ETV Bharat / state

ಅಕಾಲಿಕ ಮಳೆಗೆ ಕಾಫಿ ಬೆಳೆ ನಷ್ಟ: ಸರ್ವೆ ಎಡವಟ್ಟಿಂದ ಕೈ ತಪ್ಪಿದ ಪರಿಹಾರ

author img

By

Published : Oct 14, 2020, 6:58 PM IST

ಕಾಫಿ ಮಂಡಳಿ ಅಧಿಕಾರಿಗಳು, ನಷ್ಟ ಅನುಭವಿಸಿರುವ ನೂರಾರು ರೈತರ ಸಾವಿರಾರು ಎಕರೆ ಕಾಫಿ ತೋಟವನ್ನು ಸರ್ವೆ ಮಾಡದೆ ಕೈಬಿಟ್ಟಿದ್ದಾರೆ. ಇದು ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರನ್ನು ಸಿಟ್ಟಿಗೇಳಿಸಿದೆ. ಮತ್ತೊಮ್ಮೆ ಸರ್ವೆ ಮಾಡಿ ಕೂಡಲೇ ಪರಿಹಾರ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

coffee
coffee

ಕೊಡಗು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಕ್ಕೆ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ. ವಿಪರೀತ ‌ಮಳೆ, ಭೂ ಕುಸಿತದಿಂದ ಇಲ್ಲಿನ ಕಾಫಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವರ್ಷವೂ ಆಗಸ್ಟ್ ನಂತರ ಸುರಿಯುತ್ತಿರುವ ಅಕಾಲಿಕ ಮಳೆ ಹಾಗೂ ಪ್ರತಿಕೂಲ ವಾತಾವರಣದ ನಡುವೆ ಮತ್ತಷ್ಟು ಆರ್ಥಿಕವಾಗಿ ಜರ್ಝರಿತರಾಗುವಂತೆ ಮಾಡಿದೆ.

ಮಳೆಗೆ ಕಾಫಿ ಬೆಳೆ ನಷ್ಟ

ಬೆಳೆ ಪರಿಹಾರ ವಿಮೆ ನಷ್ಟದಡಿ ಸರ್ಕಾರದಿಂದ ಸಿಗುವ ಪರಿಹಾರದ ಹಣವಾದರೂ ಸಿಗಬಹುದೆಂದರೆ ಕಾಫಿ ಮಂಡಳಿ ಅಧಿಕಾರಿಗಳು ನಷ್ಟ ಅನುಭವಿಸಿರುವ ನೂರಾರು ರೈತರ ಸಾವಿರಾರು ಎಕರೆ ಕಾಫಿ ತೋಟವನ್ನು ಸರ್ವೆ ಮಾಡದೆ ಕೈಬಿಟ್ಟಿದ್ದಾರೆ. ಇದು ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರನ್ನು ಸಿಟ್ಟಿಗೇಳಿಸಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಎಮ್ಮೆತಾಳು ಮೇಘತಾಳು ಸೇರಿದಂತೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಐದುನೂರಕ್ಕೂ ಹೆಚ್ಚು ಕಾಫಿ ಬೆಳೆಗಾರರ ಕಾಫಿ ತೋಟಗಳನ್ನು ಸರ್ವೆಯಿಂದ ಕೈಬಿಡಲಾಗಿದೆ. 2018ರಲ್ಲಿ ಭಾರೀ ಭೂಕುಸಿತವಾಗಿ ಬಹುತೇಕ ತೋಟಗಳೆ ಕೊಚ್ಚಿ ಹೋಗಿದ್ದವು. ಈ ಬಾರಿ ಜಡಿ ಮಳೆ ಸುರಿದಿದ್ದರಿಂದ ಇಡೀ ಕಾಫಿ ಹಣ್ಣುಗಳು ಉದುರಿ ಹೋಗಿವೆ. ಈಗ ಕೇವಲ ಗಿಡಗಳು ಮಾತ್ರವೇ ನಿಂತಿವೆ. ಹೀಗಾಗಿ ಸರ್ವೆಯಿಂದ ಹೊರಗೆ ಉಳಿದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳೆ ಚೆನ್ನಾಗಿ ಬಂದಿದ್ದರೆ ಒಂದು ಗಿಡದಲ್ಲಿ ಕನಿಷ್ಠ 10 ಕೆ.ಜಿ ಕಾಫಿ ಕೊಯ್ಯುತಿದ್ದೆವು. ಆದರೆ ಈ ಬಾರಿ ಸುರಿದ ಮಳೆಗೆ ಕಾಲು ಕೆ.ಜಿ ಕಾಫಿ ಹಣ್ಣು ಕೊಯ್ಯವುದೂ ಕಷ್ಟವಾಗಿದೆ. ಆದರೆ ಅಧಿಕಾರಿಗಳು ಮಳೆ ಪ್ರಮಾಣವನ್ನು ಸರಿಯಾಗಿ ವಿಚಾರಿಸದೆ ಎಲ್ಲೋ ಕುಳಿತು ಅವೈಜ್ಞಾನಿಕವಾಗಿ ಸರ್ವೆ ಮಾಡಿದ್ದಾರೆ. ಹೀಗಾಗಿ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಗ್ರಾಮಗಳ ಐದುನೂರಕ್ಕೂ ಹೆಚ್ಚ ಕಾಫಿ ಬೆಳೆಗಾರರು ಸರ್ವೆಯಿಂದ ಕೈತಪ್ಪಿದ್ದಾರೆ. ಮಳೆಯಿಂದ ಸಂಪೂರ್ಣ ನಷ್ಟ ಅನುಭವಿಸಿದ್ದು ಕನಿಷ್ಠ ಸರ್ಕಾರದ ಪರಿಹಾರವನ್ನು ಪಡೆಯಲು ಅಧಿಕಾರಿಗಳು ತಪ್ಪಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ಸರ್ವೆ ಮಾಡಿ ಕೂಡಲೇ ಪರಿಹಾರ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.