ಮಡಿಕೇರಿ: ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗಡಿ ಭಾಗದಲ್ಲಿಯೇ ಕಹಿ ಅನುಭವ ಆಗಿದೆ. ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದೆ. ಎರಡೂ ಕಡೆಯವರಿಂದಲೂ ಘೋಷಣೆಗಳು ಮೊಳಗಿದ್ದು ತಿಮ್ಮಯ್ಯ ಸರ್ಕಲ್‌ನಲ್ಲಿ ಹೈಡ್ರಾಮವೇ ಜರುಗಿತು.
ಮೊಟ್ಟೆ ಎಸೆತ: ಸಿದ್ದರಾಮಯ್ಯ ಸಂಚರಿಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕಾರಿನ ಮೇಲೆ ಮೊಟ್ಟೆ ಎಸೆದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಗೋ ಬ್ಯಾಕ್ ಪೋಸ್ಟರ್: ಕೊಡಗಿನಲ್ಲಿ ಹಿಂದೂಗಳ ನರಮೇಧ ನಡೆಸಿದ ಟಿಪ್ಪುವಿನ ಶಿಷ್ಯ ಸಿದ್ದು ಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ ಎಂಬೆಲ್ಲಾ ನಾಮಫಲಕ ಹಿಡಿದು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ಆನೆ ಚೌಕೂರು ಗೇಟ್ ಬಳಿ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಇದೇ ವೇಳೆ ಬಿಜೆಪಿಗರ ಆಕ್ರೋಶದ ಕೂಗೂ ಸಹ ಕೇಳಿಸಿತು. ಪ್ರತಿಪಕ್ಷ ನಾಯಕ ಸಾಗುವ ತಿತಿಮತಿ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ಇದನ್ನು ಓದಿ: ನಾವು ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.. ಸಚಿವ ಶ್ರೀರಾಮುಲು