ಕೊಡಗು : ಕುಶಾಲನಗರ ತಾಲೂಕು ಉದ್ಘಾಟನೆಗೆ ತೆರಳಿದ್ದ ಕಂದಾಯ ಸಚಿವ ಆರ್. ಅಶೋಕ್ ಎದುರು ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ಉಂಟಾಗಿದ್ದು, ಸಚಿವರು ಮತ್ತು ಸಂಸದ ಪ್ರತಾಪ್ ಸಿಂಹ ಗಲಾಟೆ ಬಿಡಿಸಲು ಮುಂದಾದರೂ ಕೂಡ ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ತಾಲೂಕು ಬೇಕು ಅಂತಾ ಹೋರಾಟ ಮಾಡಿದ್ದು ನಾವು. ಆದರೆ, ಕಾರ್ಯಕ್ರಮಕ್ಕೆ ಯಾವ ಕಾಂಗ್ರೆಸ್ ನಾಯಕರನ್ನೂ ಕರೆದಿಲ್ಲ ಎಂದು ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದಾದ ನಂತರ ಪೊಲೀಸರು ಬಲವಂತವಾಗಿ ಕಾಂಗ್ರೆಸ್ ನಾಯಕರನ್ನು ಕಾರ್ಯಕ್ರಮದಿಂದ ಹೊರಗೆ ಎಳೆದು ಹಾಕಿದ ಘಟನೆ ನಡೆಯಿತು. ಕುಶಾಲನಗರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ. ಪಿ. ಶಶಿಧರ್, ಕಾಂಗ್ರೆಸ್ ಕಾರ್ಯಕರ್ತೆ ಶಶಿರೇಖ ಮತ್ತು ಕಾರ್ಯಕರ್ತರನ್ನು ಕಾರ್ಯಕ್ರಮದಿಂದ ಹೊರ ಹಾಕಲಾಯಿತು. ನಂತರ ಕಾಂಗ್ರೆಸ್ ನಾಯಕರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು.
ಸಚಿವ ಆರ್. ಅಶೋಕ್ ಎದುರು ಹೈಡ್ರಾಮಾ
ತಾಲೂಕು ಹೋರಾಟ ಸಮಿತಿಯನ್ನು ಕರೆದಿಲ್ಲ ಎಂದು ಕಾರ್ಯಕ್ರಮದಲ್ಲಿ ಸಚಿವರನ್ನು ಕೇಳಿದ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರು ನಿಮ್ಮನ್ನು ಏಕೆ ಕರೆಯಬೇಕು? ಎಂದು ಪ್ರಶ್ನೆ ಮಾಡಿದ ಕಾರಣ ಗಲಾಟೆ ಆರಂಭವಾಗಿದೆ. ನಂತರ ವೇದಿಕೆ ಎದುರು ಜಮಾಯಿಸಿದ ಹೋರಾಟ ಸಮಿತಿ ಕಾರ್ಯಕರ್ತರು ಪರ-ವಿರೋಧ ಕೂಗು ಎಂದು ಕೂಗಾಡಿದ್ರು. ನಂತರ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
ಓದಿ: ಕೇಂದ್ರ ಸಂಪುಟ ವಿಸ್ತರಣೆ.. ಬನ್ನಿ ಅಂತಾ ಕರೆದಾರ್, ಜುಲೈ 8ಕ್ಕೆ ದೆಹಲಿಗೆ ಹೋಗ್ತೀನಿ.. ರಮೇಶ್ ಜಿಗಜಿಣಗಿ