ ಮುಖಗಳು ಕೊಡಗಿನಲ್ಲಿ ಗೆಲವು ಸಾಧಿಸಿಸಿರುವುದು ಅಚ್ಚರಿಯ ವಿಷಯವಾಗಿದೆ. ಕೊಡಗಿನಲ್ಲಿ ಕಳೆದ 20/25 ವರ್ಷದಿಂದ ಕಾಂಗ್ರೆಸ್​ ಗೆದ್ದ ಉದಾಹರಣೆಯೇ ಇಲ್ಲ. ಆದರೆ ಈ ಬಾರಿ ಕೊಡಗಿನಲ್ಲಿ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಕೂಡ ಕೈ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ, ಕೊಡಗಿನಲ್ಲಿ ಇತಿಹಾಸ ಸೃಷ್ಟಿಸಿದೆ‌. ಕೊಡಗಿನಿಂದ ಘಟಾನುಘಟಿ ನಾಯಕರು ಸ್ಪರ್ಧಿಸಿದ್ರು ಕೂಡ ಕೊನೆಯ ಹಂತದ ಬಿಜೆಪಿ ಸ್ಟ್ರಾಟಜಿಯಲ್ಲಿ ಸೋಲಬೆಕಾಗಿತ್ತು. ಆದರೆ ಈ ಬಾರಿ‌ ಬಿಜೆಪಿಯ ಲೆಕ್ಕಾಚಾರ ಎಲ್ಲ ಕೂಡ ಬುಡಮೇಲಾಗಿದೆ.

ವಿರಾಜಪೇಟೆ ಕ್ಷೇತ್ರದಿಂದ ಹೈಕೋರ್ಟ್ ವಕೀಲರಾದ ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಡಾ. ಮಂತರ್ ಗೌಡ ಹೊಸದಾಗಿ ಅದೃಷ್ಟ ಪರಿಕ್ಷೇಗೆ ಇಳಿದಿದ್ದು, ಮೊದಲ ಎಂಎಲ್ಎ ಚುನಾವಣೆಯಲ್ಲಿ ಗೆಲುವಿನ ನಗಾರಿ ಬಾರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಪೊನ್ನಣ್ಣ ಹಾಗೂ ಮಂತರ್ ಜಿಲ್ಲೆಯ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನರ ಮನೆ ಮಾತಾಗಿದ್ದರು. ಅದರಲ್ಲೂ ಮಂತರ್ ಗೌಡ ಕಳೆದ ಎಂಎಲ್​ಸಿ ಚುನಾವಣೆಯಲ್ಲಿ ಮಿಂಚಿನ ಸಂಚಲನ ನಡೆಸಿ ಕಡಿಮೆ ಅಂತರದ ಸೋಲು ಕಂಡಿದ್ರು. ಹಾಗೆ ಕೊಡಗಿನಲ್ಲಿ ಮಂತರ್ ಹವಾ ಸೃಷ್ಟಿಸಿದ್ದಲ್ಲದೇ ಬಿಜೆಪಿ ಪಾಳಯಕ್ಕೆ ಬಿಗ್ ಶಾಕ್ ಕೂಡ ನೀಡಿದ್ದರು.

ಒಟ್ಟಿನಲ್ಲಿ ಕಳೆದ ಹಲವು ಚುನಾವಣೆಯಲ್ಲಿ ಕೊಡಗು ಹಿಂದುತ್ವದ ಆಧಾರದಲ್ಲೇ ಚುನಾವಣೆಗೆ ಇಳಿದಿತ್ತು. ಈ ಬಾರಿಯೂ ಅದೇ ಸ್ಟ್ರಾಟಜಿಗೆ ಕೂಡ ಮುಂದಾಗಿತ್ತು. ಆದರೆ ಕಾಂಗ್ರೆಸ್ ಮಾತ್ರ ಜಾತಿ ರಾಜಕಾರಣ ಲೆಕ್ಕಾಚಾರಕ್ಕೆ ಇಳಿದಂತೆ ಕಂಡು ಬಂದಿದ್ದು, ಕೊಡವ ಮತದಾರರು ಹೆಚ್ಚಿರುವ ಕಡೆ ಎ.ಎಸ್ ಪೊನ್ನಣ್ಣ ಇದ್ದರೆ, ಗೌಡ ಮತದಾರರೇ ಹೆಚ್ಚಿರುವ ಕಡೆ ಗೌಡ ಅಭ್ಯರ್ಥಿಯನ್ನು ಕಣಕಿಳಿಸುವ ಮೂಲಕ ಹೊಸ ಐಡಿಯಾ ಪ್ರಯೋಗಿಸುವ ಮೂಲಕ ಕೊಡಗನ್ನು ಕೈ ವಶಮಾಡಿಕೊಂಡಿದಂತೂ ಸತ್ಯ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಮಯದಲ್ಲಿ‌ ಕೊಡಗಿನ ಜನರು ಮೊಟ್ಟೆ ಎಸೆಯುವ ಮೂಲಕ ಅವಮಾನ ಮಾಡಿದ್ದರು. ಅಂದು ಸಿದ್ದರಾಮಯ್ಯ ಕೊಡಗಿನಲ್ಲಿ ನಾವು ಗೆಲ್ಲುತ್ತೇವೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದರು. ಇಂದು 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಕಾಂಗ್ರೆಸ್ ಪೆಟ್ಟುಕೊಟ್ಟಿದೆ.

ಇದನ್ನೂ ಓದಿ: ಐತಿಹಾಸಿಕ ಗೆಲುವು ದಾಖಲಿಸಿದ ಮಂಕಾಳು ವೈದ್ಯ: ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಪಟ್ಟು

Last Updated : May 16, 2023, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.